ನವಿ ಮುಂಬಯಿ: ನವಿ ಮುಂಬಯಿಯಲ್ಲಿ ಎಲ್ಲಾ ಸಮಾಜ ಬಂಧುಗಳು ಸಾಮರಸ್ಯದಿಂದ ನೆಲೆಯಾಗಿದ್ದು, ಆ ಮೂಲಕ ನವಿ ಮುಂಬಯಿ ಮಿನಿ ಭಾರತ ಎಂದೇ ಜನಜನಿತವಾಗಿದೆ. ಇದಕ್ಕೆಲ್ಲಾ ಸಿಡ್ಕೊ ಸಂಸ್ಥೆ ರಾಷ್ಟ್ರದ ಎಲ್ಲಾ ರಾಜ್ಯಗಳ ಜನರ ಧಾರ್ಮಿಕ, ಸಾಮಾಜಿಕ ಕಾರ್ಯಕ್ಕೆ ಸ್ಪಂದಿಸುತ್ತಿರುವುದು ಕಾರಣ. ಇಂತಹ ನಗರದಲ್ಲಿ ನಾರಾಯಣ ಗುರುಗಳ ಆರಾಧನಾ ಮಂದಿರ ನಿರ್ಮಾಣವಾಗುತ್ತಿರುವುದು ನಮ್ಮೆಲ್ಲರ ಭಾಗ್ಯವೇ ಸರಿ. ಹೊಟ್ಟೆಪಾಡನ್ನು ಅರಸಿ ಪರವೂರುಗಳಿಂದ ಮುಂಬಯಿಗೆ ಬಂದವರಲ್ಲಿ ಬಿಲ್ಲವರೂ ಸೇರಿದ್ದು ಸ್ವಾತಂತ್ರÂ ಪೂರ್ವದಲ್ಲೇ ಬಿಲ್ಲವರ ಅಸೋಸಿಯೇಶನ್‌ನ್ನು ಸ್ಥಾಪಿಸಿ ಸೇವಾ ನಿರತರಾಗಿದ್ದಾರೆ. ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಹಿರಿಯರು ಈ ಸಂಸ್ಥೆಯನ್ನು ಸ್ಥಾಪಿಸಿದ್ದು, ಇಂತಹ ಶುಭಾವಸರದಲ್ಲಿ ಅವರನ್ನು ಸ್ಮರಣೆ ಮಾಡುವ ಅಗತ್ಯತೆಯಿದೆ. ನಾರಾಯಣ ಗುರುಗಳ ತತ್ವದಂತೆ ಸೇವೆಯಲ್ಲಿ ತೊಡಗಿಸಿರುವ ಈ ಸಂಸ್ಥೆಯ ಮುಂದಾಳುಗಳ ತ್ಯಾಗಮಯ ಸೇವೆಯಿಂದ ಸಮುದಾಯವು ಸ್ವಂತಿಕೆಯ ಪ್ರತಿಷ್ಠೆಗೆ ಪಾತ್ರವಾಗಿದೆ ಎಂದು ನವಿಮುಂಬಯಿ ಮಾಜಿ ನಗರ ಸೇವಕ ಸಂತೋಷ್ ಡಿ. ಶೆಟ್ಟಿ ನುಡಿದರು.
ಡಿ. 11ರಂದು ಪೂರ್ವಾಹ್ನ ಸೆಕ್ಟರ್ 10ರ ಸಾನಾ³ಡಾ ಪೂರ್ವದ ಪ್ಲಾಟ್ ಸಂಖ್ಯೆ 32ರಲ್ಲಿ ಅಸೋಸಿಯೇಶನ್‌ನ ಜಾಗದಲ್ಲಿ ಬಿಲ್ಲವರ ಅಸೋಸಿಯೇಶನ್ ನವಿಮುಂಬಯಿ ಇದರ ಗುರುಮಂದಿರದ ಮತ್ತು ಸ್ಥಳೀಯ ಕಚೇರಿಯ ನೂತನ ಕಟ್ಟಡಕ್ಕೆ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಮತ್ತು ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ತಮ್ಮ ದಿವ್ಯ ಹಸ್ತದಿಂದ ಭೂಮಿಪೂಜೆ ನೆರವೇರಿಸಿದ ಬಳಿಕ ಶಿಲಾನ್ಯಾಸ ನೆರವೇರಿಸಿ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಶುಭಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅವರು ಮಾತನಾಡಿ, ಬಿಲ್ಲವರ ಅಸೋಸಿಯೇಶನ್ 1998ರಲ್ಲಿ 8 ಸ್ಥಳೀಯ ಕಚೇರಿಗಳನ್ನು ಹೊಂದಿದ್ದು, ಈಗ 22ಕ್ಕೆ ಏರಿಕೆ ಕಂಡಿವೆ. ಅವುಗಳಲ್ಲಿ 19 ಸಮಿತಿಗಳು ಸ್ವಂತ ಕಚೇರಿಗಳನ್ನು ಹೊಂದಿವೆ. ಈಗ ನವಿ ಮುಂಬಯಿಯಲ್ಲಿ ಭವ್ಯವಾದ ಭವನ ನಿರ್ಮಾಣ ಮೂಲಕ ತಮ್ಮ ಅಸ್ತಿತ್ವಕ್ಕೆ ಮೆರುಗು ನೀಡಲಿದೆ. ಭವಿಷ್ಯದ್ದಲ್ಲೂ ಸೇವೆಯ ಮೂಲಕ ಬಿಲ್ಲವರು ಇತರ ಸಮಾಜಕ್ಕೆ ಆದರ್ಶ ಸಮಾಜವಾಗಿ ಮೂಡಿಬರಬೇಕು ಎಂದು ನುಡಿದರು.
ನೂತನ ಮಂದಿರಕ್ಕೆ ಶಿಲಾನ್ಯಾಸಗೈದು ಮಾತನಾಡಿದ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರು, ಅಸೋಸಿಯೇಶನ್‌ನ ನವಿಮುಂಬಯಿ ಸ್ಥಳೀಯ ಕಚೇರಿ ಸ್ಥಾಪನೆಯಾದ 11ವರ್ಷದ ನಂತರ ಸ್ವಂತಿಕೆಯ ಕಚೇರಿ ಮತ್ತು ಗುರುಮಂದಿರಕ್ಕೆ ಶಿಲಾನ್ಯಾಸದ ಕಾಲ ಕೂಡಿ ಬಂದಿರುವುದು ಅಭಿನಂದನೀಯ. ಈ ಜಾಗ ದೊರಕಲು ಸಂತೋಷ್ ಶೆಟ್ಟಿ ಅವರ ಅಪಾರ ಶ್ರಮವಿದೆ. ಬಿಲ್ಲವ ಸಮಾಜ ಅವರಿಗೆ ಕೃತಜ್ಞತೆ ಸಲ್ಲಿಸುತ್ತದೆ. ಸಾಧನೆ ಮಾಡಿದರೆ ನಾವೂ ಏನೂ ಸಾಧಿಸಲು ಸಾಧ್ಯ ಎನ್ನುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿ. ಬಿಲ್ಲವರ ಅಸೋಸಿಯೇಶನ್‌ನಲ್ಲಿ ಶ್ರೀಮಂತರೂ ಬಡವರೂ ಇದ್ದಾರೆ. ಎಲ್ಲರೂ ಒಂದು ಇಟ್ಟಿಗೆ, ಚಿನ್ನ, ಬೆಳ್ಳಿ, ತಾಮ್ರವನ್ನಿತ್ತಾದರೂ ಗುರುಮಂದಿರದ ರಚನೆಗೆ ತಮ್ಮ ದೇಣಿಗೆ ನೀಡಬಹುದು. ಹೀಗೆ ಸಹಾಯಸ್ತ ನೀಡುವುದರಿಂದಲೇ ಶೀಘ್ರವೇ ನವಿ ಮುಂಬಯಿಯಲ್ಲಿ ಬಿಲ್ಲವ ಭವನ ನಿರ್ಮಾಣ ಸಾಧ್ಯವಾಗುವುದು ಎಂದರು.
ಸಭಾ ಕಾರ್ಯಕ್ರಮದಲ್ಲಿ ಎನ್‌ಎಂಎಂಸಿನ ನಗರ ಸೇವಕರುಗಳಾದ ಸೋಮನಾಥ ವಾಸ್ಕರ್ ಮತ್ತು ಮೀರಾ ಸಂಜಯ್ ಪಾಟೀಲ್, ಸಮಾಜ ಸೇವಕರುಗಳಾದ ಎಸ್. ಕೆ. ಕೋಟ್ಯಾನ್, ಸುರೇಂದ್ರ ಎ. ಪೂಜಾರಿ, ಆಶಾ ಅಂಚನ್, ರೇಷ್ಮಾ ರವಿರಾಜ್ ಪೂಜಾರಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.
ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ರಾಜ ವಿ. ಸಾಲ್ಯಾನ್, ಪುರುಷೋತ್ತಮ ಎಸ್. ಕೋಟ್ಯಾನ್ ಮತ್ತು ಮಹೇಂದ್ರ ಸೂರು ಕರ್ಕೇರ ಹಾಗೂ ನವಿ ಮುಂಬಯಿ ಸ್ಥಳೀಯ ಕಚೇರಿ ಕಾರ್ಯಾಧ್ಯಕ್ಷ ಧರ್ಮದರ್ಶಿ ರಮೇಶ್ ಎಂ. ಪೂಜಾರಿ, ಗೌರವ ಕೋಶಾಧಿಕಾರಿ ಜಯರಾಮ ಪಿ. ಪೂಜಾರಿ, ಜತೆ ಕಾರ್ಯದರ್ಶಿ ಎನ್. ಕೆ. ಪೂಜಾರಿ, ಜತೆ ಕೋಶಾಧಿಕಾರಿ ಶೇಖರ್ ಬಿ. ಪಾಲನ್, ಎನ್. ಎಂ. ಸನೀಲ್, ಸಿ. ಟಿ. ಸಾಲ್ಯಾನ್, ಗಂಗಾಧರ್ ಜೆ. ಪೂಜಾರಿ, ಚಿನ್ನಯ ಗೌಡ, ಶ್ರೀನಿವಾಸ್ ಆರ್. ಕರ್ಕೇರ, ರಜಿತ್ ಸುವರ್ಣ, ಪ್ರೇಮನಾಥ್ ಪಿ. ಕೋಟ್ಯಾನ್, ಜೆ. ಎಂ. ಕೋಟ್ಯಾನ್, ದೇವರಾಜ್ ಎಸ್. ಪೂಜಾರಿ, ಬೋಳ ರವಿ ಪೂಜಾರಿ, ಮೋಹಿನಿ ಆರ್. ಪೂಜಾರಿ, ಕೇಂದ್ರ ಕಚೇರಿಯ ಸ್ಥಳೀಯ ಸಮಿತಿಯ ಪ್ರತಿನಿಧಿ ಉಮೇಶ್ ಎನ್. ಕೋಟ್ಯಾನ್, ಉದ್ಯಮಿ ಹರೀಶ್ ಜಿ. ಅಮೀನ್ ಸೇರಿದಂತೆ ನೂರಾರು ಬಿಲ್ಲವ ಸಮಾಜ ಬಾಂಧವರು, ಹಿತೈಷಿಗಳು ಉಪಸ್ಥಿತರಿದ್ದರು.
ಉಪ ಕಾರ್ಯಾಧ್ಯಕ್ಷ ವಿಶ್ವನಾಥ್ ಕೆ. ಪೂಜಾರಿ ಸ್ವಾಗತಿಸಿ ಪ್ರಸ್ತಾವನೆಗೈದರು.
ಜಯಂತಿ ಶಿವರಾಮ ಪೂಜಾರಿ ತಂಡದವರು ಪ್ರಾರ್ಥನೆಗೈದರು. ಸತೀಶ್ ಎರ್ಮಾಳ್ ಅತಿಥಿಗಳನ್ನು ಪರಿಚಯಿಸಿದರು. ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು. ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಕಚೇರಿ ಗೌರವ ಕಾರ್ಯದರ್ಶಿ ವಿ. ಕೆ. ಸುವರ್ಣ ಅವರು ವಂದಿಸಿದರು.
ಬಿಲ್ಲವರ ಅಸೋಸಿಯೇಶನ್ ಸುಮಾರು 28,000 ಸದಸ್ಯರಿರುವ ದೊಡ್ಡ ಸಂಸ್ಥೆ. ಈ ಸಂಸ್ಥೆಯು ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಕಲೆ ಇನ್ನಿತರ ಕಾರ್ಯಕ್ರಮಗಳ ಮೂಲಕ ಸೇವಾನಿರತವಾಗಿರುವುದು ಅಭಿನಂದನೀಯ. ಇದೀಗ ನಾರಾಯಣ ಗುರುಗಳ ಮಂದಿರ ನಿರ್ಮಾಣಕ್ಕೆ ಭವ್ಯ ಸಂಕುಲ ರಚಿಸುತ್ತಿರುವುದು ದೊಡ್ಡ ಸಾಧನೆಯೇ ಸರಿ. ಇದು ಸರ್ವರಿಗೂ ಆದರ್ಶ ಸಂಕುಲವಾಗಿ ರೂಪುಗೊಳ್ಳÛಲಿ
– ಜಯವಂತ್ ಸುತಾರ್ (ಮಹಾಪೌರ : ನವಿಮುಂಬಯಿ ಮಹಾನಗರ ಪಾಲಿಕೆ).
ನಮ್ಮ ಜನ್ಮಭೂಮಿ ತೊರೆದು ದೈವ-ದೇವರುಗಳ ಅನುಗ್ರಹದಿಂದ ಕರ್ಮಭೂಮಿಗೆ ಬಂದಿದ್ದೇವೆ. ಮಹಾರಾಷ್ಟ್ರ ಒಂದು ಪಾವಿತ್ರÂತೆಯ ಭೂಮಿ. ಇಲ್ಲಿ ನಾವು ಸಂಘ-ಸಂಸ್ಥೆ, ಮಠ ಮಂದಿರಗಳನ್ನು ಕಟ್ಟಿ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯನ್ನು ನೀಡುತ್ತಿರುವುದು ಮರಾಠ ಭೂಮಿಗೆ ಪೂರಕವಾಗಿದೆ. ಇಂತಹ ಒಗ್ಗಟ್ಟಿನಿಂದ ಸಮಗ್ರ ಸಮಾಜದ ಅಭಿವೃದ್ಧಿ ಸಾಧ್ಯ
– ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ (ಅಧ್ಯಕ್ಷರು : ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರ).
ಬಿಲ್ಲವರ ಅಸೋಸಿಯೇಶನ್ ಇನ್ನೊಂದು ಮೈಲುಗಲ್ಲಿಗೆ ಸಾಕ್ಷಿಯಾಗಿದೆ. ಗುರುಗಳ ಇಚ್ಛೆಯಂತೆ ಇಲ್ಲಿ ಭವನ ನಿರ್ಮಾಣವಾಗುತ್ತಿರುವುದು ತುಂಬಾ ಸಂತೋಷದ ವಿಷಯ. ಮಂದಿರಕ್ಕಾಗಿನ ಶ್ರದ್ಧೆಗೆ ಮಹಿಳಾ ಶಕ್ತಿ ಎದ್ದು ಕಾಣುತ್ತಿದೆ. ಶೀಘ್ರವೇ ಯೋಜಿತ ಯೋಜನೆ ಯಶಕಾಣಲಿ
– ಎನ್. ಟಿ. ಪೂಜಾರಿ (ಕಾರ್ಯಾಧ್ಯಕ್ಷರು : ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ).
ಚಿತ್ರ-ವರದಿ: ರೋನ್ಸ್ ಬಂಟ್ವಾಳ್