Advertisement
ಮೂರು ವರ್ಷಗಳಿಂದಲೂ ವಿದ್ಯುತ್ ಬಿಲ್ ಬಾಕಿ ಇರಿಸುತ್ತಲೇ ಬಂದಿದ್ದು, 45,800 ರೂ. ಆಗಿತುಈ ಹಿನ್ನೆಲೆಯಲ್ಲಿ ಮೆಸ್ಕಾಂ ಹಲವು ಬಾರಿ ನೋಟಿಸ್ ನೀಡಿದರೂ ಪಾವತಿಸದ ಹಿನ್ನೆಲೆಯಲ್ಲಿ ಕೊನೆಯ ನೋಟಿಸ್ ನೀಡಿದ ಮೆಸ್ಕಾಂ, ಶುಕ್ರವಾರ ಮುಂಜಾನೆಯೇ ವಿದ್ಯುತ್ ಕಡಿತಗೊಳಿಸಿತು. ಇದರಿಂದಾಗಿ ಅರಣ್ಯ ಇಲಾಖೆ ಕಚೇರಿಯ ಕಂಪ್ಯೂಟರ್‌ಗಳು ಸ್ತಬ್ಧವಾದವು. ಬಿಸಿಲಿನ ಕಾಲದಲ್ಲಿ ಫ್ಯಾನ್ ಗಳೂ ತಿರುಗದತಾಯಿತು. ತುರ್ತು ದಾಖಲೆಗಳಿಗಾಗಿ ಸೈಬರ್ ಕೇಂದ್ರದ ಮೊರೆಹೋದರು. ಈ ಹಿಂದೆ ಮೆಸ್ಕಾಂ ನಿಗದಿಪಡಿಸಿದ್ದ ಹೆಚ್ಚುವರಿ ಬಿಲ್ ಬರುತ್ತಿದ್ದು, ಅದನ್ನು ಪಾವತಿಸುವುದು ಅರಣ್ಯ ಇಲಾಖೆಗೆ ಹೊರೆಯಾಗುತ್ತಿದೆ.
ಅರಣ್ಯ ಇಲಾಖೆ ಕಚೇರಿಗೆ ಮೂರು ನೋಟಿಸ್ ನೀಡಲಾಗಿತ್ತು. ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇದರ ಬೆನ್ನಲ್ಲೇ ಶುಕ್ರವಾರ ಖುದ್ದು ವಲಯ ಅರಣ್ಯಾಧಿಕಾರಿ ಕಚೇರಿ ಎಂಬುದು ಸರಕಾರದ ಅಂಗ ಎಂಬ ಇರಾದೆಯಲ್ಲಿ ಮನವರಿಕೆ ಮಾಡಲು ತೆರಲಿದ್ದೆ. ಆದರೆ ಕಚೇರಿಯಲ್ಲಿ ಯಾರೊಬ್ಬರೂ ನಮ್ಮನ್ನು ಮಾತನಾಡಿಸುವ ಪ್ರಯತ್ನ ಮಾಡಿಲ್ಲ. ಆದರೂ ಸಿಬಂದಿ ಜತೆಗೆ ತೆರಳಿ, ಬಿಲ್ ಬಾಕಿ ಇದೆ. ಅರಣ್ಯಾಧಿಕಾರಿಯನ್ನು ಕಂಡು ಮಾತನಾಡುತ್ತೇನೆ ಎಂದರೂ ಯಾರೂ ಲೆಕ್ಕಿಸದ ಕಾರಣ, ಸಂಪರ್ಕ ಕಡಿತಗೊಳಿಸಬೇಕಾದ ಅನಿವಾರ್ಯತೆ ಒದಗಿಬಂತು ಎಂದು ಮೆಸ್ಕಾಂ ಸಹಾಯಕ ಎಂಜಿನಿಯರ್ ರಾಜೇಶ್ ವಿವರಿಸಿದರು. ಸರಿಯಾಗಿ ಸ್ಪಂದನೆ ಮಾಡಿಲ್ಲ
ಬಿಲ್ ಬಾಕಿ ಇರಿಸಿರುವ ಕುರಿತು ಮೇಲಧಿಕಾರಿಗಳಿಗೆ ಮನವರಿಕೆ ಮಾಡಿಸಿ, ಹಿಂಬರಹದ ಮೂಲಕ ಪತ್ರ ನೀಡುವಂತೆ ಸೂಚಿಸಿದ್ದೆ. ಆದರೆ ಇದಕ್ಕೆ ಸರಿಯಾದ ಸ್ಪಂದನೆ ಈ ತನಕ ಬಂದಿಲ್ಲ. ಬಿಲ್ಲು ಬಾಕಿ ಇರಿಸಿ ಸಂಪರ್ಕ ಒದಗಿಸಿದರೆ ಮೆಸ್ಕಾಂ ಅಧಿಕಾರಿಗಳು ಪ್ರಶ್ನಿಸುವ ಸಾಧ್ಯತೆ ಇದ್ದು, ಈ ಕ್ರಮ ಜರುಗಿಸಲಾಗಿದೆ.
– ಶಿಲ್ಪಾ
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು