Advertisement

ಬಿಲ್ಲವರ ಅಸೋಸಿಯೇಶನ್‌ ಲೋನಾವಾಲ: ಅರಸಿನ ಕುಂಕುಮ

05:05 PM Mar 01, 2017 | |

ಪನ್ವೇಲ್‌: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಲೋನಾವಾಲ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ಇತ್ತೀಚೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಂಗಾರ್‌ವಾಡಿಯ ಸುಮಿತ್ರಾ ಸಭಾಗೃಹದಲ್ಲಿ ಜರಗಿತು.

Advertisement

ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷ ಶ್ರೀಧರ ಪೂಜಾರಿ, ಲೋನಾವಾಲ ನಗರಾಧ್ಯಕ್ಷೆ ಸುರೇಖಾ ಜಾಧವ್‌, ಪಿಂಪ್ರಿಯ ಬಿಲ್ಲವ ಸಂಘದ ಮಹಿಳಾಧ್ಯಕ್ಷೆ ಕುಸುಮ್‌ ಆರ್‌. ಸಾಲ್ಯಾನ್‌ ಅವರು  ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಪಿಂಪ್ರಿಯ ಮಹಿಳಾಧ್ಯಕ್ಷೆ ಕುಸುಮಾ ಪೂಜಾರಿ ಅವರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ವಿಜೇತ ಸ್ಪರ್ಧಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಲೋನಾವಾಲದ ನಗರ ಪರಿಷದ್‌ ಚುನಾವಣೆಯಲ್ಲಿ ಚುನಾಯಿತರಾದ ಸಮಿತಿಯ ಗೌರವಾಧ್ಯಕ್ಷ ಶ್ರೀಧರ ಪೂಜಾರಿ ಮತ್ತು ಲೋನಾವಾಲದ ನಗರಾಧ್ಯಕ್ಷೆ ಸುರೇಖಾ ಜಾಧವ್‌ ಅವರನ್ನು ಮಹಿಳಾ ವಿಭಾಗದ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ಸುರೇಖಾ ಜಾಧವ್‌ ಅವರು, ಅರಸಿನ ಕುಂಕುಮವು ಮಹಿಳೆಯರಿಗೆ ಸೌಭಾಗ್ಯದ ಸಂಕೇತವಾಗಿದೆ. ಇದನ್ನು ಮಹಿಳೆಯರು ಬರೀ ಹಬ್ಬದ ದಿನದಂದು ಮಾತ್ರ ಆಚರಿಸದೆ ಪ್ರತಿದಿನ ಅದರ ಮಹತ್ವವನ್ನು ಅರಿತುಕೊಂಡು ಮುಂದುವರಿಯಬೇಕು. ಈ ಸಮಿತಿಯವರು ಪ್ರತೀ ವರ್ಷ ನನ್ನನ್ನು ಕರೆಸಿ ಅಭಿನಂದಿಸುತ್ತಾರೆ. ನನಗೆ ಬಹಳ ಸಂತೋಷವಾಗುತ್ತಿದೆ. ಮಹಿಳೆ ಯರು ಸಮಾಜ ಸೇವೆಯಲ್ಲಿ ತೊಡಗಿ ಸಂಘಟನೆಯನ್ನು ಬಲಗೊಳಿಸಬೇಕು ಎಂದರು.

ಶ್ರೀಧರ ಪೂಜಾರಿ ಅವರು ಮಾತನಾಡಿ, ಮಹಿಳಾ ವಿಭಾಗದಿಂದ ಪ್ರತಿವರ್ಷ ಅರ್ಥ ಪೂರ್ಣ ಕಾರ್ಯಕ್ರಮ ನಡೆಯುತ್ತಿದ್ದು, ಅಭಿನಂದನೀಯ. ಇಂದು ನನಗೆ ಮಾಡಿದ ಸಮ್ಮಾನವನ್ನು ಸಮಾಜಕ್ಕೆ ಅರ್ಪಿಸುತ್ತಿದ್ದೇನೆ. ನಾನೋರ್ವ ರಾಜಕೀಯದ ವ್ಯಕ್ತಿಯೆಂದು ನನ್ನನ್ನು ಎಲ್ಲಾ ಕಡೆ ಅಭಿನಂದಿಸುತ್ತಿದ್ದಾರೆ. ಸಮಾಜದ ಯುವಕರು ರಾಜಕೀಯ ಪ್ರವೇಶಿಸಿ ಸಮಾಜ ಸೇವೆಯಲ್ಲಿ ತೊಡಗಬೇಕು ಎಂದರು. ಪ್ರೇಮಾ ಆರ್‌. ಪೂಜಾರಿ, ಮಹಿಳಾ ವಿಭಾಗದ ಸದಸ್ಯೆಯರಾದ ಜಯಂತಿ ವಿ. ಕಮಲ್‌, ದೇವಕಿ ಅಮೀನ್‌, ವಸಂತಿ ಶೆಟ್ಟಿ, ನಳಿನಿ ಶೆಟ್ಟಿ, ಶಾರದಾ ಪೂಜಾರಿ ಉಪಸ್ಥಿತರಿದ್ದರು.

Advertisement

ಮಹಿಳಾ ವಿಭಾಗದ ಮೀನಾಕ್ಷೀ ಪೂಜಾರಿ, ಕುಸುಮಾ ಎಸ್‌. ಪೂಜಾರಿ, ಪ್ರೀತಿ ಎಸ್‌. ಪೂಜಾರಿ, ಸುಕನ್ಯಾ ಪೂಜಾರಿ, ಇತರ ಸದಸ್ಯೆಯರು, ಮಕ್ಕಳು, ಯುವಕರು, ಸ್ಥಳೀಯ ಕಚೇರಿಯ ಸದಸ್ಯರು, ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಮಿತಿಯ ಕಾರ್ಯಾಧ್ಯಕ್ಷ ರವಿ ಪೂಜಾರಿ, ಉಪಕಾರ್ಯಾಧ್ಯಕ್ಷ ಆನಂದ ಪೂಜಾರಿ, ಕಾರ್ಯದರ್ಶಿ ಸುಜಾತಾ ಪೂಜಾರಿ, ಜತೆ ಕಾರ್ಯದರ್ಶಿ ಗಣೇಶ್‌ ಪೂಜಾರಿ, ಶೇಖರ್‌ ಬಿ. ಪೂಜಾರಿ, ಶೇಖರ್‌ ಎಂ. ಪೂಜಾರಿ, ಸುರೇಶ್‌ ಪೂಜಾರಿ, ಸತೀಶ್‌ ಪೂಜಾರಿ, ರಾಜೇಶ್‌ ಪೂಜಾರಿ, ಉಷಾ ಪೂಜಾರಿ, ಲತಾ ಪೂಜಾರಿ, ವಿಲಾಸಿನಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾಯೋಜ ಕತ್ವವನ್ನು ಮೀನಾಕ್ಷೀ ಪೂಜಾರಿ ಮತ್ತು ಸುಕನ್ಯಾ ಪೂಜಾರಿ ಅವರು ವಹಿಸಿದ್ದರು. ಕೊನೆಯಲ್ಲಿ ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಆಶಾ ಪೂಜಾರಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next