Advertisement
ಅ. 21ರಂದು ಸಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಆಯೋಜಿಸಿದ ದಿ| ಜಯ ಸಿ. ಸುವರ್ಣರ ಪ್ರಥಮ ಪುಣ್ಯತಿಥಿಯ ವಿವಿಧ ಕಾರ್ಯಕ್ರಮಗಳ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸತ್ಯಪ್ರಿ ಯರು, ನೇರ ನುಡಿಯ ಜಯ ಸುವರ್ಣರುಮುಂಬಯಿ ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷರಾಗಿ, ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾಗಿ, ರಾಷ್ಟ್ರೀಯ ಬಿಲ್ಲವರ ಮಹಾಮಂ ಡಲದ ಅಧ್ಯಕ್ಷರಾಗಿ, ಕುದ್ರೋಳಿ ದೇವಸ್ಥಾನದ ಅಭಿವೃದ್ಧಿಯ ಹರಿಕಾರರಾಗಿ ದುಡಿದು ಜನ್ಮಭೂಮಿ ಮತ್ತು ಕರ್ಮಭೂಮಿಯಲ್ಲಿ ಅಜರಾಮರಾದರು ಎಂದರು.
Related Articles
Advertisement
ಶ್ರೀಕ್ಷೇತ್ರ ಕುದ್ರೋಳಿ ಇದರ ಗೌರವ ಕೋಶಾಧಿಕಾರಿ ಪದ್ಮರಾಜ ರಾಮಯ್ಯ ಮಾತನಾಡಿ, ಮಹಾರಾಷ್ಟ್ರ ನೆಲದಲ್ಲಿ ಅದರಲ್ಲೂ ಮಹಾನಗರ ಗೋರೆಗಾಂವ್ ಪೂರ್ವದ ರೈಲು ನಿಲ್ದಾಣದ ಸಮೀಪ ಜಯ ಸುವರ್ಣ ಮಾರ್ಗ ಅನಾವರಣಗೊಂಡಿರುವುದು ಅವರ ಸಾಮಾಜಿಕ ಕೊಡುಗೆ ಮತ್ತು ಸಾಧನೆಯ ಪ್ರತಿಬಿಂಬವಾಗಿದೆ ಎಂದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್ ಪ್ರಸ್ತಾವಿಸಿ, ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಕೇಶವ ಕೆ. ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭ ಉಚಿತ ಆರೋಗ್ಯ ತಪಾಸಣ ಶಿಬಿರವನ್ನು ಆಯೋಜಿಸಲಾ ಗಿತ್ತು. ಗುರು ಪೂಜೆಯ ಬಳಿಕ ಅನ್ನಪ್ರ ಸಾದ ಮತ್ತು ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರಿಂದ ಕಾಂತಬಾರೆ ಬೂದಬಾರೆ ಬಯಲಾಟ ಪ್ರದರ್ಶನಗೊಂಡಿತು.
ಭಾರತ್ ಬ್ಯಾಂಕ್‌ನ ನಿರ್ದೇಶಕ ಸೂರ್ಯಕಾಂತ್ ಜಯ ಸುವರ್ಣ, ಉಪಾಧ್ಯಕ್ಷ ಧರ್ಮಪಾಲ್ ಜಿ. ಅಂಚನ್, ಜಯಂತಿ ಉಳ್ಳಾಲ್, ಕೆ. ಸುರೇಶ್ ಕುಮಾರ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೋಟ್ಯಾನ್ ಮತ್ತಿತರರಿದ್ದರು.
ಸಮಾಜದಲ್ಲಿ ಎಲ್ಲರೂ ವಿದ್ಯಾವಂತರಾಗಬೇಕು, ಸುಂಸ್ಕೃತರಾಗಬೇಕು, ಎಲ್ಲರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬೇಕು ಎಂಬ ದಿ| ಜಯ ಸಿ. ಸುವರ್ಣರ ಮನದಾಳದ ಇಚ್ಚೆಯಾಗಿತ್ತು. ನಿರಾಂಡಂಬರ ವ್ಯಕ್ತಿತ್ವದ ಅವರು ಮಾಡಿ ತೋರಿಸುವ ಛಲ, ಸಾಧಿಸುವ ಬಲವುಳ್ಳ ಸಾಮಾನ್ಯ ವ್ಯಕ್ತಿತ್ವದ ಅಸಾಮನ್ಯ ಶಕ್ತಿಯಾಗಿದ್ದರು.-ಡಾ| ರಾಜಶೇಖರ್ ಕೋಟ್ಯಾನ್‌ಅಧ್ಯಕ್ಷ, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ
ದಿ| ಜಯ ಸುವರ್ಣರ ಮಾರ್ಗದರ್ಶನದಂತೆ ಉಚಿತ ವಿದ್ಯಾಭ್ಯಾಸ, ಬ್ರಹ್ಮಶ್ರೀ ನಾರಾಯಣಗುರುಗಳ ತತ್ತ್ವಗಳ ಪಾಲನೆ ಮೊದಲಾದ ಜನಪರ ಯೋಜನೆಗಳನ್ನು ಒಳಗೊಂಡ ಸಂಸ್ಥೆಯೊಂದನ್ನು ಪುಣೆಯ ಎರಡು ಎಕರೆ ನಿವೇಶನದಲ್ಲಿ ನಿರ್ಮಿಸುವುದು ನಮ್ಮ ಧ್ಯೇಯವಾಗಿದೆ. ಅದಕ್ಕೆ ಸಮಾಜ ಬಾಂಧವರ ಪ್ರೋತ್ಸಾಹ, ಸಹಕಾರ ಸದಾಯಿರಲಿ. -ವಿಶ್ವನಾಥ್ ಪೂಜಾರಿ ಕಡ್ತಲ ಅಧ್ಯಕ್ಷ, ಪುಣೆ ಬಿಲ್ಲವ ಸಂಘ
ದಿ| ಜಯ ಸುವರ್ಣರ ರಚನಾತ್ಮಕ ಬಳಕೆಯಿಂದ ಭಾರತ್ ಬ್ಯಾಂಕ್ ರಾಷ್ಟ್ರಮಟ್ಟದಲ್ಲಿ ಪ್ರಬಲಗೊಂಡಿದೆ. ಶಾಖೆಗಳ ವಿಸ್ತರಣೆಯ ಮೂಲಕ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿ¨ªಾರೆ. ಅವರ ಆಶೀರ್ವಾದ ಸದಾ ನಮ್ಮ ಮೇಲಿರಲಿದೆ.-ಯು. ಎಸ್. ಪೂಜಾರಿ ,ಕಾರ್ಯಾಧ್ಯಕ್ಷ, ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಮುಂಬಯಿ