Advertisement
ದೇಶದ ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಹಾಗೂಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿಹಕ್ಕಿಜ್ವರ ಪ್ರಕರಣಗಳು ದೃಢವಾಗಿರುವಬೆನ್ನಲ್ಲೆ, ಜಿಲ್ಲೆಯ ಗಡಿ ಭಾಗದಲ್ಲಿಅರಣ್ಯ ಇಲಾಖೆಯ ಅಧಿಕಾರಿಗಳಕಟ್ಟೆಚ್ಚರ ವಹಿಸುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ವಲಸೆಹಕ್ಕಿಗಳ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಮೈಸೂರು ಹಾಗೂಸುತ್ತಮುತ್ತ ಇರುವ ಕೊಕ್ಕರೆಬೆಳ್ಳೂರು, ರಂಗನತಿಟ್ಟು, ಲಿಂಗಾಂಬುಧಿ ಕೆರೆ ಸೇರಿದಂತೆ ವಲಸೆ ಹಕ್ಕಿಗಳುಕಾಣಿಸಿಕೊಳ್ಳುವ ಸ್ಥಳಗಳಲ್ಲಿ ಅವುಗಳ ಚಲನವಲನಗಳ ಮೇಲೆ ಗಮನ ಇಟ್ಟಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement
ಮೃಗಾಲಯದಲ್ಲಿ ನಿಗಾ :
ಚಾಮರಾಜೇಂದ್ರ ಮೃಗಾಲಯದಲ್ಲಿ ಹಕ್ಕಿ ಜ್ವರದ ಆತಂಕವಿಲ್ಲ ಎಂದು ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ ಸ್ಪಷ್ಟನೆ ನೀಡಿದ್ದು, ನೆರೆರಾಜ್ಯ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡು ಪಕ್ಷಿಗಳು ಸಾವನ್ನಪ್ಪುತ್ತಿವೆ. ನಮ್ಮ ಮೃಗಾಲಯದಲ್ಲಿ ಸಾವಿರಾರುಪಕ್ಷಿಗಳಿದ್ದು, ಹಕ್ಕಿ ಜ್ವರ ಹರಡದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿಗರುಮೃಗಾಲಯಕ್ಕೆ ಆಗಮಿಸುವ ಮುನ್ನ ಔಷಧಿ ಸಿಂಪಡಿಸಿರುವ ಫೂಟ್ ಮ್ಯಾಟ್‌ಗಳನ್ನು ಅಳವಡಿಸಲಾಗಿದ್ದು, ಈ ಮೂಲಕ ಮೃಗಾಲಯ ಪ್ರವೇಶಿಸಿದ್ದಾರೆ. ಪ್ರವಾಸಿಗರಿಂದ ಹಕ್ಕಿಗಳಿಗೆಹಾಗೂ ಹಕ್ಕಿಗಳಿಂದ ಪ್ರವಾಸಿಗರಿಗೆ ಹಕ್ಕಿ ಜ್ವರ ಹರಡದಂತೆಮುಂಜಾಗ್ರತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಈಗಾಗಲೇ ಕೇಂದ್ರ ಮೃಗಾಲಯ ಪ್ರಾಧಿಕಾರ ನೀಡಿರುವ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದೇವೆ. ಮೃಗಾಲಯದ ವೈದ್ಯರು ಎಲ್ಲ ಪಕ್ಷಿಗಳ ಚಲನವಲನಗಳ ಬಗ್ಗೆ ನಿಗಾ ಇಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಹಕ್ಕಿಜ್ವರ ತಡೆಗಟ್ಟುವಿಕೆ ಸಂಬಂಧ ಕೇಂದ್ರ ಸರ್ಕಾರದಿಂದ ಬಂದಿರುವ ನಿರ್ದೇಶನ ಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ವಲಸೆ ಹಕ್ಕಿಗಳು ಕಾಣಿಸಿಕೊಳ್ಳುವ ಕಡೆಏನೆಲ್ಲಾ ಮಾಡಬೇಕೆಂಬುದನ್ನು ಸಿಬ್ಬಂದಿಗೆ ತಿಳಿಸಲಾಗಿದೆ. ಅನುಮಾನಾಸ್ಪದ ಘಟನೆಗಳು ಕಂಡುಬಂದಲ್ಲಿ ತಕ್ಷಣ ನಮ್ಮನ್ನು ಸಂಪರ್ಕಿಸು ವಂತೆ ಹೇಳಿದ್ದೇವೆ. – ಕೆ.ಸಿ.ಪ್ರಶಾಂತ್ ಕುಮಾರ್, ಡಿಸಿಎಫ್ ಮೈಸೂರು.
24 ಗಂಟೆಗಳ ಕಾಲ ನಮ್ಮ ವೈದ್ಯರು ಹಕ್ಕಿ ಜ್ವರ ಹರಡದಂತೆ ಮುಂಜಾಗ್ರತೆವಹಿಸುತ್ತಿದ್ದಾರೆ. ಎಲ್ಲ ಮೃಗಾಲಯಗಳಲ್ಲಿ ಹಕ್ಕಿ ಜ್ವರ ಹರಡದಂತೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರವಾಸಿಗರು ಆತಂಕಪಡಬೇಕಿಲ್ಲ. –ಎಲ್.ಆರ್ ಮಹಾದೇವಸ್ವಾಮಿ, ಅಧ್ಯಕ್ಷರು ಮೃಗಾಲಯ ಪ್ರಾಧಿಕಾರ.