Advertisement

ಭಾರತದ ಕೋವಿಡ್‌ ನಿಯಂತ್ರಣ ಕ್ರಮಗಳಿಗೆ ಬಿಲ್‌ಗೇಟ್ಸ್‌ ಬಹುಪರಾಕ್‌

12:47 PM Mar 02, 2023 | Team Udayavani |

ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಅವರನ್ನು ಭೇಟಿ ಮಾಡಿರುವ ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌, ಭಾರತ ಕೋವಿಡ್‌ ಪರಿಸ್ಥಿತಿಯನ್ನು ನಿಯಂತ್ರಿಸಿದ ಬಗೆಯನ್ನು ಹಾಡಿ ಹೊಗಳಿದ್ದಾರೆ.

Advertisement

ದೆಹಲಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ  ಅವರನ್ನು ಭೇಟಿ ಮಾಡಿದ ಬಿಲ್‌ಗೇಟ್ಸ್‌, ಇದೇ ವೇಳೆ ಆರೋಗ್ಯ ಸಚಿವಾಲಯದಲ್ಲಿರುವ ʻವಾರ್‌ ರೂಂʼಗೂ ಭೇಟಿ ನೀಡಿದ್ದಾರೆ.

ಕೇಂದ್ರ  ಆರೋಗ್ಯ ಸಚಿವಾಲಯದಲ್ಲಿ ಕೋವಿಡ್‌ ಸಂದರ್ಭದಲ್ಲಿ ದೇಶದ ಜನರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ನೂತನ ʻವಾರ್‌ ರೂಂʼನ್ನು ತೆರೆದಿತ್ತು. ಅದಕ್ಕೆ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ವೀಕ್ಷಣಾಲಯ ಎಂಬ ಹೆಸರನ್ನೂ ನೀಡಿತ್ತು.

ಈ ಉನ್ನತ ಮಟ್ಟದ ಭೇಟಿ ವೇಳೆ ಬಿಲ್‌ಗೇಟ್ಸ್‌  ಭಾರತದ ಕೋವಿಡ್‌ ನಿರ್ವಹಣೆ , ವ್ಯಾಕ್ಸಿನೇಷನ್‌ ಕಾರ್ಯಕ್ರಮ, ಆಯುಷ್ಮಾನ್‌ ಭಾರತ್‌ ಡಿಜಿಟಲ್‌‌ ಮಿಷನ್‌ ಮೊದಲಾದ ಆರೋಗ್ಯ ಕಾರ್ಯಗಳಿಗೆ ಡಿಜಿಟಲ್‌ ಉಪಕ್ರಮಗಳ ಅಳವಡಿಕೆ ಕುರಿತು ಸಂತಸ ವವ್ಯಕ್ತಪಡಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಟ್ವೀಟ್‌ ಮಾಡಿದೆ.

ಇದೇ ಸಂದರ್ಭದಲ್ಲಿ ಉಭಯರ ಮಧ್ಯೆ ಜಿ-20 ಯಲ್ಲಿ ಭಾರತದ ಆರೋಗ್ಯ ಆದ್ಯತೆಗಳ ಬಗ್ಗೆ, ಪ್ರಧಾನಮಂತ್ರಿ ಭಾರತೀಯ ಜನೌಷಧಿ ಯೋಜನೆ ಮತ್ತು ಇ-ಸಂಜೀವಿನಿ ಕಾರ್ಯಕ್ರಮಗಳ ಬಗ್ಗೆ ಬಿಲ್‌ಗೇಟ್ಸ್‌ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

Advertisement

 

Wonderful meeting with @BillGates.

He appreciated India’s COVID-19 Management, Vaccination Drive & Digital Health initiatives like Ayushman Bharat Digital Mission.

We discussed about India’s G20 health priorities, PM Bhartiya Janaushadhi Pariyojana and eSanjeevani. pic.twitter.com/hIB8zDxeVS

— Dr Mansukh Mandaviya (@mansukhmandviya) March 1, 2023

ಈ ಕುರಿತು ಟ್ವೀಟ್‌ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ, ʻಬಿಲ್‌ಗೇಟ್ಸ್‌ ಅವರ  ಜೊತೆಗಿನ ಭೇಟಿ ಅದ್ಭುತವಾಗಿತ್ತು. ಅವರು ಭಾರತದ ಕೋವಿಡ್‌ ನಿರ್ವಹಣೆ, ಆಯುಷ್ಮಾನ್‌ ಭಾರತ್‌ ಮೊದಲಾದ ಲಸಿಕಾ ಕಾರ್ಯಕ್ರಮಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಬಾರತದ ಜಿ-20 ಪ್ರಧಾನಮಂತ್ರಿ ಭಾರತೀಯ ಜನೌಷಧಿ ಯೋಜನೆ ಮತ್ತು ಇ-ಸಂಜೀವಿನಿ ಕಾರ್ಯಕ್ರಮಗಳ ಬಗ್ಗೆ ಮಾತುಕತೆ ನಡೆದಿದೆʼ ಎಂದು ಬರೆದುಕೊಂಡಿದ್ಧಾರೆ.

ಇದನ್ನೂ ಓದಿ: ಶಾರುಖ್‌ ಪತ್ನಿ ಗೌರಿ ಖಾನ್‌ ವಿರುದ್ಧ ಎಫ್‌ಐಆರ್‌

Advertisement

Udayavani is now on Telegram. Click here to join our channel and stay updated with the latest news.

Next