Advertisement

ಆರೋಗ್ಯವಂತ ಮಗುವಿಗೆ ಜನ್ಮ

12:04 PM May 09, 2017 | |

ಬೆಂಗಳೂರು: ಚಿಕ್ಕ ವಯಸ್ಸಿನಿಂದಲೇ ಥಲಸ್ಸೇಮಿಯಾ ಸಮಸ್ಯೆಯಿಂದ ಬಳಲುತ್ತಿರುವ ತಮಿಳುನಾಡು ಮೂಲದ ಮುಮ್ತಾಜ್‌ ಸೂರ್ಯ ಎಂಬುವರು ಆರೋಗ್ಯವಂತ ಮಗುವಿಗೆ ಜನನ ನೀಡಿ, ವೈದ್ಯಕೀಯ ಲೋಕದಲ್ಲೇ ಹೊಸ ಭರವಸೆ ಮೂಡಿಸಿದ್ದಾರೆ.

Advertisement

ಈ ಸಂಬಂಧ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಾರಾಯಣ ಹೆಲ್ತ್‌ ಸಿಟಿಯ ಬೋನ್‌ ಮಾರೋ ಟ್ರಾನ್ಸ್‌ಪ್ಲಾಂಟ್‌ ವಿಭಾಗದ ಮುಖ್ಯಸ್ಥ ಡಾ. ಶರತ್‌ ದಾಮೋದರ್‌, ಥಲಸ್ಸೇಮಿಯಾ ವಿದೇಶದಲ್ಲಿ ಹೆಚ್ಚಾಗಿ ಕೊಂಡುಬರುವ ರೋಗವಾಗಿದ್ದು, ಇತ್ತೀಚಿನ ವರ್ಷದಲ್ಲಿ ಭಾರತದಲ್ಲೂ ಕಾಣಿಸಿಕೊಳ್ಳುತ್ತಿದೆ. ಗುಜರಾತ್‌ ಮತ್ತು ಪಂಜಾಬ್‌ನಲ್ಲಿ ಇದು ಹೆಚ್ಚಾಗಿದ್ದು, ಈಗೀಗ ದಕ್ಷಿಣ ಭಾರತವನ್ನೂ ಪ್ರವೇಶಿಸುತ್ತಿದೆ. ಕರ್ನಾಟಕದ ಲಿಂಗಾಯತ ಹಾಗೂ ಗೌಡ ಸಮುದಾಯದಲ್ಲೂ ಇದರ ಸುಳಿವಿದೆ ಎಂದು ಹೇಳಿದರು.

ತಮಿಳುನಾಡು ಮೂಲದ ಮುಮ್ತಾಜ್‌ ಸೂರ್ಯ ಎಂಬುವರಿಗೆ ಚಿಕ್ಕವಯಸ್ಸಿನಿಂದಲೇ ಈ ರೋಗ ಇದ್ದು, ಪ್ರತಿ ತಿಂಗಳು ರಕ್ತ ಕಸಿ ಮಾಡಿಸಿಕೊಳ್ಳುತ್ತಿದ್ದರು. ಮದುವೆಯಾಗಿ ಗರ್ಭಧರಿಸಿದ ನಂತರ, ಚಿಕಿತ್ಸೆಗಾಗಿ ನಾರಾಯಣ ಹೆಲ್ತ್‌ ಸಿಟಿಗೆ ಬಂದಿದ್ದರು. ನಾರಾಯಣ ಹೆಲ್ತ್‌ಸಿಟಿಯಲ್ಲಿ ಅವರಿಗೆ ನಿರಂತರವಾಗಿ ಚಿಕಿತ್ಸೆ ನೀಡಿದ್ದರ ಪರಿಣಾಮ ಅವರು ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಥಲಸ್ಸೇಮಿಯಾ ಸಮಸ್ಯೆಯಿಂದ ಬಳಲುತ್ತಿರುವ ಮುಮ್ತಾಜ್‌ ಸೂರ್ಯ ಅವರು ಮಾತನಾಡಿ, ಈ ರೋಗ ಹೊಂದಿದವರು ಆರೋಗ್ಯವಂತ ಮಗುವಿಗೆ ಜನ್ಮ ನೀಡಲು ಸಾಧ್ಯ ಎಂಬುದು ವಿದೇಶಕ್ಕೆ ಹೋದಾಗ ನನ್ನ ಗಮನಕ್ಕೆ ಬಂದಿತ್ತು. ನಂತರ ಪತಿಗೆ ಈ ವಿಷಯ ತಿಳಿಸಿದೆ. ನಾರಾಯಣ ಹೆಲ್ತ್‌ ಸಿಟಿಯಲ್ಲಿ ನಿಯಮಿತ ಚಿಕಿತ್ಸೆ ಪಡೆದೆ. ಈವರಗೂ 300ಕ್ಕೂ ಅಧಿಕ ಬಾರಿ ರಕ್ತದ ಕಸಿ ಮಾಡಿಸಿಕೊಂಡಿದ್ದೇನೆ. 6 ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದು, ನಾನು ಮತ್ತು ಮಗು ಆರೋಗ್ಯವಾಗಿದ್ದೇವೆ ಎಂದು ಅನುಭವ ಹೇಳಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next