Advertisement

ಬಿಲ್ಲವ ಸಮಾಜ ಸೇವಾ ಸಂಘ ಪುಣೆ: ಅರಸಿನ ಕುಂಕುಮ ಕಾರ್ಯಕ್ರಮ 

11:43 AM Jan 31, 2018 | |

ಪುಣೆ: ಬಿಲ್ಲವ ಸಮಾಜ ಸೇವಾ ಸಂಘ ಪುಣೆ ಇದರ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ಜ. 21 ರಂದು ಕೇತ್ಕರ್‌ರೋಡ್‌ನ‌ ಶ್ಯಾಮ್‌ ರಾವ್‌ ಕನ್ನಡ ಹೈಸ್ಕೂಲ್‌ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಮೊದಲಿಗೆ ಪುಣೆ ಬಿಲ್ಲವ ಸಮಾಜ ಸೇವಾ ಸಂಘದ  ಮಹಿಳಾ ವಿಭಾಗದ ಅಧ್ಯಕ್ಷೆ  ಸರೋಜಿನಿ ಡಿ. ಬಂಗೇರ  ಮತ್ತು ಹಿರಿಯರು ಹಾಗೂ ಪದಾಧಿಕಾರಿಗಳು  ದೀಪ ಬೆಳಗಿಸಿ ಆರತಿಗೈದು  ಪೂಜಾ ವಿಧಿ-ವಿಧಾನಗಳನ್ನು  ಪೂರೈಸಿದರು.

ದೀಪಾ ಪೂಜಾರಿ ಹಾಗೂ ನವಿತಾ ಪೂಜಾರಿ ಪ್ರಾರ್ಥನೆಗೈದರು. ಪ್ರಿಯಾ ಯು. ಪಣಿಯಾಡಿ  ಸ್ವಾಗತಿಸಿದರು. ಭಾರತಿ ಎಸ್‌. ಪೂಜಾರಿ ಅವರು ಕಾರ್ಯಕ್ರಮದ ತಯಾರಿ ಹಾಗೂ ಪ್ರಾಯೋಜಕರ ವಿವರವನ್ನು  ಸಭೆಗೆ ತಿಳಿಸಿದರು. ಅನಂತರ ಸಂಘದ ಮಹಿಳಾ ಸದಸ್ಯರ ಮುಂದಾಳತ್ವದಲ್ಲಿ ಸೇರಿದ ಎಲ್ಲ ಮಹಿಳೆಯರು ಸಾಮೂಹಿಕವಾಗಿ ಶ್ರೀ ದೇವಿ ಸ್ತೋತ್ರ ಪಠಿಸಿದರು.

ಈ ಸಂದರ್ಭದಲ್ಲಿ ಮಹಿಳೆಯರಲ್ಲಿ ದೈಹಿಕ, ಮಾನಸಿಕ ಸಮತೋಲನೆಯನ್ನು ಕಾಪಾಡಲು ವ್ಯಾಯಾಮದ  ಆವಶ್ಯಕತೆಯ   ಬಗ್ಗೆ ಕಾಳಜಿ ಮೂಡಿಸುವ ವಿಷಯದ  ಬಗ್ಗೆ   ಮಾರ್ಗದರ್ಶಕ ಸೂಚನೆಗಳು ಹಾಗು ಮಹಿಳೆಯರು  ದೈನಂದಿನ ದಿನಚರಿಯ ಬಗ್ಗೆ ಕೈಕೊಳ್ಳಬೇಕಾದ ನಿಯಮಗಳ ಬಗ್ಗೆ  ಮಾರ್ಗದರ್ಶನವನ್ನು  ಅಮಿತಾ ಪಿ. ಪೂಜಾರಿ ಹಾಗೂ ಇತರರು  ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಒಳಾಂಗಣ    ಪ್ರತಿಭಾ  ಸ್ಪರ್ಧೆಗಳನ್ನು  ಮಹಿಳೆಯರಿಗಾಗಿ ಅಯೋಗಿಸಲಾಗಿತ್ತು. ಮಹಿಳೆಯರು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭ ಹಾರೈಸಿಕೊಂಡರು. ಪುಣೆ  ಬಿಲ್ಲವ ಸಮಾಜ ಸೇವಾ ಸಂಘದ ಮಹಿಳಾ  ವಿಭಾಗದ ಪ್ರಮುಖರಾದ ರೇವತಿ ಪೂಜಾರಿ, ನೂತನ್‌ ಸುವರ್ಣ, ಉಮಾ ಪೂಜಾರಿ, ಸುನಿತಾ ಪೂಜಾರಿ, ವನಿತಾ ಕರ್ಕೇರ, ಲಲಿತಾ ಪೂಜಾರಿ, ಪ್ರಮಿಳಾ ಪೂಜಾರಿ, ವನಿತಾ ಜೆ. ಪೂಜಾರಿ, ಸುಮಿತ್ರಾ ಪೂಜಾರಿ ಮೊದಲಾದವರು ಸಹಕರಿಸಿದರು. ಮಹಿಳಾ ವಿಭಾಗದ ಸರೋಜಿನಿ ಬಂಗೇರ ಅವರ  ಅಧ್ಯಕ್ಷತೆಯಲ್ಲಿ ಜರಗಿದ ಈ ಎಲ್ಲ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಸಮಾಜ  ಬಾಂಧವರು ಆಗಮಿಸಿ ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ  ಲಘು ಉಪಾಹಾರದ ವ್ಯವಸ್ಥೆಯನ್ನು ಆಯೋ ಜಿಸಲಾಗಿತ್ತು. 

Advertisement

ಚಿತ್ರ-ವರದಿ: ಹರೀಶ್‌ ಮೂಡಬಿದ್ರೆ ಪುಣೆ

Advertisement

Udayavani is now on Telegram. Click here to join our channel and stay updated with the latest news.

Next