Advertisement

ಆರ್ ಬಿಐ ಮುಖ್ಯ ಕಚೇರಿಗೆ ಭೇಟಿ ನೀಡಿದ ಬಿಲ್ ಗೇಟ್ಸ್; ಗವರ್ನರ್ ಜತೆ ಮಾತುಕತೆ

05:37 PM Feb 28, 2023 | Team Udayavani |

ಹೊಸದಿಲ್ಲಿ: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಮಂಗಳವಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ ಬಿಐ) ಮುಂಬೈಗೆ ಭೇಟಿ ನೀಡಿದ್ದು, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರೊಂದಿಗೆ ವ್ಯಾಪಕ ವಿಷಯಗಳ ಕುರಿತು ಚರ್ಚೆ ನಡೆಸಿದರು.

Advertisement

ಬಿಲ್ ಗೇಟ್ಸ್ ಭೇಟಿಯನ್ನು ಆರ್‌ ಬಿಐ ಅಧಿಕೃತ ಟ್ವಿಟರ್ ಹ್ಯಾಂಡಲ್‌ ನಿಂದ ದೃಢಪಡಿಸಲಾಗಿದೆ. ಆರ್‌ಬಿಐ ಗವರ್ನರ್ ದಾಸ್ ಮತ್ತು ಬಿಲ್ ಗೇಟ್ಸ್ ನಡುವೆ ಮಾತುಕತೆ ನಡೆದಿದೆ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:ʻತಾಕತ್ತಿದ್ರೆ 175 ಸ್ಥಾನಗಳಿಗೆ ಸ್ಪರ್ಧಿಸಿʼ : ನಾಯ್ಡು-ಕಲ್ಯಾಣ್‌ಗೆ ಜಗನ್‌ಮೋಹನ್‌ ಸವಾಲ್‌

ಆರೋಗ್ಯ, ಶಿಕ್ಷಣ ಮತ್ತು ಇತರ ಕ್ಷೇತ್ರಗಳಲ್ಲಿ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸಲು ಗೇಟ್ಸ್ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.

ಗೇಟ್ಸ್ ತನ್ನ ಇತ್ತೀಚಿನ ಬ್ಲಾಗ್‌ ನಲ್ಲಿ “ಭಾರತದಲ್ಲಿ ನನ್ನ ಸಂದೇಶ; ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು, ಜಾಗತಿಕ ಆರೋಗ್ಯವನ್ನು ಸುಧಾರಿಸಲು ಭಾರತವು ಒಟ್ಟಾರೆಯಾಗಿ ಭವಿಷ್ಯದ ಭರವಸೆಯನ್ನು ನೀಡುತ್ತದೆ. ಭಾರತವು ಪೋಲಿಯೊವನ್ನು ನಿರ್ಮೂಲನೆ ಮಾಡಿದೆ, ಎಚ್ ಐವಿ ಪ್ರಸರಣವನ್ನು ಕಡಿಮೆ ಮಾಡಿದೆ, ಬಡತನವನ್ನು ಕಡಿಮೆ ಮಾಡಿದೆ, ಶಿಶು ಮರಣವನ್ನು ಕಡಿಮೆ ಮಾಡಿದೆ” ಎಂದು ಎಂದು ಬರೆದಿದ್ದಾರೆ.

Advertisement

“ಇತರ ದೇಶಗಳಂತೆ ಭಾರತವು ಸೀಮಿತ ಸಂಪನ್ಮೂಲಗಳನ್ನು ಹೊಂದಿದೆ. ಆದರೆ ಆ ನಿರ್ಬಂಧದ ಹೊರತಾಗಿಯೂ ಜಗತ್ತು ಇನ್ನೂ ಹೇಗೆ ಪ್ರಗತಿ ಸಾಧಿಸಬಹುದು ಎಂಬುದನ್ನು ಇದು ನಮಗೆ ತೋರಿಸಿದೆ. ನಾವು ಒಟ್ಟಾಗಿ ಕೆಲಸ ಮಾಡಿದರೆ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಬಹುದು ಮತ್ತು ಅದೇ ಸಮಯದಲ್ಲಿ ಜಾಗತಿಕ ಆರೋಗ್ಯವನ್ನು ಸುಧಾರಿಸಬಹುದು ಎಂದು ನಾನು ನಂಬುತ್ತೇನೆ” ಎಂದು ಬಿಲ್ ಗೇಟ್ಸ್ ಬ್ಲಾಗ್‌ನಲ್ಲಿ ಬರೆದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next