Advertisement

ಎಕ್ಸ್‌ಪ್ರೆಸ್‌ ವೇಗಳಲ್ಲಿ ಪಕ್ಷಿಧಾಮ!

10:35 PM May 06, 2023 | Team Udayavani |

ನವದೆಹಲಿ: ಜಾಗತಿಕ ಹವಾಮಾನ ಬದಲಾವಣೆಯ ಸಮಸ್ಯೆ ಪರಿಹರಿಸಲು ಮಾಲಿನ್ಯ ಮುಕ್ತ ಹಸಿರು ಪರಿಸರಕ್ಕೆ ವಿಶ್ವಾದ್ಯಂತ ಸರ್ಕಾರಗಳು ಒತ್ತು ನೀಡುತ್ತಿರುವ ನಡುವೆಯೇ, ಭಾರತ ಸರ್ಕಾರ ಇದರ ಜತೆಯಲ್ಲೇ ಪಕ್ಷಿಗಳ ವಾಸಸ್ಥಾನ ನಿರ್ಮಾಣಕ್ಕೆ ಆದ್ಯತೆ ನೀಡಿದೆ. ಇದರ ಭಾಗವಾಗಿ ರಾಷ್ಟ್ರೀಯ ಹೆದ್ದಾರಿ-ಎಕ್ಸ್‌ಪ್ರೆಸ್‌ ವೇಗಳಲ್ಲಿ ಪಕ್ಷಿಧಾಮಗಳ ನಿರ್ಮಾಣಕ್ಕೆ ಯೋಜಿಸಿದೆ. ದೇಶ ಸ್ವಾತಂತ್ರ್ಯ ಅಮೃತಮಹೋತ್ಸವ ಪೂರೈಸುತ್ತಿರುವ ಹಿನ್ನೆಲೆಯಲ್ಲಿ “ಅಮೃತ ಮಹೋತ್ಸವ ಬರ್ಡ್‌ ಗಾರ್ಡನ್‌’ ಹೆಸರಿನಲ್ಲಿ ಕೇಂದ್ರ ರಸ್ತೆಸಾರಿಗೆ ಸಚಿವಾಲಯ ಯೋಜನೆಗಳನ್ನು ರೂಪಿಸುತ್ತಿದೆ. ಅದರಂತೆ ರಾಷ್ಟ್ರೀಯ ಹೆದ್ದಾರಿ-ಎಕ್ಸ್‌ಪ್ರೆಸ್‌ ವೇಗಳ ರಸ್ತೆಗಳ ಸಮೀಪವಿರುವ ಜಾಗದಲ್ಲಿ ಗಾರ್ಡನ್‌ ರೂಪುಗೊಳ್ಳಲಿದೆ.ಯೋಜನೆಯ ಮೊದಲಭಾಗವಾಗಿ ದೆಹಲಿ-ಡೆಹ್ರಾಡೂನ್‌ ಎಕ್ಸ್‌ಪ್ರೆಸ್‌ ವೇ ಸಮೀಪದಲ್ಲಿ ಬರ್ಡ್‌ ಗಾರ್ಡನ್‌ ರೂಪಿಸಲಾಗುತ್ತದೆ. ಇದು ಎಕ್ಸ್‌ಪ್ರೆಸ್‌ ವೇ ಸೌಂದರ್ಯ ಹೆಚ್ಚಿಸುವುದು ಮಾತ್ರವಲ್ಲದೇ, ಪಕ್ಷಿಗಳ ಆವಾಸಸ್ಥಾನವಾಗಿ ರೂಪುಗೊಳ್ಳಲಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next