Advertisement

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ : ಸಂಕ್ರಾಂತಿ ಸಂಭ್ರಮ

02:24 PM Jan 16, 2018 | Team Udayavani |

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ  ಇದರ ಮಹಿಳಾ ವಿಭಾಗದ ವತಿಯಿಂದ ಜ. 14ರಂದು ಸಾಂತಾಕ್ರೂಜ್‌ ಪೂರ್ವ ಬಿಲ್ಲವ ಭವನದಲ್ಲಿ ಸಾಂಪ್ರದಾಯಿಕವಾಗಿ ವಾರ್ಷಿಕ ಮಕರ ಸಂಕ್ರಮಣ ಸಂಭ್ರಮ ಮತ್ತು ಅರಸಿನ ಕುಂಕುಮ ಕಾರ್ಯಕ್ರಮವು ನಡೆಯಿತು.

Advertisement

ಪ್ರಾರಂಭದಲ್ಲಿ ಮಹಿಳಾ ವಿಭಾಗದ ಪದಾಧಿಕಾರಿ ಗಳು ಭವನದಲ್ಲಿನ  ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಪೂಜೆ ನೆರವೇರಿಸಿದ ಬಳಿಕ ಅಸೋಸಿಯೇಶನ್‌ನ ಮಹಿಳಾ ವಿಭಾಗಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್‌ ಮಕರ ಸಂಕ್ರಮಣಕ್ಕೆ ಚಾಲನೆ ನೀಡಿದರು. ಬಳಿಕ ನಡೆಸಲ್ಪಟ್ಟ ಅರಸಿನ ಕುಂಕುಮ ಕಾರ್ಯಕ್ರಮವನ್ನು ಅಸೋಸಿಯೇಶನ್‌ನ ಅಧ್ಯಕ್ಷ  ನಿತ್ಯಾನಂದ ಡಿ. ಕೋಟ್ಯಾನ್‌ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಯಾಗಿ ಶನಿ ಮಂದಿರ ನೆರೂಲ್‌ ಇದರ ಮಹಿಳಾ ವಿಭಾಗಧ್ಯಕ್ಷೆ ವೀಣಾ ವಿಶ್ವನಾಥ್‌ ಪೂಜಾರಿ, ಗೌರವ ಅತಿಥಿಗಳಾಗಿ  ನಗರದ ಹೆಸರಾಂತ ವೈದ್ಯಾಧಿಕಾರಿ ಡಾ| ಅದಿತಿ ಅಗರ್ವಾಲ್‌ ಮತ್ತು  ಮೀರಾರೋಡ್‌ನ‌ ವಕೋಡಾ ಆಸ್ಪತ್ರೆಯ ಉನ್ನತಾಧಿಕಾರಿ ಮಾಧವ ಐಲ್‌ ಮತ್ತು ಸಮಾಜ ಸೇವಕಿ ಯಶೋದಾ ಎನ್‌. ಟಿ ಪೂಜಾರಿ, ಅಸೋಸಿಯೇಶನ್‌ನ ಉಪಾಧ್ಯಕ್ಷ ಪುರುಷೋತ್ತಮ ಎಸ್‌. ಕೋಟ್ಯಾನ್‌ ಹಾಗೂ ಗೌರವ ಪ್ರಧಾನ ಕೋಶಾಧಿಕಾರಿ ಮಹೇಶ್‌ ಸಿ. ಕಾರ್ಕಳ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ವಿಲಾಸಿನಿ ಕೆ. ಸಾಲ್ಯಾನ್‌, ಮಾಜಿ ಕಾರ್ಯಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಮಲತಾ ವಿ. ಅಮೀನ್‌, ಪೂಜಾ ಪಿ. ಕೋಟ್ಯಾನ್‌, ಗಿರಿಜಾ ಚಂದ್ರಶೇಖರ್‌ ಮತ್ತು ಬಳಗ ಪ್ರಾರ್ಥನೆಗೈದರು. ಜಯಂತಿ ಎಸ್‌. ಕೋಟ್ಯಾನ್‌ ಮತ್ತು ವನಿತಾ ಎ. ಕುಕ್ಯಾನ್‌ ಅತಿಥಿಗಳನ್ನು ಪರಿಚುಸಿದರು. ಗೌರವ ಪ್ರಧಾನ  ಕಾರ್ಯದರ್ಶಿ ಸುಮಿತ್ರಾ ಎಸ್‌. ಬಂಗೇರ ಕಾರ್ಯಕ್ರಮ ನಿರ್ವಹಿಸಿದರು. ಜೊತೆ ಕಾರ್ಯದರ್ಶಿ ಲಕ್ಷಿ¾à ಎಸ್‌. ಪೂಜಾರಿ ವಂದಿಸಿದರು. ಅರಸಿನ ಕುಂಕುಮ ಕಾರ್ಯಕ್ರಮ ಆಚರಣೆಗೈದ ಮಹಿಳಾ  ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕರಿಸಿದರು.

ಈ ಸಂದರ್ಭದಲ್ಲಿ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಪ್ರಭಾ ಕೆ. ಬಂಗೇರ, ಜೊತೆ ಕಾರ್ಯದರ್ಶಿ ಡಾ| ಗೀತಾಂಜಲಿ ಎಲ್‌. ಸಾಲ್ಯಾನ್‌, ಸದಸ್ಯೆಯರುಗಳಾದ ಚಂದ್ರಕಲಾ ಆರ್‌. ಸುವರ್ಣ, ಸಬಿತಾ ಪೂಜಾರಿ, ಗಿರಿಜಾ ಬಿ. ಪೂಜಾರಿ, ವತ್ಸಲಾ ಕೆ. ಪೂಜಾರಿ, ಲೀಲಾ ಡಿ. ಪೂಜಾರಿ, ವಿಶೇಷ ಆಮಂತ್ರಿತ ಸದಸ್ಯೆಯರುಗಳಾದ ಶೋಭಾ ಎಸ್‌. ಪೂಜಾರಿ, ಪ್ರೇಮಾ ಆರ್‌. ಕೋಟ್ಯಾನ್‌, ಭವಾನಿ ಸಿ. ಕೋಟ್ಯಾನ್‌, ವನಿತಾ ಎ. ಕುಕ್ಯಾನ್‌, ಪ್ರಭಾ ಸುವರ್ಣ, ರೇಖಾ ಎಸ್‌. ಪೂಜಾರಿ, ಮೀರಾ ಡಿ. ಕೋಟ್ಯಾನ್‌, ಸುಧಾ ಎಲ್‌. ಅಮೀನ್‌, ಸವಿತಾ ಗಂಗಾಧರ್‌ ಪೂಜಾರಿ, ಧಯಶ್ರೀ ಸುರೇಂದ್ರ ಪೂಜಾರಿ ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡು  ಪರಸ್ಪರ ಬಾಗಿನ ನೀಡಿ, ಎಳ್ಳುಂಡೆಯನ್ನಿತ್ತು ಸಂಪ್ರದಾಯಿಕವಾಗಿ ಮಕರ ಸಂಕ್ರಮಣ ಆಚರಿಸಿದರು. 

Advertisement

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next