Advertisement

ಬಿಲ್ಲವರ ಅ. ಮೀರಾರೋಡ್‌ ಸ್ಥಳೀಯ ಸಮಿತಿಯ ವಾರ್ಷಿಕೋತ್ಸವ

04:03 PM Jan 30, 2018 | |

ಮುಂಬಯಿ: ಕೆಲವೊಂದು ಒತ್ತಡಗಳಿಂದ ಮಿದುಳಿನ ಕಾರ್ಯಕ್ಕೆ ಅಡಚಣೆ ಬಂದಾಗ ಮನುಷ್ಯ ವಿವಿಧ ರೋಗಗಳಿಗೆ ತುತ್ತಾಗಿ ಆಸ್ಪತ್ರೆ ಸೇರುವ ಪ್ರಸಂಗ ಎದುರಾಗುತ್ತದೆ. ಇಂತಹ ಸಮಯದಲ್ಲಿ ಧ್ಯಾನ, ವ್ಯಾಯಾಮದ ಮೊರೆ ಹೋಗುವುದು ಉತ್ತಮ. ಕಾಯಿಲೆ ಬಿದ್ದ ಮನುಷ್ಯನಿಗೆ ವೈದ್ಯಕೀಯ ಆಶ್ರಯದೊಂದಿಗೆ ಭಗವಂತನ ಕೃಪಾದೃಷ್ಟಿ ಬಹಳ ಅಗತ್ಯ. ದೇವರ ಧ್ಯಾನದಿಂದ ಮತ್ತು ಭಕ್ತಿಯಿಂದ ಸಕಲ ರೋಗಗಳು ದೂರವಾಗುತ್ತವೆ. ಈ ನಿಟ್ಟಿನಲ್ಲಿ ಬಿಲ್ಲವರ ಅಸೋಸಿಯೇಶನ್‌ ವಿದ್ಯಾದಾನ ಇನ್ನಿತರ ಕಾರ್ಯ ಯೋಜನೆಗಳೊಂದಿಗೆ ಆರೋಗ್ಯ ನಿಧಿಯನ್ನು ಸ್ಥಾಪಿಸಿ ಆರೋಗ್ಯದ ಬಗ್ಗೆ ಚಿಂತಿಸುತ್ತಿರುವುದು ಅಭಿನಂದನೀಯ ಎಂದು ತುಂಗಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಮತ್ತು ಸಹ ಸಂಸ್ಥಾಪಕ ರಾಜೇಶ್‌ ಶೆಟ್ಟಿ ಅವರು ಹೇಳಿದರು.

Advertisement

ಜ. 20ರಂದು ಮೀರಾರೋಡ್‌ನ‌ ಸೆಕ್ಟರ್‌-4ರ ರಾಜೀವ್‌ ಗಾಂಧಿ ಮೈದಾನದಲ್ಲಿ ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌ ಸ್ಥಳೀಯ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ 18ನೇ ವಾರ್ಷಿಕೋತ್ಸವ ಮತ್ತು ಆರೋಗ್ಯ ನಿಧಿ ಸಂಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಇವರು, ನಮ್ಮ ಅಹಂ ಹಾಗೂ ನಾನು ಎಂಬುವುದನ್ನು ಬಿಟ್ಟು ಒಗ್ಗಟ್ಟಿನಿಂದ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಸರ್ವರೂ ಇಂತಹ ಕೆಲಸಕ್ಕೆ ಸಹಕರಿಸಬೇಕು ಎಂದರು. 

ಅತಿಥಿಯಾಗಿ ಪಾಲ್ಗೊಂಡ ಉದ್ಯಮಿ ಬೋಳ ರವಿ ಪೂಜಾರಿ ಅವರು ಮಾತನಾಡಿ, ಆರೋಗ್ಯ ನಿಧಿಗೆ ತಮ್ಮ ಸಹಕಾರ ನೀಡುವ ಭರವಸೆಯೊಂದಿಗೆ ಇತ್ತೀಚೆಗೆ ತನ್ನ ಮುಂದಾಳತ್ವದಲ್ಲಿ ಸ್ಥಾಪನೆಗೊಂಡ ತುಳುವ ಶಕ್ತಿ ಸಂಘಟನೆಯು ಬಡವರ, ದೀನದಲಿತರ ಕಣ್ಣೀರೊರೆಸುವ ಕೆಲಸ ಮಾಡಿ ವೈದ್ಯಕೀಯ ಸಹಾಯ ನೀಡಲಿದೆ ಎಂದರು.

ಸ್ಥಳೀಯ ಶಾಸಕ ನರೇಂದ್ರ ಎಲ್‌. ಮೆಹ್ತಾ ಅವರು ಮಾತನಾಡಿ, ಬಿಲ್ಲವರ ಅಸೋಸಿಯೇಶನ್‌ನ ಕಾರ್ಯವೈಖರಿ ಅಭಿನಂದನೀಯವಾಗಿದೆ. ಆರೋಗ್ಯ ನಿಧಿಗೆ ಸರ್ವರ ಸಹಕಾರ ಅಗತ್ಯವಾಗಿದ್ದು, ಇದರ ಪ್ರಯೋಜನ ಅರ್ಥಪೂರ್ಣವಾಗಿ ಸಿಗುವಂತಾಗಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಸಮಿತಿಯ ಸದಸ್ಯ ನಟ, ನಿರ್ದೇಶಕ ಜಿ. ಕೆ. ಕೆಂಚನಕೆರೆ ಹಾಗೂ ಸಮಾಜ ಸೇವಕಿ ಲೀಲಾ ಡಿ. ಪೂಜಾರಿ ದಂಪತಿಗಳನ್ನು  ಸಮ್ಮಾನಿಸಲಾಯಿತು. 

Advertisement

ಸಮ್ಮಾನಿತರು ಸಂದಭೋìಚಿತವಾಗಿ ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಆರಂಭದಲ್ಲಿ ಗುರುದೇವರ ಪೂಜೆ ನಡೆಯಿತು. ಮಹಿಳೆಯರಿಗೆ ಅರಸಿನ ಕುಂಕುಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಭಾರತ್‌ ಬ್ಯಾಂಕ್‌ನ ಸಾಂತಾಕ್ರೂಜ್‌ ಶಾಖೆಯ ಪ್ರಬಂಧಕ ದಯಾನಂದ ಅಮೀನ್‌ ಅವರು ಅರಸಿನ ಕುಂಕುಮ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. 

ಸದಸ್ಯರು ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮಹಿಳಾ ಸದಸ್ಯೆಯರು ಪ್ರಾರ್ಥನೆಗೈದರು. ಮೀರಾರೋಡ್‌ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ವಿಶ್ವನಾಥ ಸಾಲ್ಯಾನ್‌ ಅವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಬಿಲ್ಲವರ ಅಸೋಸಿಯೇಶನ್‌ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ್‌ ಜಿ. ಅಂಚನ್‌ ಅವರು ಅಸೋಸಿಯೇಶನ್‌ನ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. 

ಸ್ಥಳೀಯ ಸಮಿತಿಯ ಕಾರ್ಯದರ್ಶಿ ಎನ್‌. ಪಿ. ಕೋಟ್ಯಾನ್‌ ವಂದಿಸಿದರು. ದಯಾನಂದ ಅಮೀನ್‌ ಮತ್ತು ಅಂಕಿತಾ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

ವೇದಿಕೆಯಲ್ಲಿ ಯೋಗೇಶ್‌ ಪೂಜಾರಿ, ದೀಪಕ್‌ ಪಂಚಸಾರಾ, ಅವಿನಾಶ್‌ ಗುರವ್‌, ಭಾರತ್‌  ಬ್ಯಾಂಕಿನ ನಿರ್ದೇಶಕ ಗಂಗಾಧರ   ಪೂಜಾರಿ, ಜಿಒಸಿ ನಾಗೇಶ್‌ ಪೂಜಾರಿ, ಸ್ಥಳೀಯ ಕಚೇರಿಯ ಉಪಾಧ್ಯಕ್ಷರುಗಳಾದ ಸುಂದರ ಪೂಜಾರಿ, ಭೋಜ ಸಾಲ್ಯಾನ್‌, ಜತೆ ಕೋಶಾಧಿಕಾರಿ ವಿಜಯ ಅಮೀನ್‌ ಮೊದಲಾದವರು ಉಪಸ್ಥಿತರಿದ್ದರು. 

ಸರ್ವ ಸದಸ್ಯರು, ಮಹಿಳಾ ವಿಭಾಗ ಮತ್ತು ಯುವ ವಿಭಾಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕರುಣಾಕರ ಕೆ. ಕಾಪು ನಿರ್ದೇಶನದಲ್ಲಿ ಅಭಿನಯ ಮಂಟಪ ಕಲಾವಿದರಿಂದ ಪುರ್ಸೊತ್ತಿಜ್ಜಿ ನಾಟಕ ಪ್ರದರ್ಶನಗೊಂಡಿತು.

ಒಬ್ಬನಿಂದ ಎಲ್ಲರಿಗೂ ಸಹಾಯ ಮಾಡಲು ಕಷ್ಟ ಸಾಧ್ಯ. ಆದರೆ ಎಲ್ಲರೂ ಕೂಡಿ ಬೇಕಾದವರಿಗೆ ಸಹಾಯ ಹಸ್ತ ನೀಡುವುದು ಸುಲಭದ ಮಾರ್ಗವಾಗಿದೆ. ಸಮಿತಿಯ ಈ ಯೋಜನೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ದೇವರಲ್ಲಿ ಭಕ್ತಿ ಇಟ್ಟು ಉತ್ತಮ ಕಾರ್ಯವನ್ನು ಮುಂದುವರಿಸಿದಾಗ ಜಯ ನಮ್ಮದಾಗುತ್ತದೆ. 
-ಸಾಣೂರು ಸಾಂತಿಂಜ ಜನಾರ್ಧನ ಭಟ್‌, ಪ್ರಧಾನ ಅರ್ಚಕರು,  ಕಾಶಿಮೀರಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಮುಂಬಯಿಯಲ್ಲಿ ನೆಲೆಸಿರುವ ಸಮಸ್ತ ಬಾಂಧವರನ್ನು ಸಮೀಪದಲ್ಲಿ ಅರಿಯಲು ಹಾಗೂ ಒಂದುಗೂಡಿಸುವ ಉದ್ದೇಶದಿಂದ 23 ಸ್ಥಳೀಯ ಸಮಿತಿಗಳನ್ನು ಸ್ಥಾಪಿಸಲಾಗಿದೆ. ಎಲ್ಲ ಕಚೇರಿಗಳು ಕಾರ್ಯಗತವಾಗಿರುವುದು ಸಂತೋಷದ ವಿಷಯ. ಸದ್ಗುರು ಶ್ರಿ ನಾರಾಯಣ ಗುರುಗಳ ಹಿತವಚನಗಳನ್ನು ಪಾಲಿಸಿ ಒಗ್ಗಟ್ಟಿನಿಂದ ಅನೇಕ ಹೊಸ ಯೋಜನೆಗಳನ್ನು ಹುಟ್ಟು ಹಾಕಿ ಅದರ ಪ್ರಯೋಜನಗಳನ್ನು ಸಮಾಜ ಬಾಂಧವರ ಮನೆ-ಮನಗಳಿಗೆ ತುಲುಪಿಸುವಲ್ಲಿ ಸಮಿತಿಗಳು ಯಶಸ್ವಿಯಾಗಿವೆ. ಮತಾಪಿತರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕೃತಿ ನೀಡಿ ಮಕ್ಕಳು ದಾರಿ ತಪ್ಪದಿರುವಂದು ಹಾಗೂ ಹಿರಿಯರನ್ನು ಗೌರವಿಸುವ ಗುಣವನ್ನು ಹೇಳಿಕೊಡಬೇಕು. 
-ಭಾಸ್ಕರ ವಿ. ಬಂಗೇರ, ಉಪಾಧ್ಯಕ್ಷರು, 
ಬಿಲ್ಲವರ ಅಸೋಸಿಯೇಶನ್‌ ಮುಂಬಯಿ).

Advertisement

Udayavani is now on Telegram. Click here to join our channel and stay updated with the latest news.

Next