Advertisement

ಭಾರತದ ನಾವೀನ್ಯತೆಯ ಕೊಡುಗೆಗೆ ಸಲಾಂ…ಮಹೀಂದ್ರಾ ಆಟೋ ರಿಕ್ಷಾ ಓಡಿಸಿದ Bill Gates!

02:53 PM Mar 06, 2023 | Team Udayavani |

ನವದೆಹಲಿ: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ, ಬಿಲಿಯನೇರ್ ಬಿಲ್ ಗೇಟ್ಸ್ ಭಾರತದ ಪ್ರವಾಸದಲ್ಲಿದ್ದು, ಈ ಸಂದರ್ಭದಲ್ಲಿ ಅವರು ಹೊಸ ಅನುಭವವನ್ನು ಪಡೆದಿರುವ ವಿಡಿಯೋ ವೈರಲ್ ಆಗಿತ್ತು ಎಲ್ಲರಿಗೂ ತಿಳಿದಿದೆ.

Advertisement

ಇದನ್ನೂ ಓದಿ:ಹೆಲಿಪ್ಯಾಡ್ ನಲ್ಲಿ ಗೋಣಿಚೀಲಗಳ ರಾಶಿ; ಬಿಎಸ್ ವೈ ಹೆಲಿಕಾಪ್ಟರ್ ಇಳಿಯಲು ಹರಸಾಹಸ

ಅದಕ್ಕೆ ಪೂರಕ ಎಂಬಂತೆ ತಮ್ಮ ಕಾಲೇಜು ಗೆಳೆಯ, ಖ್ಯಾತ ಉದ್ಯಮಿ ಆನಂದ್ ಮಹೀಂದ್ರ ಅವರನ್ನು ಬಿಲ್ ಗೇಟ್ಸ್ ಭೇಟಿಯಾಗಿದ್ದು ಹೆಚ್ಚು ಗಮನ ಸೆಳೆದಿದೆ. ಗೆಳೆಯ ಆನಂದ್ ಮಹೀಂದ್ರ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಬಿಲ್ ಗೇಟ್ಸ್ ಅವರು ಮಹೀಂದ್ರಾದ ಎಲೆಕ್ಟ್ರಿಕ್ ರಿಕ್ಷಾವನ್ನು ಓಡಿಸಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ.

ಬಿಲ್ ಗೇಟ್ಸ್ ತಮ್ಮ Instagramನಲ್ಲಿ ಹಂಚಿಕೊಂಡಿರುವ ವಿಡಿಯೋ ಟೆಕ್ಟ್ಸ್ ನಲ್ಲಿ “ಗೇಟ್ಸ್ ನೋಟ್ಸ್” ಎಂದು ಉಲ್ಲೇಖಿಸಿದ್ದು, ಇ ರಿಕ್ಷಾ ಚಾಲನೆ ಮೂಲಕ ತಮ್ಮ ವಿಶಿಷ್ಟ ಅನುಭವವನ್ನು ತೋರ್ಪಡಿಸಿರುವುದಾಗಿ ವರದಿ ತಿಳಿಸಿದೆ.

Advertisement

ಮಹೀಂದ್ರಾ ಇ ರಿಕ್ಷಾದ ಕುರಿತು ಮಾತನಾಡಿರುವ ಬಿಲ್ ಗೇಟ್ಸ್, ನಾವು ಕೃಷಿಯಿಂದ ಸಾರಿಗೆವರೆಗೆ ಎಲ್ಲವನ್ನೂ ಮಾಡುತ್ತಿರುವ ಸಂದರ್ಭದಲ್ಲಿ ಜಗತ್ತಿನ ರಸ್ತೆಯಲ್ಲಿ ಸಂಚರಿಸಲು ಶೂನ್ಯ ಇಂಗಾಲ ಹೊರಸೂಸುವಿಕೆಯ ವಿಧಾನವನ್ನು ನಾವು ಮರು ಶೋಧಿಸಬೇಕಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಹೊಸತನ ಕಂಡುಹಿಡಿಯುವ ಭಾರತದ ನಾವಿನ್ಯತೆಯ ಉತ್ಸಾಹಕ್ಕೆ ಕೊನೆಯಿಲ್ಲ. ನಾನು 131 ಕಿಲೋ ಮೀಟರ್ ದೂರದವರೆಗೆ ನಾಲ್ವರು ಪ್ರಯಾಣಿಕರನ್ನು ಕರೆದೊಯ್ಯುವ ಸಾಮರ್ಥ್ಯವಿರುವ ಇ ರಿಕ್ಷಾವನ್ನು ಚಲಾಯಿಸಿದ್ದೇನೆ. ಸಾರಿಗೆ ಉದ್ಯಮಕ್ಕೆ ಮಾಲಿನ್ಯ ರಹಿತ ಕೊಡುಗೆಯನ್ನು ನೀಡುತ್ತಿರುವ ಮಹೀಂದ್ರಾದಂತಹ ಕಂಪನಿಗಳು ಸ್ಫೂರ್ತಿದಾಯಕವಾಗಿವೆ ಎಂದು ಬಿಲ್ ಗೇಟ್ಸ್ ಶ್ಲಾಘಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next