Advertisement

ಬಿಲ್ಲವ ಸಂಘ ಪಿಂಪ್ರಿ : ವಾರ್ಷಿಕ  ಕ್ರೀಡೋತ್ಸವ

11:49 AM Feb 08, 2018 | Team Udayavani |

ಪುಣೆ: ನಮ್ಮ ದೈನಂದಿನ  ಜೀವನದಲ್ಲಿ  ಅರೋಗ್ಯವಂತರಾಗಿರಲು ವ್ಯಾಯಾಮ ಕೂಡಾ ಒಂದು ಪ್ರಮುಖ ಅಂಶ. ದಿನದ ಕೆಲವು ಸಮಯವನ್ನು ಇದಕ್ಕಾಗಿ ಮಿಸಲಿಟ್ಟರೆ ಒಳ್ಳೆಯದು. ಯಾವುದೇ ಒಂದು ಅಥವಾ ಹೆಚ್ಚು  ಕ್ರೀಡೆಯನ್ನು ಪ್ರತಿನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ನಮಗೆ ದೇಹಕ್ಕೆ ಬೇಕಾದ ಅರೋಗ್ಯ ಸಿಗಲು ಸಾಧ್ಯ. ಇಂದಿನ ದಿನಗಳ ಆಹಾರ ಪದ್ಧತಿ, ಕಲ್ಮಷಯುಕ್ತ  ಗಾಳಿ, ನೀರು ನಮ್ಮ ದೇಹವನ್ನು ಸೇರಿದಾಗ ಆರೋಗ್ಯದಲ್ಲಿ ಏರುಪೇರು ಆಗುವಂತಹ ಸಂಭವ ಇರುತ್ತದೆ. ಇಂತಹ ಸಂದರ್ಭದಲ್ಲಿ ನಿಯಮಿತವಾಗಿ ವ್ಯಾಯಾಮ ಮತ್ತು ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಅಟೋಟ ಸ್ಪರ್ದೆಗಳನ್ನೂ ಅಯೋಜಿಸುವುದರಿಂದ ಜನರಿಗೆ ಇದರ ಮಹತ್ವ ತಿಳಿಯುತ್ತದೆ. ಮಕ್ಕಳಲ್ಲಿ ಮಹಿಳೆಯರಲ್ಲಿ ಅರೋಗ್ಯ ರಕ್ಷಣೆಯ ಬಗ್ಗೆ ಕಾಳಜಿ ಮೂಡಿಸುವ ಕಾರ್ಯಗಳು ಆಗಬೇಕು. ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಇಂಥಹ ಕ್ರೀಡೆಗಳು ಸಹಕಾರಿಯಗಬಹುದು  ಎಂದು ಪಿಂಪ್ರಿ ಬಿಲ್ಲವ ಸಂಘದ ಅಧ್ಯಕ್ಷರಾದ  ಸೋಮಪ್ಪ  ಸಾಲ್ಯಾನ್‌ ಅವರು ಅಭಿಪ್ರಾಯಿಸಿದರು.

Advertisement

ಪಿಂಪ್ರಿ ಬಿಲ್ಲವ ಸಂಘದ ವತಿಯಿಂದ ವಲ್ಲಭ ನಗರದ ಅಂಬೇಡ್ಕರ್‌  ಮೈದಾನದಲ್ಲಿ   ದ್ವೆ„ವಾರ್ಷಿಕವಾಗಿ  ಜರಗಿದ ಸಮಾಜ ಭಾಂದವರ ಕ್ರೀಡಾಕೂಟವನ್ನು ಉದ್ಘಾಟಿಸಿದ  ಅವರು ಸಮಾಜ ಬಾಂಧವರ ಇದೆ ರೀತಿಯ ಸಹಕಾರ ದೊರೆತರೆ   ಪ್ರತಿ ವರ್ಷವೂ ಅದ್ದೂರಿಯಾಗಿ ಕ್ರೀಡೋತ್ಸವವನ್ನು ನಡೆಸಬಹುದು.  ಸಂಘದ ಸಮಾಜ ಸೇವಾ ಕಾರ್ಯಗಳಿಗೆ ಎಲ್ಲರ ಸಹಕಾರ ಮುಖ್ಯ. ಅದರಲ್ಲೂ ಯುವಕರು ಇಂತಹ ಕಾರ್ಯಗಳಿಗೆ ಮುಂದೆ ಬಂದು ಸಹಕರಿಸಬೇಕು ಎಂದರು.

ಕ್ರೀಡಾಕೂಟವು ಬೆಳಗ್ಗೆ   ಕ್ರಿಕೆಟ್‌ ಪಂದ್ಯಾಟದ ಮೂಲಕ ಪ್ರಾರಂಭಗೊಂಡಿತು. ಸಮಾಜ ಬಾಂಧವರ ವಯೋಮಿತಿಗೆ ಅನುಗುಣವಾಗಿ ಮಕ್ಕಳಿಂದ ಹಿಡಿದು ಮಹಿಳೆಯರು, ಪುರುಷರು,  ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ತ್ರೋಬಾಲ್‌, ಬ್ಯಾಟ್‌ ಮಿಂಟನ್‌, ಕ್ಯಾರಂ, ಚೆಸ್‌, ಹಗ್ಗ ಜಗ್ಗಾಟ, ಸಂಗೀತ ಕುರ್ಚಿ ಮೊದಲಾದ ಸ್ಪರ್ಧೆಗಳು ಜರಗಿತು.

ಕ್ರಿಕೆಟ್‌ ಪಂದ್ಯಾಟದಲ್ಲಿ ಸಪ್ತಗಿರಿ ತಂಡವು ಪ್ರಥಮ ಟ್ರೋಪಿ ಪಡೆದರೆ, ಎಸ್‌. ಕೆ. ಗೆಳೆಯರು ದ್ವಿತೀಯ ಸ್ಥಾನಿಯಾದರು. ಥ್ರೋಬಾಲ್‌ನಲ್ಲಿ ಶ್ರೀ ದುರ್ಗಾ ಪ್ರಥಮ, ಅಯ್ಯಪ್ಪ ಬಳಗ ದ್ವಿತಿಯ ಸ್ಥಾನಿಯಾಯಿತು. ವಿಜೇತ ತಂಡಗಳಿಗೆ ಸಂಘದ ಉಪಾಧ್ಯಕ್ಷ ಉದ್ಯಮಿ ಸತೀಶ್‌ ಸಾಲ್ಯಾನ್‌ ಅವರು ಬಹುಮಾನಗಳನ್ನು ಪ್ರಾಯೋಜಿಸಿದ್ದರು. ವಿಜೇತರಿಗೆ   ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು.  ಉದ್ಯಮಿ ನವೀನ್‌ ಕೋಟ್ಯಾನ್‌ ಅವರ ಪ್ರಾಯೋಜಕತ್ವದಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

ಕ್ರೀಡಾಕೂಟದ ಯಶಸ್ವಿಗೆ ಸಂಘದ ಕ್ರೀಡಾ ಕಾರ್ಯದರ್ಶಿ ಉಮೇಶ್‌ ಪೂಜಾರಿ, ಸಂಯೋಜಕರಾದ ಕಿರಣ್‌ ಸುವರ್ಣ,  ಗಣೇಶ್‌ ಅಂಚನ್‌, ಸಂತೋಷ್‌ ಪೂಜಾರಿ, ಶೇಖರ್‌ ಚಿತ್ರಾಪು, ಶೇಖರ್‌  ಜತ್ತನ್‌, ಶರತ್‌ ಕೋಟ್ಯಾನ್‌, ಸುಂದರ್‌  ಪೂಜಾರಿ, ಗಣೇಶ್‌ ಕೋಟ್ಯಾನ್‌, ಸುರೇಶ್‌ ಪೂಜಾರಿ, ವಿಜಯ ಪೂಜಾರಿ, ಸುರೇಶ ಪೂಜಾರಿ, ಶ್ರೀದರ್‌ ಪೂಜಾರಿ, ರವಿ ಜತ್ತನ್‌, ಪ್ರವೀಣ್‌ ಸಾಲ್ಯಾನ್‌ ಹಾಗು ಮಹಿಳಾ ವಿಭಾಗದ ಅಧ್ಯಕ್ಷೆ ಸಂಗೀತಾ ಸುವರ್ಣ ಮತ್ತು ಪ್ರಮುಖರಾದ ಭಾಗ್ಯ ಪೂಜಾರಿ, ತೇಜಸ್ವಿನಿ, ಪೂಜಾರಿ, ಗುಣ ಪೂಜಾರಿ, ಗೌರಿ ಸಾಲ್ಯಾನ್‌, ಕುಸುಮಾ ಸಾಲ್ಯಾನ್‌, ರಂಜಿತಾ  ಪೂಜಾರಿ, ವಿನೋದಾ ಪೂಜಾರಿ, ಶಕುಂತಲಾ ಅಂಚನ್‌, ಪ್ರೇಮಾ ಪೂಜಾರಿ, ಮಮತಾ ಅಂಚನ್‌, ಮೀನಾಕ್ಷಿ ಪೂಜಾರಿ ಅವರು ಸಹಕರಿಸಿದರು. ಸಂಘದ ಕಾರ್ಯದರ್ಶಿ ಶ್ಯಾಮ್‌ ಸುವರ್ಣ ಅವರು ಕಾರ್ಯಕ್ರಮ ನಿರೂಪಿಸಿದರು. 

Advertisement

ನೂತನ್‌ ಸುವರ್ಣ ವಂದಿಸಿದರು. ರಾತ್ರಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸದಸ್ಯರು, ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ  ಪಾಲ್ಗೊಂಡಿದ್ದರು. 

ಚಿತ್ರ-ವರದಿ: ಹರೀಶ್‌ ಮೂಡಬಿದ್ರೆ ಪುಣೆ

Advertisement

Udayavani is now on Telegram. Click here to join our channel and stay updated with the latest news.

Next