ಮಂಗಳಗಂಗೋತ್ರಿ: ಬರ್ಡ್ ಕೌಂಟ್ ಇಂಡಿಯಾ ವತಿಯಿಂದ ಆಯೋಜಿಸಲಾದ ಗ್ರೇಟ್ ಬ್ಯಾಕ್‌ಯಾರ್ಡ್ ಬರ್ಡ್‌ಕೌಂಟ್ (ಜಿಬಿಬಿಸಿ)ನ ಭಾಗವಾಗಿರುವ ಕ್ಯಾಂಪಸ್‌ಬರ್ಡ್ ಕೌಂಟ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಂಗಳೂರು ವಿ.ವಿ. ಕ್ಯಾಂಪಸ್‌ನಲ್ಲಿ ಈ ಬಾರಿ 108 ಪಕ್ಷಿ ಪ್ರಭೇದಗಳು ಪತ್ತೆಯಾಗಿವೆ.
ಫೆ.12-15ರ ವರೆಗೆ ನಾಲ್ಕು ದಿನಗಳ ಕಾಲ ದೇಶಾದ್ಯಂತ ವಿವಿಧ ಕ್ಯಾಂಪಸ್‌ಗಳಲ್ಲಿ ಬರ್ಡ್ ಕೌಂಟ್ ನಡೆದಿದೆ. ವಿಶ್ವವಿದ್ಯಾಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ನ್ಯಾಚುರಲ್ ಹಿಸ್ಟರಿ ಅಸೋಸಿಯೇಶನ್ ಸಹಯೋಗದಲ್ಲಿ ಬರ್ಡ್ ಕೌಂಟ್ ಸಂಘಟಿಸಲಾಯಿತು.
ಕಾಸರಗೋಡಿನ ಮ್ಯಾಕ್ಸಿಂ ರೋಡ್ರಿಗಸ್ ಮತ್ತು ಮಂಗಳೂರು ವಿವಿ ಸಂಶೋಧನ ವಿದ್ಯಾರ್ಥಿ ವಿವೇಕ್ ಹಾಸ್ಯಗಾರ್ ಈ ಬಾರಿಯ ಬರ್ಡ್ ಕೌಂಟ್ ಸಂಯೋಜಿ ಸಿದ್ದರು. ವಿದ್ಯಾರ್ಥಿಗಳು, ಸಂಶೋಧನ ವಿದ್ಯಾರ್ಥಿಗಳು, ವಿವಿಧ ವಿಭಾಗಗಳ ಬೋಧನ ಸಿಬಂದಿ, ಸಂತ ಅಲೋಶಿಯಸ್ ಮತ್ತು ಮಣಿಪಾಲದ ಎಂಐಟಿಯ ಪಕ್ಷಿ ಪ್ರೇಮಿಗಳು, ಸ್ಥಳೀಯರು ಪಕ್ಷಿ ವೀಕ್ಷಣೆಯಲ್ಲಿ ಭಾಗವಹಿಸಿದ್ದರು.
ಕಾಜಾಣ (ಬ್ಲ್ಯಾಕ್ ಡ್ರಾಂಗೋ), ಕಪ್ಪು ಗರುಡ( ಬ್ಲಾÂಕ್ ಕೈಟ್), ಬಿಳಿ ಗರುಡ(ಬ್ರಹ್ಮಿಣಿ ಕೈಟ್), ಮಧುರ ಕಂಠ (ಕಾಮನ್ ಐಯೋರಾ), ಖಗರತ್ನ (ಪರ್ಪಲ್ ರಂಪ್ಡ್ ಸನ್‌ಬರ್ಡ್), ಕುಟ್ರಾ ಶೆಟ್ಟಿ (ವೈಟ್ ಚೀಕ್‌ಡ್ ಬಾರ್ಬಟ್ ), ಗ್ರೀನ್ ವಾಬ್ಲಿìರ್, ಕೆಂಪು ಕಪೋಲದ ಪಿಕಳಾರ (ರೆಡ್ ವಿಸ್ಕ್ರ್ಡ್ ಬುಲ್‌ಬುಲ್), ಕಾಡು ಹರಟೆಮಲ್ಲ ಹಕ್ಕಿ (ಜಂಗಲ್ ಬಬ್ಲಿರ್), ಕೆಂದಳೆ ಗಿಳಿ (ಪ್ಲಮ್ ಹೆಡೆಡ್ ಪಾರಾಕೀಟ್), ಹಳದಿ ಕೊಕ್ಕಿನ ಹರಟೆಮಲ್ಲ (ಎಲ್ಲೋ ಬಿಲ್ಡ್ ಬಬ್ಲಿರ್) ಮೊದಲಾದವುಗಳು ಪತ್ತೆಯಾಗಿವೆ. ಕಾಗೆ, ಡೇಗೆ, ನತ್ತಿಂಗ ಕಾಣಿಸಿಕೊಂಡಿವೆ. ಬೂದು ಕಾಜಾಣ, ಬೂಟೆಡ್ ಈಗಲ್, ಗ್ರೇ ವಗೆr „ಲ್, ಇಂಡಿಯನ್ ಪಿಟ್ಟಾ ಮೊದಲಾದ ವಲಸೆ ಹಕ್ಕಿಗಳು ಕ್ಯಾಂಪಸ್‌ನಲ್ಲಿ ಕಂಡುಬಂದಿವೆ.
ಕಳೆದ ಬಾರಿ ಕಂಡು ಬಂದಿದ್ದ ಜೇರ್ಡನ್ಸ್ ಲೀಫ್ ಬರ್ಡ್, ಥಿಕ್ ಬಿಲ್ಡ್ ಫವರ್‌ಕ್ರೀಪರ್, ಕಾಪರ್‌ಸ್ಮಿತ್ ಬಾರ್ಬೆಟ್, ಸ್ಟಾರ್ಕ್ ಬಿಲ್ಡ್ ಕಿಂಗ್‌ಫಿಶರ್ ಮೊದಲಾದ ಕಳೆದ ಬಾರಿ ಪತ್ತೆಯಾಗಿದ್ದ ಹಕ್ಕಿಗಳು ಈ ಬಾರಿ ಕಂಡು ಬಂದಿಲ್ಲ. ಬದಲಾಗಿ ಕಂದು ಎದೆಯ ಜೌಗುಕೋಳಿ (ರೂಡಿ ಬ್ರೆಸ್ಟೆಡ್ ಕ್ರೇಕ್) ಹಸುರು ಗೊರವ (ಗ್ರೀನ್ ಸ್ಯಾಂಡ್‌ಪೈಪರ್), ಬೂದು ಕುತ್ತಿಗೆಯ ಬಂಟಿಂಗ್ (ಗ್ರೇ ನೆಕ್ಡ್ ಬಂಟಿಂಗ್ ) ಈ ಬಾರಿ ಪತ್ತೆಯಾಗಿರುವ ಹೆಚ್ಚುವರಿ ಪಕ್ಷಿ ಪ್ರಬೇಧಗಳಾಗಿವೆ.