Advertisement

ಬಯೋಮೆಟ್ರಿಕ್ ಇಲ್ಲದೆ ಕೆಲಸ ಮಾಡುತ್ತಿರುವ ತಾಲೂಕು ಪಂಚಾಯತ್ ಆಡಳಿತ?

04:54 PM Nov 09, 2022 | Suhan S |

ತೀರ್ಥಹಳ್ಳಿ: ತಾಲೂಕು ಪಂಚಾಯತ್ ನ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರಿಗೆ ಪ್ರತಿದಿನ ತೊಂದರೆ ಉಂಟಾಗುತ್ತಿದೆ ಎಂದು ಅನೇಕ ಸಾರ್ವಜನಿಕರ ಮಾತು ಕೇಳಿ ಬರುತ್ತಿದೆ.

Advertisement

ಸರ್ಕಾರಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ಬಯೋಮೆಟ್ರಿಕ್ ಬಳಕೆ ಕಡ್ಡಾಯವಾಗಿ ತಮ್ಮ ಕಛೇರಿಯಲ್ಲಿ ಮಾಡಬೇಕು ಎಂದು ಸರ್ಕಾರ ಆದೇಶ ಮಾಡಿದ್ದರು ಕೂಡ ತೀರ್ಥಹಳ್ಳಿಯಲ್ಲಿ ತಾಲೂಕು ಪಂಚಾಯತ್ ನಲ್ಲಿ ಯಾವುದೇ ಸಿಬ್ಬಂದಿಗಳು ಈ ಕೆಲಸ ಮಾಡುತ್ತಿಲ್ಲ. ಮಾಡುತ್ತಿಲ್ಲ ಎನ್ನುವ ಬದಲು ಬಯೋಮೆಟ್ರಿಕ್ ವ್ಯವಸ್ಥೆಯೇ ತಾಲೂಕು ಪಂಚಾಯತಿ ಪಟ್ಟಣದ ರಥಬೀದಿಯ ರಾಮಮಂದಿರದ ಕಚೇರಿಯಲ್ಲಿ ಇಲ್ಲ.

ಸಿಬ್ಬಂದಿಗಳು ಗೈರಾದರೆ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಗೊತ್ತಾಗುತ್ತದೆ. ಆದರೆ ಈ ವ್ಯವಸ್ಥೆ ಈ ಕಚೇರಿಯಲ್ಲಿ ಇಲ್ಲದಿರುವ ಕಾರಣ ಸಿಬ್ಬಂದಿಗಳು ಕೆಲಸಕ್ಕೆ ಬಂದರು ಬರದಿದ್ದರೂ ಗೊತ್ತಾಗುವುದಿಲ್ಲ. ಈ ಅವ್ಯವಸ್ಥೆಯಿಂದಾಗಿ ಸಿಬ್ಬಂದಿಗಳು ಬರದಿದ್ದರೂ ಕೇಳುವವರಿಲ್ಲ ಎಂಬಂತಾಗಿದೆ. ಸಾರ್ವಜನಿಕರು ತಮ್ಮ ಕೆಲಸಕ್ಕೆ ತಾಲೂಕು ಪಂಚಾಯತಿ ಗೆ ಹೋದರೆ ಅಲ್ಲಿ ಸಿಬ್ಬಂದಿಗಳೇ ಇರುವುದಿಲ್ಲ. ತಾಲೂಕಿನ ಅನೇಕ ಭಾಗಗಳಿಂದ ಜನರು ತಮ್ಮೆಲ್ಲ ಕೂಲಿ ನಾಲಿ ಕೆಲಸವನ್ನು ಬಿಟ್ಟು ಬಸ್ ಚಾರ್ಜ್ ಹಾಕಿಕೊಂಡು ಕಚೇರಿಯಲ್ಲಿ ಸಂಬಂಧಪಟ್ಟ ಕೆಲಸಕ್ಕೆ ಎರಡು ಮೂರು ದಿನ ಬಂದರು ಸಿಬ್ಬಂದಿಗಳು ಇಲ್ಲದೆ ಕೆಲಸವು ಆಗದೇ ವಾಪಾಸ್ ಹೋಗಬೇಕೆಂದು ಅಲೆದು ಅಲೆದು ನೊಂದ ಅನೇಕ ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿದೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು  ಸಾರ್ವಜನಿಕರಿಗೆ ತೊಂದರೆ ಆಗದಂತೆ ಗಮನ ಹರಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next