Advertisement
ಹಿತ್ತಲಿನ ಗಿಡದಲ್ಲಿ ಪಾರಿವಾಳ ಗೂಡು ಕಟ್ಟಿದೆ ಅಂದ್ಕೊಳ್ಳಿ. ಅದು ಎಷ್ಟೊತ್ತಿಗೆ ಗೂಡಿಗೆ ಬರುತ್ತೆ, ಯಾವಾಗ ಹಾರಿ ಹೋಗುತ್ತೆ, ಅದರ ಜೀವನಕ್ರಮ ಹೇಗೆ ಅಂತ ತಿಳಿದುಕೊಂಡಿದ್ದೀರ. ಅದು ಸ್ವಲ್ಪ ಕಷ್ಟವೇ. ಯಾಕಂದ್ರೆ, ಹಕ್ಕಿಗಳ ಜಾಡು ಕಂಡು ಹಿಡಿಯೋದು ಅಷ್ಟು ಸುಲಭವಲ್ಲ. ಆದರೆ, ಸ್ವಾತಿಗೆ ಆ ವಿಷಯದಲ್ಲಿ ಕುತೂಹಲ, ತಾಳ್ಮೆ ಜಾಸ್ತಿ. ಮನುಷ್ಯರ ವಾಸನೆಗೇ ಹೆದರಿ ಮರೆಯಾಗುವ ಅವೆಷ್ಟೋ ಹಕ್ಕಿಗಳ ಬದುಕು ಇವರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿವೆ.ಛಾಯಾಚಿತ್ರ- ಚಿತ್ರ
ಬರ್ಡ್ ಫೋಟೊಗ್ರಫಿಗೆ ಬೇಕಾದ ಮೊದಲ ಅರ್ಹತೆಯೇ ತಾಳ್ಮೆ. ಪಕ್ಷಿಗಳಿಗಾಗಿ ಕಾದು ಕುಳಿತು, ಒಂಚೂರೂ ಸದ್ದಾಗದಂತೆ, ಪಕ್ಷಿಗಳ ಏಕಾಂತಕ್ಕೆ ಭಂಗವಾಗದಂತೆ ಫೋಟೊ ಕ್ಲಿಕ್ಕಿಸುವುದು ಸುಲಭದ ಮಾತಲ್ಲ. ವಾರಗಟ್ಟಲೆ ಕಾದರೂ ಒಂದು ಫೋಟೊ ತೆಗೆಯಲು ಸಾಧ್ಯವಾಗದಿರಬಹುದು. ಆಹಾರ, ಆಶ್ರಯಕ್ಕಾಗಿ ಖಂಡಾಂತರದಿಂದ ವಲಸೆ ಬರುವ ಹಕ್ಕಿಗಳ ಫೋಟೊ ಕ್ಲಿಕ್ಕಿಸಲು ತಿಂಗಳಾನುಗಟ್ಟಲೆ ಕಾಯಬೇಕು. ಆ ತಾಳ್ಮೆ ಸ್ವಾತಿಗೆ ಎಷ್ಟು ಸಿದ್ಧಿಸಿದೆ ಎಂಬುದನ್ನು ಅವರು ತೆಗೆದಿರುವ ಫೋಟೊಗಳೇ ಹೇಳುತ್ತವೆ.
Related Articles
ಬಾಲ್ಯದಿಂದಲೇ ಫೋಟೋಗ್ರಫಿಯ ಸೆಳೆತಕ್ಕೆ ಒಳಗಾದ ಸ್ವಾತಿ, ಮುಂದೆ ಸ್ವಂತ ಕ್ಯಾಮೆರಾ ಖರೀದಿಸಿ ಪಕ್ಷಿ ಛಾಯಾಗ್ರಹಣದಲ್ಲಿ ತೊಡಗಿದರು. ಮೂರು ವರ್ಷಗಳಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇವರು, ಸಾವಿರಕ್ಕಿಂತಲೂ ಹೆಚ್ಚು ಪಕ್ಷಿ ಪ್ರಭೇದಗಳ ಫೋಟೊ ತೆಗೆದಿದ್ದಾರೆ. ಬನ್ನೇರುಘಟ್ಟ, ಮಂಡಗದ್ದೆ, ರಂಗನತಿಟ್ಟು ಪಕ್ಷಿಧಾಮಗಳಿಗೆ ಹೋಗಿ, ನೈಟ್ ಹೆರಾನ್, ಲಿಟಲ್ ಅಗ್ರೀಟ್, ಡಾರ್ಟನ್, ರಿವರ್ಜೀನ್‌ನಂಥ ಪಕ್ಷಿಗಳ ಲೋಕದಲ್ಲಿ ಸಂಚರಿಸಿದ್ದಾರೆ. ಇವರನ್ನು ಅಭಿನಂದಿಸಲು 8861141800 ಸಂಪರ್ಕಿಸಿ.
Advertisement
ಬಳಕೂರು ವಿ.ಎಸ್. ನಾಯಕ