Advertisement

ಬಿಲ್ಲವರ ಅಸೋಸಿಯೇಶನ್‌ ಬೊರಿವಲಿ-ದಹಿಸರ್‌ : ಆಟಿಡೊಂಜಿ ಕೂಟ

04:28 PM Jul 25, 2018 | Team Udayavani |

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಬೊರಿವಲಿ-ದಹಿಸರ್‌ ಸ್ಥಳೀಯ ಸಮಿತಿಯ ವಾರ್ಷಿಕ ಆಟಿಡೊಂಜಿ ಕೂಟ ಕಾರ್ಯಕ್ರಮವು ಗೋರೈ-1 ರಲ್ಲಿರುವ ಸ್ಥಳೀಯ ಸಮಿತಿಯ ಕಚೇರಿ ಗುರು ಸನ್ನಿಧಿಯಲ್ಲಿ ವೈವಿಧ್ಯಮಯ ಕಾರ್ಯ ಕ್ರಮಗಳೊಂದಿಗೆ ಜು. 22 ರಂದು ಅಪರಾಹ್ನ ನಡೆಯಿತು.

Advertisement

ಮುಖ್ಯ ಅತಿಥಿಯಾಗಿ ಆಗಮಿಸಿದ ಮೊಗವೀರ ಮಾಸಿಕದ ಸಂಪಾದಕ ಅಶೋಕ್‌ ಸುವರ್ಣ ಇವರು ಗುರುಮೂರ್ತಿ ಸಾನಿಧ್ಯದಲ್ಲಿ ದೀಪ ಬೆಳಗಿಸಿ ಕಲಶದಲ್ಲಿ ಹಿಂಗಾರ ಅರಳಿಸಿ ತುಳುನಾಡ ಪರಂಪರೆಗೆ ಅನುಗುಣವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಊರಿನ ಪರಂಪರೆಯನ್ನು ನವಿ ರುಗೊಳಿಸುವಂತ ಇಂತಹ ಕಾರ್ಯಕ್ರಮ ಉಪಯುಕ್ತವಾಗಿದೆ. ಇದರಿಂದ ಮುಂದಿನ ಜನಾಂಗವು ಫಲಕಾರಿಯಾಗಲಿದೆ. ನಾವು ನಮ್ಮ ಹಿತ್ತಲಿನ ಕೆಲವೊಂದು ಗಿಡಮೂಲಿಕೆಗಳ ಮಹತ್ವ, ಅದರ ಪ್ರಯೋಜನವನ್ನು ಕಂಡುಕೊಂಡಾಗ ಹಲವಾರು ರೋಗರುಜಿನಗಳು ಗುಣ ಮುಖವಾಗಲಿದ್ದು, ಕೆಲವೊಂದು ಎಲೆಯಲ್ಲಿ ಕೀಟನಾಶಕದ ಗುಣವು ಇದೆ. ಇಂದಿನ ಕಾರ್ಯಕ್ರಮದಲ್ಲಿ ಮಹಿಳೆಯರು ತಯಾರಿಸಿದ ಆಟಿ ತಿಂಗಳ ಅಗರಣೆಗಳೂ ಮುಂದಿನ ಜನಾಂಗಕ್ಕೆ ತಿಳುವಳಿಕೆ ನೀಡುವಂಥದ್ದಾಗಿದೆ. ಸ್ವಂತ ಯಜ್ಞಯಾಗಾದಿಗಳ ಮೂಲಕ ಸ್ವತಂತ್ರವಾಗಿ ದೇವರನ್ನು ಪೂಜಿಸಲು ಅನುವು ಮಾಡಿಕೊಟ್ಟಂತಹ ಶ್ರೀ ನಾರಾಯಣ ಗುರುಗಳ ತತ್ವವನ್ನು ಅಧರಣೀಯವಾಗಿ ಅನುಸರಿಸುತ್ತಿರುವ ಬಿಲ್ಲವರ ಅಸೋಸಿಯೇಶನ್‌ ಜಯ ಸಿ. ಸುವರ್ಣರ ಮುಂದಾಳತ್ವದಲ್ಲಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳು ಸಮಾಜದ ಜನರಿಗೆ ಹಾಗೂ ಇತರರಿಗೂ ನೀಡಿ ಸಹಕಾರಿ ಯಾಗಿದೆ. ಬೊರಿವಲಿ ಸಮಿತಿಯ ಈವೊಂದು ಕಾರ್ಯಕ್ರಮವು ಇತರರಿಗೆ ಮಾದರಿಯಾಗಿದೆ ಎಂದು ನುಡಿದರು.

ಅತಿಥಿಯಾಗಿ ಪಾಲ್ಗೊಂಡ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಕೋಟ್ಯಾನ್‌ ಇವರು ಮಾತನಾಡಿ, ಸಂಸಾರದ ಶಿಲ್ಪಿಗಳಾದ ನಾರಿಯರ ಮೇಲೆ ಪ್ರೀತಿ, ಗೌರವ, ಪೂಜ್ಯನೀಯ ಭಾವನೆ ಹೊಂದಿರಬೇಕು. ಅದಕ್ಕೆ ದೇವರ ಅನುಗ್ರಹ ಇದೆ. ಸಂಸ್ಕಾರ ಯುತ ಬದುಕನ್ನು ಮಕ್ಕಳಲ್ಲಿ ಅಳವಡಿಸುವ ಮೂಲಕ ಅವರ ಬದುಕನ್ನು ಸಾರ್ಥಕಗೊಳಿಸಬೇಕು. ಜಾತಿ ಯಾವುದಾದರೇನು, ಒಳ್ಳೆಯ ಮನುಷ್ಯನಾಗು ಎಂಬ ಶ್ರೀ ನಾರಾಯಣ ಗುರುಗಳ ತತ್ವದ ಚಿಂತನೆಯಲ್ಲಿ ಜರಗಿದ ಬೊರಿವಲಿ ಸ್ಥಳೀಯ ಸಮಿತಿಯ ಇಂದಿನ ಕಾರ್ಯಕ್ರಮ ಜಾತ್ಯಾತೀತದ ಸಮೀಕರಣವಾಗಿ ಮೂಡಿಬಂದಿದೆ ಎಂದು ನುಡಿದರು.

ಅಕ್ಷಯದ ಉಪ ಸಂಪಾದಕ ಹರೀಶ್‌ ಜಿ. ಪೂಜಾರಿ ಇವರು ಮಾತನಾಡಿ, ಆಟಿಡೊಂಜಿ ಕೂಟ ಕಾರ್ಯಕ್ರಮ ಮಕ್ಕಳ ಸಂಸ್ಕೃತಿಯ ಉಳಿವಿಗಾಗಿ ಒಂದು ಉತ್ತಮ ಕಾರ್ಯಕ್ರಮ. ಹಿಂದಿನ ಆಟಿ ತಿಂಗಳ ಕಷ್ಟಕಾರ್ಪಣ್ಯದ ಬದುಕು ಇಂದು ಕಾಣಸಿಗದಿದ್ದರು, ಅದರ ಹಿನ್ನೆಲೆ ತಿಳಿಯುವುದು ಅವಶ್ಯಕ. ರೋಗರುಜಿನಗಳಿಗೆ ಬೇಕಾದ ವಿವಿಧ ದೇಶಿಯ ಔಷಧಿಗಳು, ಆಟಿಕಳಂಜದಂತಹ ಮೂಲಕ ಮನೆಯಲ್ಲಿನ ದಾರಿದ್ರÂ ಓಡಿಸು ವಂತಹ ತಿಳುವಳಿಕೆ ಸಂಸ್ಕೃತಿ ಇಂತಹ ಕಾರ್ಯಕ್ರಮವನ್ನು ಶಿಮಂತೂರು ಚಂದ್ರಹಾಸ ಸುವರ್ಣರು ಯಶಸ್ವಿಯಾಗಿ ಆಯೋ ಜಿಸುತ್ತಿರುವುದು ಅಭಿನಂದನೀಯ ಎಂದರು.

ಲೇಖಕ, ನಾಟಕಕಾರ, ಕವಿ ಶಿಮಂತೂರು ಚಂದ್ರಹಾಸ ಸುವರ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಟಿ, ಇಂದು ಬೊರಿವಲಿ ಸಮಿತಿಯ 11 ನೇ ವಾರ್ಷಿಕ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮವು ಆಚರಣೆಯಲ್ಲಿ ಸಾಹಿತಿ ಪಾಲ್ತಾಡಿ ರಾಮಕೃಷ್ಣರಿಂದ  ಆಳವಾಗಿ ಚರ್ಚೆಗೊಳಗಾಗಿ ಶಾಸ್ತೊÅàಕ್ತವಾಗಿ ನಡೆಯುತ್ತಾ ಬಂದಿದೆ. ಆಟಿತಿಂಗಳಲ್ಲಿ ದೊರೆಯುವ ಗೆಡ್ಡೆಗೆಣಸು, ತರಕಾರಿ, ಹಣ್ಣುಗಳನ್ನು ಇಂದು ಉಪಯೋಗಿಸಲಾಗಿದ್ದು, ಕಾರ್ಯಕ್ರಮವನ್ನು ಹೊರನಾಡ ಕನ್ನಡಿಗರಿಗೆ ಪರಿಚಯಿಸಿದ ಹೆಮ್ಮೆ ಬೊರಿವಲಿ ಸಮಿತಿಗೆ ಲಭಿಸುತ್ತದೆ. ಈ ಕಾರ್ಯಕ್ರಮವು ಜಾತಿ, ಮತ, ಬೇಧವಿಲ್ಲದೆ ಗುರುತತ್ವದ ಬಂಧುತ್ವದಲ್ಲಿ ಜರಗುತ್ತಿದೆ ಎಂದು ನುಡಿದರು.
ವಿವಿಧ ರೀತಿಯ ವೈಶಿಷ್ಟÂಪೂರ್ಣ ಭಕ್ಷÂಗಳನ್ನು ತಯಾರಿಸಿ ಪ್ರದರ್ಶಿಸಿದ ಮಹಿಳೆಯರನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು. ಕಾರ್ಯಾಧ್ಯಕ್ಷ ಎಂ.  ಸುಂದರ ಪೂಜಾರಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸಮಿತಿಯಲ್ಲಿ ಜರಗುವ ಪ್ರತಿಯೊಂದು ಕಾರ್ಯಕ್ರಮಗಳಿಗೆ ಮುಂದೆಯೂ ಕೂಡಾ ಸದಸ್ಯರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದು ನುಡಿದರು.

Advertisement

ಮಾಜಿ ಕಾರ್ಯಾಧ್ಯಕ್ಷ ಜಿ. ಎಂ. ಕೋಟ್ಯಾನ್‌ ಉಪಸ್ಥಿತರಿದ್ದರು. ಕೇಂದ್ರ ಕಚೇರಿಯ ಮಾಜಿ ಕಾರ್ಯ ದರ್ಶಿ ಧರ್ಮಪಾಲ ಜಿ. ಅಂಚನ್‌, ಪ್ರೇಮನಾಥ್‌ ಕೋಟ್ಯಾನ್‌ ಉಪ ಸ್ಥಿತರಿದ್ದರು. ವತ್ಸಲಾ ಪೂಜಾರಿ ಮತ್ತು ಬಳಗದವರು ಪ್ರಾರ್ಥನೆಗೈದರು. ಲಕ್ಷಿ¾à ದೇವಾಡಿಗ, ಮೋಹಿನಿ ಕೋಟ್ಯಾನ್‌, ವೇದಾ ಶೆಟ್ಟಿ ಪಾಡªನ, ಆಟಿಕಳಂಜ ಹಾಡನ್ನು ಹಾಡಿದರು. ಗೌರವ ಕಾರ್ಯದರ್ಶಿ ಮೋಹನ್‌ ಬಿ. ಅಮೀನ್‌ ಸ್ವಾಗತಿಸಿ, ವಂದಿಸಿದರು. ಉಪ ಕಾರ್ಯಾಧ್ಯಕ್ಷ ಕೃಷ್ಣರಾಜ್‌ ಸುವರ್ಣ ನಿರ್ವಹಿಸಿದರು.

ಗೌರವ ಕೋಶಾಧಿಕಾರಿ ಶ್ರೀಧರ ಬಂಗೇರ, ಜತೆ ಕಾರ್ಯದರ್ಶಿ ಅಶೋಕ್‌ ಸಾಲ್ಯಾನ್‌, ಜತೆ ಕೋಶಾಧಿಕಾರಿ ಸುರೇಶ್‌ ಸನಿಲ್‌, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ದಯಾನಂದ ಪೂಜಾರಿ, ಆರ್‌. ಎಸ್‌. ಪೂಜಾರಿ, ಪಿ. ಎ. ಪೂಜಾರಿ, ಭಾರತಿ ಅಮೀನ್‌, ರಾಘು ಅಮೀನ್‌, ರಾಘು ಪೂಜಾರಿ, ರತ್ನಾ ಪೂಜಾರಿ, ಚಂದ್ರಶೇಖರ ಬಿ. ಎಸ್‌., ಸ್ಥಳೀಯ ಸಂಘ ಸಂಸ್ಥೆಯ ಪದಾಧಿಕಾರಿಗಳು, ಆಮಂತ್ರಿತ ಸದಸ್ಯರು, ಯುವ ವಿಭಾಗದ ಸದಸ್ಯರು, ಮಹಿಲಾ ಸದಸ್ಯೆಯರು ಉಪಸ್ಥಿತರಿದ್ದರು. 

ಚಿತ್ರ-ವರದಿ : ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next