ಕನ್ನಡ ಚಿತ್ರರಂಗದ ಕ್ರೇಜಿ ಕ್ವೀನ್ ಖ್ಯಾತಿಯ ನಟಿ ರಕ್ಷಿತಾ ಪ್ರೇಮ್ ಬುಧವಾರ ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು. ಕೋವಿಡ್ ಆತಂಕದಿಂದಾಗಿ, ಕಳೆದ ಬಾರಿಯಂತೆ ಈ ಬಾರಿಯೂ ರಕ್ಷಿತಾ, ತಮ್ಮ ಪತಿ ಪ್ರೇಮ್, ಪುತ್ರ ಸೇರಿದಂತೆ ಕುಟುಂಬ ವರ್ಗದೊಂದಿಗೆ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಇನ್ನು ಬರ್ತ್‌ಡೇ ಸಂಭ್ರಮದಲ್ಲಿದ್ದ ನಟಿ ರಕ್ಷಿತಾಗೆ ಚಿತ್ರರಂಗದ ಕಡೆಯಿಂದ ಅನೇಕ ಗಣ್ಯರು ಶುಭ ಹಾರೈಸಿದರು.
ಇದನ್ನೂ ಓದಿ:ಪುನೀತ್ ರಾಜಕುಮಾರ್ ರ ‘ಯುವರತ್ನ’ ಇಂದು ತೆರೆಗೆ
ಟ್ವಿಟ್ಟರ್‌ನಲ್ಲಿ ರಕ್ಷಿತಾಗೆ ಶುಭ ಹಾರೈಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, “ಹುಟ್ಟುಹಬ್ಬದ ಶುಭಾಶಯಗಳು. ಪ್ರತಿವರ್ಷ ಜನ್ಮದಿನಗಳು ಬರುತ್ತವೆ, ಆದರೆ ನಿಮ್ಮಂತಹ ಸ್ನೇಹಿತರು ಒಮ್ಮೆ ಮಾತ್ರ ಬರುತ್ತಾರೆ. ಹುಟ್ಟುಹಬ್ಬದ ಶುಭಾಶಯಗಳು ಕ್ರೇಜಿ ಕ್ವೀನ್’ ಎಂದು ರಕ್ಷಿತಾ ಜೊತೆಗೆ ಇರುವ ಫೋಟೋವನ್ನು ಶೇರ್ ಮಾಡಿ ವಿಶ್ ಮಾಡಿದ್ದಾರೆ.
ನಟಿ ಕಂ ರಾಜಕಾರಣಿ ರಮ್ಯಾ ಕೂಡ ರಕ್ಷಿತಾಗೆ ಸಾಮಾಜಿಕ ಜಾಲತಾಣದ ಮೂಲಕ ಶುಭ ಹಾರೈಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ರಕ್ಷಿತಾ ಜೊತೆ ಇರುವ ಫೋಟೋವನ್ನು ಶೇರ್ ಮಾಡಿರುವ ರಕ್ಷಿತಾ, “ಜನ್ಮದಿನದ ಶುಭಾಶಯಗಳು ರಕ್ಷಿತಾ ಪ್ರೇಮ್. ನನ್ನ ಸಿನಿ ಪಯಣ ನೀವಿಲ್ಲದೆ ಪೂರ್ಣವಾಗಲ್ಲ. ಆ ದಿನಗಳು ತುಂಬಾ ಫನ್ ಮತ್ತು ಡ್ರಾಮಗಳಿಂದ ತುಂಬಿತ್ತು. ಅದ್ಭುತವಾದ ದಿನ ನಿಮ್ಮದಾಗಲಿ’ ಎಂದು ಬರೆದುಕೊಂಡಿದ್ದಾರೆ.