Advertisement
ಜು. 1 ರಂದು ಸೀವುಡ್ ರೈಲ್ವೇ ನಿಲ್ದಾಣ ಸಮೀಪದ ಸ್ಟರ್ಲಿಂಗ್ ಕಾಲೇಜಿನ ಬ್ಯಾಂಕ್ವೆಟ್ ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್ ನವಿಮುಂಬಯಿ ಸ್ಥಳೀಯ ಸಮಿತಿಯ ಪ್ಲಾಟ್ ನಂಬರ್ 32, ಸೆಕ್ಟರ್-10 ಅಂಭೇಡ್ಕರ್ ಭವನದ ಸಮೀಪ, ಸಾನಾ³ಡಾ ಜುಯಿನಗರ ರೈಲು ನಿಲ್ದಾಣ ಹತ್ತಿರ ನಿರ್ಮಾಣವಾಗುತ್ತಿರುವ ಸಮುದಾಯ ಭವನ ಮತ್ತು ಗುರು ಮಂದಿರದ ನಿಮಿತ್ತ ಆಯೋಜಿಸಲಾಗಿದ್ದ ಸಮಾಜ ಬಾಂಧವರ ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಉಪಸ್ಥಿತರಿದ್ದು ಅವರು ಮಾತನಾಡಿದರು.
Related Articles
Advertisement
ನವಿಮುಂಬಯಿ ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷ ವಿಶ್ವನಾಥ ಕೆ. ಪೂಜಾರಿ ಇವರು ಮಾತನಾಡಿ, 1998 ರಲ್ಲಿ ನವಿಮುಂಬಯಿ ಸ್ಥಳೀಯ ಕಚೇರಿ ಸ್ಥಾಪನೆಯಾಗಿದ್ದು, ಆ ಸಮಯದಲ್ಲಿ ಹಿರಿಯರು ಸಮುದಾಯವನ್ನು ಒಟ್ಟಾಗಿಸಲು ಬಹಳಷ್ಟು ಶ್ರಮಿಸಿದ್ದರು. 2006ರಲ್ಲಿ ಸಮಿತಿಯು ಸ್ವಂತ ಕಚೇರಿ ನಿರ್ಮಾಣಕ್ಕಾಗಿ ಸಾನಾ³ಡಾದಲ್ಲಿ ಜಾಗವನ್ನು ಖರೀದಿಸಿತ್ತು. ರಮೇಶ್ ಪೂಜಾರಿ ಅವರ ಸತತ ಪ್ರಯತ್ನದಿಂದ ಇದೀಗ ನಮ್ಮ ಕನಸು ನನಸಾಗುತ್ತಿರುವುದು ಸಂತೋಷ ತಂದಿದೆ. ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಕಟ್ಟಡವು ವಿಶಾಲವಾದ ಸಭಾಗೃಹ ಮತ್ತು ಗುರುಮಂದಿರವನ್ನು ಒಳಗೊಳ್ಳಲಿದೆ. ಅಂದಾಜು 3 ಕೋ. ರೂ. ಗಳ ಯೋಜನೆ ಇದಾಗಿದ್ದು, ಸಮಾಜ ಬಾಂಧವರು ಈ ಯೋಜನೆಯ ಯಶಸ್ಸಿಗೆ ಕೈಜೋಡಿಸಬೇಕು ಎಂದರು. ಈ ಸಂದರ್ಭದಲ್ಲಿ ದಾನಿಗಳೆಲ್ಲರು ನಿಧಿಕುಂಭಕ್ಕೆ ದೇಣಿಗೆ ನೀಡಿದರು. ದಾನಿಗಳನ್ನು ಜಯ ಸಿ. ಸುವರ್ಣ ಇವರು ಗೌರವಿಸಿದರು. ಸಮಾಜ ಬಾಂಧವರು ತಮ್ಮ ಇಚ್ಛೆಯಂತೆ ದೇಣಿಗೆಯನ್ನು ಘೋಷಿಸಿದರು. ಜಯ ಸಿ. ಸುವರ್ಣ ಅವರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆನಂತರ ನಿಧಿ ಕುಂಭಕ್ಕೆ ದೇಣಿಗೆ ನೀಡಿ, ನಿಧಿ ಸಂಗ್ರಹಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ನವಿಮುಂಬಯಿ ಸ್ಥಳೀಯ ಕಚೇರಿಯ ಗೌರವ ಕೋಶಾಧಿಕಾರಿ ಜಯರಾಮ ಪೂಜಾರಿ ಉಪಸ್ಥಿತರಿದ್ದರು. ಸ್ಥಳೀಯ ಕಚೇರಿಯ ಗೌರವ ಕಾರ್ಯದರ್ಶಿ ವಿ. ಕೆ. ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಲ್ಲವರ ಅಸೋಸಿಯೇಶನ್ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ್ ಜಿ. ಅಂಚನ್ ಕಾರ್ಯಕ್ರಮ ನಿರ್ವಹಿಸಿದರು.
ಜತೆ ಕಾರ್ಯದರ್ಶಿ ಎನ್. ಕೆ. ಪೂಜಾರಿ, ಜತೆ ಕೋಶಾಧಿಕಾರಿ ಶೇಖರ ಬಿ. ಪಾಲನ್, ಅರ್ಚಕ ಕೃಷ್ಣ ಕೋಟ್ಯಾನ್ ಸಹಕರಿಸಿದರು. ಬಿಲ್ಲವರ ಅಸೋಸಿಯೇಶನ್ ಪದಾಧಿಕಾರಿಗಳು, ಸದಸ್ಯರು, ವಿವಿಧ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಸಮಾಜ ಬಾಂಧವರು, ಮಹಿಳಾ ಸದಸ್ಯೆಯರು, ಉದ್ಯಮಿಗಳು, ದಾನಿಗಳು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು. ನಿಧಿ ಸಂಗ್ರಹ ಆಯೋಜನಾ ಸಮಿತಿಯ ಕಾರ್ಯದರ್ಶಿ ಗಂಗಾಧರ ಬಂಗೇರ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಹಲವಾರು ಸಮಸ್ಯೆಗಳನ್ನು ಎದುರಿಸಿ ಸತತ ಪ್ರಯತ್ನದಿಂದ 12 ವರ್ಷಗಳ ಬಳಿಕ ನಮಗೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ದೊರಕಿದೆ. ಈ ಕಾರ್ಯ ಕೈಗೂಡಲು ಅನೇಕ ಮಂದಿ ನಮ್ಮೊಂದಿಗೆ ಶ್ರಮಿಸಿದ್ದಾರೆ. ನಾನು ಕಳೆದ 24 ವರ್ಷಗಳಿಂದ ನೆರೂಲ್ ಶ್ರೀ ಶನೀಶ್ವರ ಮಂದಿದ ಅಧ್ಯಕ್ಷನಾಗಿ ಕಳೆದ, 12 ವರ್ಷಗಳಿಂದ ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಇಲ್ಲಿನ ಎಲ್ಲಾ ಸಮಾಜ ಬಾಂಧವರು ನನಗೆ ಗೌರವ, ಪ್ರೀತಿ ಕೊಟ್ಟಿದ್ದಾರೆ. ಧಾರ್ಮಿಕ, ಸಾಮಾಜಿಕ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ಶನಿದೇವರ ಅನುಗ್ರಹವು ನಮ್ಮ ಮೇಲಿದೆ. ಆದ್ದರಿಂದ ನಾವು ಹಮ್ಮಿಕೊಂಡ ಯೋಜನೆಯು ಸಂಪೂರ್ಣಗೊಳ್ಳುವ ವಿಶ್ವಾಸ ನನಗಿದೆ. ನಮ್ಮ ನಾಯಕ ಜಯ ಸಿ. ಸುವರ್ಣ ಅವರಿಗೆ ಸಮಾಜವನ್ನು ಒಗ್ಗೂಡಿಸುವ ಶಕ್ತಿಯಿದೆ. ಅವರ ನೇತೃತ್ವದಲ್ಲಿ ನಾವೆಲ್ಲರೂ ಒಂದಾಗಿ ಸಮುದಾಯ ಭವನ, ಗುರುಮಂದಿರ ನಿರ್ಮಿಸೋಣ. ನಿಮ್ಮೆಲ್ಲರ ಸಹಕಾರ ಸದಾಯಿರಲಿ
– ರಮೇಶ್ ಎಂ. ಪೂಜಾರಿ
ಕಾರ್ಯಾಧ್ಯಕ್ಷರು : ಬಿಲ್ಲವರ ಅಸೋಸಿಯೇಶನ್ ನವಿಮುಂಬಯಿ ಸ್ಥಳೀಯ ಸಮಿತಿ