Advertisement

ಬಿಲ್ಲವರ ಅಸೋ.ಪಡುಬೆಳ್ಳೆ, ಶಿಕ್ಷಣ ಸಂಸ್ಥೆ: ನೇತ್ರ ತಪಾಸಣಾ ಶಿಬಿರ

03:50 PM Feb 23, 2019 | Team Udayavani |

ಮುಂಬಯಿ: ದೂರದೃಷ್ಟಿವುಳ್ಳ ಪಾಲಕರಿಂದ ಮಕ್ಕಳಲ್ಲಿ ಜಾಗೃತಿ ಸಾಧ್ಯವಾಗಿದ್ದು ವಿನಯತೆಯ ಬುದ್ಧಿವಾದ ಮಕ್ಕಳ ಮಾನಸಿಕ ವಿಕಾಸಕ್ಕೆ ಪೂರಕವಾಗಿರುತ್ತದೆ. ಪಾಲಕರು ಜಾಗೃತವಾಗಿದ್ದಾಗಲೇ ಮಕ್ಕಳು ಸಂಸ್ಕಾರಯುತವಾಗಿ ಬೆಳೆಯುತ್ತಾರೆ. ಆದ್ದರಿಂದ ಕಲಿಕೆ ಶಿಕ್ಷಣಕ್ಕಿಂತ ಪಾಲಕರ ನುಡಿನಡೆಗಳಿಂದಲೇ ಮಕ್ಕಳಲ್ಲಿ ಬದಲಾವಣೆ ತರಲು ಸಾಧ್ಯ.  ಪಾಲಕರು ಮಕ್ಕಳ ದೇಹದ ಫಿಟ್‌ನೆಸ್‌  ಜತೆಗೆ ಮಾನಸಿಕ ಸಮತೋಲನವನ್ನು ತಿಳಿದು ಮಕ್ಕಳನ್ನು ಪ್ರೀತ್ಯಾದರಗಳಿಂದ ಬೆಳೆಸುವ ಅಗತ್ಯವಿದೆ.  ತಮ್ಮ ದಿನನಿತ್ಯ ಜೀವನದಲ್ಲಿ ಮನೆಯೊಳಗೆ ನಡೆಯುವ ಆಗುಹೋಗುಗಳಲ್ಲಿ, ಬಳಸುವ ಭಾಷೆ ಮತ್ತು ನಡತೆಯಲ್ಲಿ ಹಿತಮಿತವನ್ನು ಕಂಡುಕೊಂಡಾಗ ಮಕ್ಕಳು ಮತ್ತು ಪೋಷಕರಲ್ಲಿ ಸಾಮರಸ್ಯದ ಬಾಳು ಸಾಧ್ಯ ವಾಗುವುದು ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್‌ ಸಂಪರ್ಕಾಧಿಕಾರಿ ಗೋಪಾ ಲಕೃಷ್ಣ ಕುಂದರ್‌ ಬಜಪೆ ತಿಳಿಸಿದರು.

Advertisement

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಆಡಳಿತದ ಶ್ರೀ ಗುರು ನಾರಾಯಣ ಶಿಕ್ಷಣ ಸಮೂಹ ಸಂಸ್ಥೆ ಪಡುಬೆಳ್ಳೆ  ಕನ್ನಡ ಮಾಧ್ಯಮ ಪ್ರೌಢಶಾಲೆ, ಆಂಗ್ಲ ಮಾಧ್ಯಮ ಪ್ಲೇಸ್ಕೂಲ್‌, ನರ್ಸರಿ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಸಭಾಗೃಹದಲ್ಲಿ ಫೆ. 21ರಂದು ನಡೆದ ವಿದ್ಯಾರ್ಥಿಗಳ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ ಶುಭಹಾರೈಸಿದರು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ ಅಧ್ಯಕ್ಷತೆಯಲ್ಲಿ ಜರಗಿಸಲ್ಪಟ್ಟ   ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರುಗಳಾಗಿ ಮಂಗಳೂರುನ ಆರ್ಕಿಟೆಕ್ಟ್ ಪ್ರಮಲ್‌ ಕುಮಾರ್‌, ರೋಟರಿ ಕ್ಲಬ್‌ ಶಿರ್ವ ಅಧ್ಯಕ್ಷ ದಯಾನಂದ ಶೆಟ್ಟಿ ದೆಂದೂರು, ಪ್ರಸಾದ್‌ ನೇತ್ರಾಲಯ ಉಡುಪಿ ಇದರ ವೈದ್ಯಾಧಿಕಾರಿ ಡಾ| ಕ್ರಿಸ್‌Õ ಡಿ’ಸೋಜಾ, ಶಾಲಾಡಳಿತ ಮಂಡಳಿ ಸದಸ್ಯರಾದ ಸುಕನ್ಯಾ ಶಿವಾಜಿ ಎಸ್‌. ಸುವರ್ಣ ವೇದಿಕೆಯಲ್ಲಿದ್ದರು.

ಡಾ| ಕ್ರಿಸ್‌Õ ಮಾತನಾಡಿ ಕಣ್ಣಿನ ಜೋಪಾಸನೆ ಪ್ರತಿಯೋರ್ವ ಕರ್ತವ್ಯವಾಗಿದೆ. ಕಣ್ಣಿನ ಉತ್ತಮ ಆರೋಗ್ಯ ಮತ್ತು ಕಾರ್ಯ ನಿರ್ವಹಣೆಗೆ ಹಲವು ಪರಿಸರ ಮತ್ತು ವೈಯಕ್ತಿಕ ಕಾರಣಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಬಾಲ್ಯಾವಸ್ಥೆಯಲ್ಲೇ ನೇತ್ರ ರಕ್ಷಣೆಯನ್ನು ಪ್ರಧಾನವಾಗಿಸಿ ಅವುಗಳ ಪಾಲನೆ ಮಾಡಬೇಕು ಎಂದು ಮಾಹಿತಿಯನ್ನು ಹಂಚಿಕೊಂಡರು.

ದಯಾನಂದ ದೆಂದೂರು ಮಾತನಾಡಿ, ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿಸುವ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮ ಇದಾಗಿದೆ. ಅಂಧಕಾರಮುಕ್ತ ಬಾಳಿಗೆ
ಇಂತಹ ಕಾರ್ಯಕ್ರಮಗಳು ಪೂರಕ ವಾಗಿದ್ದು, ಪೋಷಕರು ಈ ಬಗ್ಗೆ ಅತ್ಯಂತ ಸೂಕ್ಷ ¾ ವಿಚಾರವಾಗಿ ಪರಿಗಣಿಸಿ ಮಕ್ಕಳ ಕಣ್ಣಿನ ಆರೋಗ್ಯದತ್ತ ಗಮನಿಸಬೇಕು. ದೃಷ್ಟಿ ಸರಿಯಿದ್ದಾಗ ಮಾತ್ರ ಸಮಾಜವನ್ನು ಒಳ್ಳೆಯ ದೃಷ್ಟಿಯಿಂದ ಕಾಣಲು ಸಾಧ್ಯ ಎಂದರು.

Advertisement

ಪ್ರಸಾದ್‌ ನೇತ್ರಾಲಯ ಉಡುಪಿ ಸಂಸ್ಥೆಯ ಎಸ್‌. ನವ್ಯಾ, ಕೆ. ಅಮರ್‌ನಾಥ್‌, ಹರ್ಷಾ ಪೂಜಾರಿ, ಮಧು ವರ್ಗೀಸ್‌ ಉಪಸ್ಥಿತರಿದ್ದು ವಿದ್ಯಾರ್ಥಿಗಳ ಕಣ್ಣಿನ ತಪಾಸಣೆ ಮಾಡಿದರು. ಅಧ್ಯಕ್ಷ ಚಂದ್ರಶೇಖರ ಪೂಜಾರಿ ಅತಿಥಿಗಳನ್ನು ಸ್ಮರಣಿಕೆಯನ್ನಿತ್ತು ಅಭಿ ನಂದಿಸಿದರು. ಚಂದ್ರ ಪೂಜಾರಿ ಶಂಕರಪುರ, ಹೊನ್ನಯ ಶೆಟ್ಟಿ ಮತ್ತಿತರ ಗಣ್ಯರು, ಶಿಕ್ಷಕ-ಶಿಕ್ಷಕೇತರ ಸಿಬಂದಿ, ವಿದ್ಯಾರ್ಥಿಗಳ ನೂರಾರು ಪಾಲಕರು ಉಪಸ್ಥಿತರಿದ್ದರು. 

ಕು| ಸುರಭಿ ಜೋಗಿ ಪ್ರಾರ್ಥನೆಗೈದರು. ಶಾಲಾ ಆಡ ಳಿತಾಧಿಕಾರಿ ಜಿನರಾಜ್‌ ಸಿ. ಸಾಲ್ಯಾನ್‌ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಗಳನ್ನಾಡಿದರು.
ಸಂಗೀತಾ ವಿ. ಕೋಟ್ಯಾನ್‌ ಅತಿಥಿಗಳನ್ನು ಪರಿಚಯಿಸಿ ಕಾರ್ಯ ಕ್ರಮ ನಿರೂಪಿಸಿದರು. ಮುಖ್ಯಶಿಕ್ಷಕಿ ಉಷಾ ಸತೀಶ್‌ ವಂದಿಸಿದರು. 

 ಮನುಷ್ಯನಲ್ಲಿ ಒಳ್ಳೆಯ ಗುರಿ ಇದ್ದಾಗ ಮಾತ್ರ ಆತನ ಬದುಕು ಸಾರ್ಥಕವಾಗುವುದು. ನಾವು ಎಷ್ಟು ಪ್ರತಿಭಾನ್ವಿತರಾಗಿದ್ದು ಪ್ರಭಾವಿಗಳಾದರೂ ದೃಷ್ಟಿಹೀನರಾಗಿದ್ದರೆ ಬದುಕು ಕತ್ತಲನ್ನಾವರಿಸುತ್ತದೆ. ಇವೆಲ್ಲವನ್ನು ಮನವರಿಸಿ ನಾವು ಇಂತಹ ನೇತ್ರ ತಪಾಸಣಾ ಶಿಬಿರ ಆಯೋಜಿಸಿದ್ದೇವೆ. ಈ ಬಗ್ಗೆ ಶಿಕ್ಷಕರೂ, ಪಾಲಕರೂ ಮಕ್ಕಳಲ್ಲಿ ವಿಶೇಷ ಲಕ್ಷ Â ವಹಿಸಿ ಮಕ್ಕಳ ದೃಷ್ಟಿ ಸೆಳೆಯಬೇಕು. ಮಕ್ಕಳನ್ನು ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ  ಸತ್‌øಜೆಗಳಾಗುವಂತೆ ಪ್ರೇರಕರಾಗಬೇಕು     
  – ಚಂದ್ರಶೇಖರ ಎಸ್‌. ಪೂಜಾರಿ, ಅಧ್ಯಕ್ಷರು , ಬಿಲ್ಲವರ ಅಸೋಸಿಯೇಶನ್‌ ಮುಂಬಯಿ

  ಚಿತ್ರ-ವರದಿ :   ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next