Advertisement

ಮಂದಾರ ತ್ಯಾಜ್ಯ ವಿಲೇವಾರಿಗೆ ಕಾಲ ಕೂಡಿ ಬಂದಿತು !

09:01 PM Nov 18, 2021 | Team Udayavani |

ಮಹಾನಗರ: ಪಚ್ಚನಾಡಿಯ ಮಂದಾರ ಪ್ರದೇಶದಲ್ಲಿ ಎರಡು ವರ್ಷ ಗಳ ಹಿಂದೆ ಉಂಟಾದ ತ್ಯಾಜ್ಯ ದುರಂತ ದಿಂದ ಶೇಖರಣೆಗೊಂಡ ಸುಮಾರು 9 ಲಕ್ಷ ಟನ್‌ ತ್ಯಾಜ್ಯವನ್ನು “ಬಯೋ ಮೈನಿಂಗ್‌’ ವ್ಯವಸ್ಥೆ ಮುಖೇನ ಕರಗಿಸಲು ಮೂರು ಸಂಸ್ಥೆಗಳು ಆಸಕ್ತಿ ತೋರಿಸಿವೆ.

Advertisement

ಸುಮಾರು 73.73 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಈ ಕೆಲಸ ಪೂರ್ಣ ಗೊಳ್ಳಲಿದೆ. ಎಡಿಯು ಇನ್‌ಪ್ರಾ, ಬಿವಿಜಿ ಇಂಡಿಯ ಪ್ರç ಲಿ. ಮತ್ತು ನಕಾಫ್‌ ಸಂಸ್ಥೆಗಳ ಹೆಸರು ಟೆಂಡರ್‌ ಪ್ರಕ್ರಿಯೆ ಯಲ್ಲಿ ಆಂತಿಮಗೊಳಿಸಿ ತಾಂತ್ರಿಕ ಮೌಲ್ಯ ಮಾಪನಕ್ಕಾಗಿ ಸರಕಾರಕ್ಕೆ ಕಳುಹಿಸಲು ಮಹಾನಗರ ಪಾಲಿಕೆ ನಿರ್ಧರಿಸಿದೆ. ಸರಕಾರದ ಮಟ್ಟದಲ್ಲಿ ತಾಂತ್ರಿಕ ಮೌಲ್ಯ ಮಾಪನ ಮತ್ತು ಅರ್ಥಿಕ ಲೆಕ್ಕಾಚಾರ ಪರಿಗಣಿಸಿ ಒಂದು ಸಂಸ್ಥೆಗೆ ಟೆಂಡರ್‌ ಅಂತಿಮಗೊಳಿಸಲಿದೆ. ಈ ಎಲ್ಲ ಪ್ರಕ್ರಿಯೆ ಒಂದು ತಿಂಗಳೊಳಗೆ ಪೂರ್ಣ ಗೊಳ್ಳಲಿದ್ದು, 2022ರ ಆರಂಭದಲ್ಲಿ ಈ ಯೋಜನೆ ಜಾರಿಗೊಳ್ಳುವ ಸಂಭವವಿದೆ.

ಪ್ರೀಮಿಯಂ ಎಫ್‌ಎಆರ್‌ ಬ್ಯಾಂಕಿ ನಿಂದ ಸಂದಾಯವಾದ 15.23 ಕೋಟಿ ರೂ. ಬಡ್ಡಿ ಮೊತ್ತವನ್ನು ಪಾಲಿಕೆಯು ಬಂಡವಾಳ ವೆಚ್ಚವನ್ನಾಗಿ ಬಳಸಲು ನಿರ್ಧರಿಸಿದೆ. ಕೆಯುಐಡಿಎಫ್‌ಸಿಯ ಕರ್ನಾಟಕ ನೀರು ಮತ್ತು ನೈರ್ಮಲ್ಯ ಕ್ರೋಡೀಕರಿಸಿದ ನಿಧಿ ಯಿಂದ 35.54 ಕೋಟಿ ರೂ. ಸಾಲ ಪಡೆಯಲೂ ಪಾಲಿಕೆ  ತೀರ್ಮಾನಿಸಿದೆ.

ದುರಂತಕ್ಕೆ ಎರಡು ವರ್ಷ:

ಪಚ್ಚನಾಡಿ ತ್ಯಾಜ್ಯರಾಶಿ ಜರಿದು ಮಂದಾರ ಪ್ರದೇಶ ವನ್ನು ತ್ಯಾಜ್ಯಮಯ ವಾಗಿ ಬದಲಾಯಿಸಿದ ಘಟನೆಗೆ ಎರಡು ವರ್ಷ ಪೂರ್ಣ ಗೊಂಡಿದೆ. ತ್ಯಾಜ್ಯವನ್ನು ಇನ್ನೂ ಮುಕ್ತಗೊಳಿಸಿಲ್ಲ. 2019 ರ ಆಗಸ್ಟ್‌ ಮೊದಲ ವಾರದಲ್ಲಿ ಈ ಘಟನೆ ಸಂಭವಿ ಸಿತ್ತು. ತ್ಯಾಜ್ಯರಾಶಿ ಜರಿದು ಮಂದಾರ ಭಾಗಕ್ಕೆ ಕುಸಿದು ಸುಮಾರು 2 ಕಿ.ಮೀ.ನಷ್ಟು ದೂರಕ್ಕೆ ಸರಿದಿತ್ತು.ಇಲ್ಲಿನ ಸುಮಾರು 27 ಮನೆಯವರಿಗೆ ಪ್ರತ್ಯೇಕ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಮಧ್ಯಂತರ ಪರಿಹಾರ ನೀಡಲಾಗಿದೆ.

Advertisement

ತ್ಯಾಜ್ಯ ದುರಂತ ಸಂಭವಿಸಿದ ಸ್ಥಳದಲ್ಲಿ ಮತ್ತಷ್ಟು ಅನಾಹುತ ಸಂಭವಿಸದಂತೆ 7 ಮೀಟರ್‌ ಎತ್ತರದ ತಡೆ ಗೋಡೆ  ನಿರ್ಮಿಸ

ಲಾಗಿದೆ. ಸಾಯಿಲ್‌ ಕ್ಯಾಪಿಂಗ್‌ ವ್ಯವಸ್ಥೆ ಜಾರಿಗೆ ತರಲಾಗಿದ್ದು, ತ್ಯಾಜ್ಯದ ನೀರು ಶೇಖರಣೆಗೆ ಟ್ಯಾಂಕ್‌ ಅಳವಡಿಸಲಾಗಿದೆ. ಅನಧಿಕೃತವಾಗಿ ಕಸ ವಿಲೇವಾರಿ ಮಾಡುವವರ ಬಗ್ಗೆ ನಿಗಾ ಇರಿಸಿದ್ದು, ಸಿ.ಸಿ. ಕೆಮರಾ ಅಳವಡಿಸಲಾಗಿದೆ.

2,295.00: ಲಕ್ಷರೂ. ಮರುಬಳಕೆ  ವಸ್ತುಗಳಿಂದ ಪಡೆಯಬಹು ದಾದಅಂದಾಜು ಮೊತ್ತ

ಯೋಜನೆಯ ಆರ್ಥಿಕ ವಿವರ : 7,373.22 ಲಕ್ಷ ರೂ.  ಯೋಜನೆ  ಅಂದಾಜು ವೆಚ್ಚ

1,523.47 : ಲಕ್ಷ ರೂ. ಮಹಾನಗರ  ಪಾಲಿಕೆ ಭರಿಸಲು ಪ್ರಸ್ತಾವಿಸಿರುವ ಮೊತ್ತ (ಶೇ.30)

3,554.75: ಲಕ್ಷ ರೂ. ಪಾಲಿಕೆಯು  ಪಡೆಯಲು ಉದ್ದೇಶಿಸಿರುವ  ಸಾಪ್ಟ್ ಲೋನ್‌ ಮೊತ್ತ

ಬಯೋ ಮೈನಿಂಗ್‌ ಏನಿದು ವ್ಯವಸ್ಥೆ ? :

ಗುಡ್ಡದಂತೆ ಬೆಳೆದಿರುವ ಡಂಪಿಂಗ್‌ ಯಾರ್ಡ್‌ಗಳ ತ್ಯಾಜ್ಯ ವನ್ನು ಜೈವಿಕ ವಿಧಾನದ ಮುಖೇನ ಕರಗಿಸುವ ವ್ಯವಸ್ಥೆಗೆ ಬಯೋ ಮೈನಿಂಗ್‌ ಎನ್ನಲಾಗು ತ್ತದೆ. ಈ ಮೂಲಕ ಪ್ರಕೃತಿಯಲ್ಲಿ ಕರಗುವ ಮತ್ತು ಕರಗ ದಿರುವ ತ್ಯಾಜ್ಯ ವನ್ನು ಬೇರ್ಪಡಿಸಿ ಗೊಬ್ಬರ ಇತ್ಯಾದಿಗೆ ಬಳಸಲಾಗುತ್ತದೆ. ಪ್ಲಾಸ್ಟಿಕ್‌, ರಬ್ಬರ್‌, ಗಾಜು ಮರು ಬಳಕೆಗಾಗಿ ಸಿಮೆಂಟ್‌ ಕಾರ್ಖಾನೆಗೆ ನೀಡಬಹುದು. ಹಸಿ ತ್ಯಾಜ್ಯವನ್ನು ಸಂಸ್ಕರಿಸಿ, ಉಳಿದದ್ದನ್ನು ನಾಶಪಡಿಸಲಾಗುತ್ತದೆ. ಇನ್ನು, ಮರಳನ್ನು ಸಂಸ್ಕರಿಸಿ ಮರು ಬಳಕೆ ಮಾಡಲು ಅವಕಾಶ ಇದೆ.

Advertisement

Udayavani is now on Telegram. Click here to join our channel and stay updated with the latest news.

Next