Advertisement

“ಗುರುಗಳ ತತ್ತ್ವ-ಆದರ್ಶ ಬದುಕಿನಲ್ಲಿ ಅಳವಡಿಸಿಕೊಳ್ಳಿ’

02:54 PM Sep 12, 2021 | Team Udayavani |

ಮಲಾಡ್‌: ಬಿಲ್ಲವರ ಅಸೋಸಿಯೇಶನ್‌ ಮಲಾಡ್‌ ಸ್ಥಳೀಯ ಕಚೇರಿಯ ವತಿಯಿಂದ ಬ್ರಹ್ಮಶ್ರೀ ಗುರುನಾರಾಯಣ ಜಯಂತಿ ಆಚರಣೆ ಆ. 28ರಂದು ಮಲಾಡ್‌ ಪೂರ್ವದ ಕಾರ್ಯಾಲ ಯದಲ್ಲಿ ಜರಗಿತು.

Advertisement

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುದೇವರ ಅನುಗ್ರಹ ಪಡೆದರು. ಕಾರ್ಯಕ್ರಮದಲ್ಲಿ ಬಿಲ್ಲವರ ಅಸೋಸಿಯೇಶನ್‌ ಉಪಾಧ್ಯಕ್ಷ ಶಂಕರ್‌ ಡಿ. ಪೂಜಾರಿ, ಬಿಲ್ಲವರ ಅಸೋಸಿಯೇಶನ್‌ನ ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್‌ದಾಸ್‌ ಜಿ. ಪೂಜಾರಿ, ಕಾಂದಿವಲಿ ಸ್ಥಳೀಯ ಕಚೇರಿಯ ಮಾಜಿ ಕಾರ್ಯಾಧ್ಯಕ್ಷ ಗಂಗಾಧರ ಜೆ. ಪೂಜಾರಿ, ಭಾರತ್‌ ಕೋ-ಆಪರೇಟಿವ್‌ ಬ್ಯಾಂಕ್‌ನ ನಿರ್ದೇಶಕರಾದ ಸೂರ್ಯಕಾಂತ್‌ ಜಯ ಸುವರ್ಣ, ಭಾಸ್ಕರ್‌ ಸಾಲ್ಯಾನ್‌, ನ್ಯಾಯವಾದಿ ಸೋಮನಾಥ ಅಮೀನ್‌, ಖಾರ್‌ ಶ್ರೀ ಶನಿ ಮಂದಿರದ ಗೌರವಾಧ್ಯಕ್ಷ ಶಂಕರ್‌ ಸುವರ್ಣ, ಉದ್ಯಮಿ ಗಳಾದ ಗಂಗಾಧರ ಸನಿಲ್‌, ನವೀನ್‌ ಕರ್ಕೇರ, ಸುರೇಶ್‌ ಕರ್ಕೇರ, ತುಳಸಿದಾಸ್‌ ಅಮೀನ್‌, ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಕೃಷ್ಣ ಪೂಜಾರಿ, ಜತೆ ಕಾರ್ಯದರ್ಶಿ ಶಂಕರ್‌ ಪೂಜಾರಿ ಗುರು ಪೂಜೆಯ ಮಹಾಪ್ರಸಾದವನ್ನು ಸ್ವೀಕರಿಸಿದರು.

ಪೂಜೆಯ ಬಳಿಕ ನಡೆದ ಕಿರು ಸಭಾ ಕಾರ್ಯಕ್ರಮದಲ್ಲಿ ಶಂಕರ್‌ ಡಿ. ಪೂಜಾರಿ ಮಾತನಾಡಿ, ಎಲ್ಲ ಕಚೇರಿಯ ಮೂಲಕ ಸಮಾಜ-ಬಾಂಧವರು ಸಂಘಟಿತರಾಗುತ್ತಿದ್ದಾರೆ. ಮಲಾಡ್‌ ಸದಸ್ಯರು ಮತ್ತು ಕಾರ್ಯಾಧ್ಯಕ್ಷ ಸಂತೋಷ್‌ ಪೂಜಾರಿಯವರು ತಮ್ಮ ಸೇವೆ ಮಾಡುತ್ತಾ ಸ್ಥಳೀಯ ಕಚೇರಿಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ ಎಂದು ತಿಳಿಸಿ, ಒಬಿಸಿ ಅಗತ್ಯದ ಬಗ್ಗೆ ಮತ್ತು ಅದನ್ನು ಅಸೋಸಿಯೇಶನ್‌ನಲ್ಲಿ ಪಡೆಯುವ ಬಗ್ಗೆ ವಿವರಿಸಿ ಬ್ರಹ್ಮಶ್ರೀ ನಾರಾಯಣಗುರುಗಳ ತತ್ತ್ವ, ಆದರ್ಶವನ್ನು ಬದುಕಿನಲ್ಲಿ ರೂಪಿಸಿಕೊಳ್ಳಬೇಕು ಎಂದರು.

ಇದನ್ನೂ ಓದಿ:ಹೆಚ್ಚಿದ ಮಳೆ ಪ್ರಮಾಣ : ಚಾರ್ಮಾಡಿ ಘಾಟಿ 7ನೇ ತಿರುವಿನಲ್ಲಿ ರಸ್ತೆಗೆ ಉರುಳಿ ಬಿದ್ದ ಬಂಡೆ

ಮಾಜಿ ಗೌರವ ಕಾರ್ಯಾಧ್ಯಕ್ಷ ಸುಭಾಷ್‌ ಅಮೀನ್‌, ಮಾಜಿ ಕಾರ್ಯಾಧ್ಯಕ್ಷ ಸುರೇಂದ್ರ ಪೂಜಾರಿ, ಮಲಾಡ್‌ ಕನ್ನಡ ಸಂಘದ ಪದಾಧಿಕಾರಿಗಳು, ಶ್ರೀ ಮಹಮ್ಮಾಯಿ ದುರ್ಗಾಪರಮೇಶ್ವರೀ ದೇವಸ್ಥಾನದ ಧರ್ಮದರ್ಶಿ ರವಿ ಸ್ವಾಮೀಜಿ, ಶಂಕರ ಸುವರ್ಣ, ಮಲಾಡ್‌ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಕೋಶಾಧಿಕಾರಿ ಜಗನ್ನಾಥ್‌ ಮೆಂಡನ್‌ ಹಾಗೂ ಅಪಾರ ಭಕ್ತರು ಉಪಸ್ಥಿತರಿದ್ದರು.

Advertisement

ಗುರುಪೂಜೆಯಯನ್ನು ಜಯ ಪೂಜಾರಿ ನೆರವೇರಿಸಿದರು. ವಿಶ್ವನಾಥ್‌ ಪೂಜಾರಿ ಅವರಿಂದ ಸೇವಾರೂಪದಲ್ಲಿ ಗುರುಗಳ ಮಂಟಪ ಶೃಂಗಾರ ಗೊಂಡಿತ್ತು. ಶೇಖರ್‌ ಸಸಿಹಿತ್ಲು ಮತ್ತು ವಾಸು ಪೂಜಾರಿ, ಪ್ರಶಾಂತ್‌ ಪೂಜಾರಿ ಭಜನೆ ನಡೆಸಿದರು. ಪಾಲ್ಗೊಂಡ ಭಕ್ತರೆಲ್ಲರಿಗೂ ಪ್ರಸಾದವನ್ನು ನಿತ್ಯಾನಂದ ಪೂಜಾರಿ ನೀಡಿದರು. ಕಾರ್ಯಕರ್ತರಾದ ಮಹಾಬಲ ಪೂಜಾರಿ, ಸುಂದರ ಪೂಜಾರಿ, ರಾಮ ಪೂಜಾರಿ, ಹರಿಶ್ಚಂದ್ರ ಸುವರ್ಣ, ಗೋಪಾಲ್‌ ಪೂಜಾರಿ, ದೀಕ್ಷಿತ್‌ ಪೂಜಾರಿ, ಬಿ. ಆರ್‌. ಕರ್ಕೇರ ಮತ್ತಿತರ ಸದಸ್ಯರು, ಮಹಿಳಾ ಸದಸ್ಯರು, ಯುವ ವಿಭಾಗದ ಸದಸ್ಯರು ಪೂಜೆ ಯಶಸ್ವಿಗೊಳಿಸುವಲ್ಲಿ ಸಹಕರಿಸಿದರು.

ಸಮಿತಿಯಿಂದ ಸೇವಾ ಕಾರ್ಯ
ಕೋವಿಡ್‌ ಸೋಂಕಿನ ಕಾರಣ ಹೆಚ್ಚು ಜನರನ್ನು ಸೇರಿಸುವುದು ಅಸಾಧ್ಯವಾಗಿದ್ದು, ಸರಕಾರದ ನಿಯಮವನ್ನು ಪಾಲಿಸಬೇಕಾಗಿದೆ. ಆದ್ದರಿಂದ ಹೆಚ್ಚು ವಿಜೃಂಭಣೆ ಮಾಡದೆ ಭಕ್ತಿಯಿಂದ ಗುರುಗಳನ್ನು ಸ್ಮರಿಸಿಕೊಂಡು ಭಜನೆಯಲ್ಲಿ ಸಾಕ್ಷಾತ್ಕರಿಸಿದ್ದೇವೆ. ಅಸೋಸಿಯೇಶನ್‌ನ ಹಲವು ಯೋಜನೆಗಳು ಮಲಾಡ್‌ ಪರಿಸರದಲ್ಲಿ ತಳಮಟ್ಟದ ಸಮಾಜ ಬಾಂಧವರಿಗೆ ಬಹಳಷ್ಟು ಸಹಕಾರಿಯಾಗಿದೆ. ನಮ್ಮ ಮಾರ್ಗದರ್ಶಕರಾದ ಜಯ ಸುವರ್ಣರ ಆಶೀರ್ವಾದದಿಂದ ಸಮಿತಿ ಸೇವಾ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ನಾರಾಯಣಗುರುಗಳ ನಾಮಸ್ಮರಣೆಯಿಂದ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ.
-ಸಂತೋಷ್‌ ಪೂಜಾರಿ, ಕಾರ್ಯಾಧ್ಯಕ್ಷರು, ಬಿಲ್ಲವರ ಅಸೋಸಿಯೇಶನ್‌ ಮಲಾಡ್‌ ಸ್ಥಳೀಯ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next