Advertisement

ವಿಪಕ್ಷಕ್ಕೆ ಬಿಲ್‌ ಬಾಣ: ಬಿಜೆಪಿಗೆ ಕಾಂಗ್ರೆಸ್‌ ಸರಕಾರ ಆಘಾತ

08:47 AM May 23, 2023 | Team Udayavani |

ಬೆಂಗಳೂರು: ಎರಡು ದಿನಗಳ ಹಿಂದೆಯಷ್ಟೇ ಬಿಜೆಪಿ ಅವಧಿಯ ಪ್ರಮುಖ ಭ್ರಷ್ಟಾಚಾರ ಹಗರಣಗಳ ವಿರುದ್ಧ ತನಿಖಾಸ್ತ್ರ ಪ್ರಯೋಗದ ಸುಳಿವು ನೀಡಿದ್ದ ಹೊಸ ಸರಕಾರ, ಈಗ ಚುನಾವಣೆ ಹೊಸ್ತಿಲಲ್ಲಿ ನೀಡಲಾಗಿದ್ದ ವಿವಿಧ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದರ ಜತೆಗೆ ಬಿಲ್‌ ಪಾವತಿಗೂ ತಡೆ ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ವಿಪಕ್ಷಕ್ಕೆ ಮತ್ತೊಂದು “ಶಾಕ್‌’ ನೀಡಿದೆ.

Advertisement

ಈ ಹಿಂದಿನ ಸರಕಾರ ಕೈಗೊಂಡಿದ್ದ ಎಲ್ಲ ಇಲಾಖೆಗಳ ಹಾಗೂ ಇಲಾಖೆಗಳ ಅಧೀನಕ್ಕೊಳ ಪಡುವ ನಿಗಮ/ ಮಂಡಳಿ/ ಪ್ರಾಧಿಕಾರಗಳ ಕಾಮಗಾರಿಗಳಿಗೆ ಸಂಬಂಧಿಸಿದ ಹಣ ಪಾವತಿ ಯನ್ನು ತತ್‌ಕ್ಷಣ ತಡೆಹಿಡಿಯುವುದರ ಜತೆಗೆ ಪ್ರಾರಂಭವಾಗದಿರುವ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದು, ಸೋಮವಾರ ಆರ್ಥಿಕ ಇಲಾಖೆ ಈ ಸಂಬಂಧ ಆದೇಶವನ್ನೂ ಹೊರಡಿಸಿದೆ. ಇದರೊಂದಿಗೆ ಕಾಮಗಾರಿಗೆ ಹಣ ಹಾಕಿರುವ ಗುತ್ತಿಗೆದಾರರು ಹಾಗೂ ಆ ಕಾಮಗಾರಿ ಕೊಡಿಸಿ ದವರು ಅತಂತ್ರರಾಗುವಂತಾಗಿದೆ.

ಚುನಾವಣೆಗೆ ನಾಲ್ಕಾರು ತಿಂಗಳು ಬಾಕಿ ಇರು ವಾಗ ಬಿಜೆಪಿ ಸುಮಾರು 16 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಸಾವಿರಾರು ಕಾಮ ಗಾರಿಗಳಿಗೆ ಟೆಂಡರ್‌ ನೀಡಿರುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ದಾಖಲೆಗಳನ್ನೂ ಕಾಂಗ್ರೆಸ್‌ ಆಗ ಬಿಡುಗಡೆ ಮಾಡಿತ್ತು. ಅವುಗಳ ಪೈಕಿ ಈಗ ಕೆಲವು ಪೂರ್ಣಗೊಂಡು ಬಿಲ್‌ ಪಾವತಿ ಹಂತದಲ್ಲಿ ಇದ್ದು, ಕೆಲವು ಆರಂಭಗೊಂಡಿಲ್ಲ.

ಗುತ್ತಿಗೆದಾರರ ದುಂಬಾಲು?
ರಸ್ತೆ ಅಭಿವೃದ್ಧಿ, ಬೈಪಾಸ್‌, ಮೇಲ್ಸೇತುವೆಗಳು ಸಹಿತ ಹತ್ತಾರು ಕಾಮಗಾರಿಗಳಿಗೆ ನೂರಾರು ಕೋಟಿ ರೂ.ಗಳನ್ನು ಗುತ್ತಿಗೆದಾರರು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಹಣ ಹೂಡಿಕೆ ಮಾಡಿದ್ದಾರೆ. ಕೆಲವರು ಸಾಲ ತಂದು ಕೆಲಸ ಮಾಡಿರುವುದೂ ಇದೆ. ಈ ಹಂತ ದಲ್ಲಿ ಹೊರಬಿದ್ದಿರುವ ಸರಕಾರಿ ಆದೇಶ ಆಘಾತ ನೀಡಿದೆ. ಕಾಮಗಾರಿ ಉಳಿಸಿಕೊಳ್ಳಲು ಅಥವಾ ಹಣ ಬಿಡುಗಡೆಗೆ ಅವರೆಲ್ಲರೂ ಹೊಸ ಸರಕಾರಕ್ಕೆ ದುಂಬಾಲು ಬೀಳುವುದು ಅನಿವಾರ್ಯವಾಗಿದೆ.

ಚುನಾವಣೆ ಪೂರ್ವದಲ್ಲೇ ಕಾಂಗ್ರೆಸ್‌ ಈ ಸುಳಿವು ನೀಡಿತ್ತು. ಅಲ್ಲದೆ, ಈ ಕಾಮಗಾರಿಗಳ ಟೆಂಡರ್‌ ನೀಡಿರುವುದರ ಹಿಂದೆ ಚುನಾವಣೆಗೆ ಹಣ ಕ್ರೋಡೀಕರಣದ ದುರುದ್ದೇಶ ಅಡಗಿದೆ ಎಂದೂ ಗಂಭೀರವಾಗಿ ಆರೋಪಿಸಿತ್ತು. ಈ ಸಂಬಂಧ ಚುನಾವಣ ಆಯೋಗಕ್ಕೂ ದೂರು ಸಲ್ಲಿಸಿತ್ತು. ದೂರನ್ನು ಪರಿಶೀಲಿಸಿದ್ದ ಆಯೋಗವು ಆ ಎಲ್ಲ ಟೆಂಡರ್‌ ಪ್ರಕ್ರಿಯೆಗೆ ತಡೆ ನೀಡಲು ಸೂಚಿಸಿತ್ತು.

Advertisement

ಸಿಎಂ ಸಚಿವಾಲಯಕ್ಕೆ
ಹಲವರ ನೇಮಕ
ಬೆಂಗಳೂರು: ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿ ಡಾ| ವೆಂಕಟೇಶಯ್ಯ ಸಹಿತ ಮುಖ್ಯಮಂತ್ರಿ ಸಚಿವಾಲಯಕ್ಕೆ ವಿವಿಧ ವಿಭಾಗಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಿ ಸೋಮವಾರ ಸರಕಾರ ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ. ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ಆಪ್ತ ಕಾರ್ಯದರ್ಶಿಯಾಗಿದ್ದ ಕೆಎಎಸ್‌ ಅಧಿಕಾರಿ ಡಾ| ವೆಂಕಟೇಶಯ್ಯ ಅವರನ್ನು ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ| ರಜನೀಶ್‌ ಗೋಯಲ್‌ರನ್ನು ಆಪರ ಮುಖ್ಯ ಕಾರ್ಯದರ್ಶಿ ಹು¨ªೆಗೆ ಸಮವರ್ತಿ ಪ್ರಭಾರದಲ್ಲಿರಿಸಿ ನಿಯೋಜಿಸಲಾಗಿದೆ. ಎಂ. ವೆಂಕಟೇಶ್‌ ಅವರನ್ನು ಮುಖ್ಯಮಂತ್ರಿ ಪದಾವಧಿವರೆಗೆ ಅಥವಾ ಮುಂದಿನ ಆದೇಶದವರೆಗೆ ಮುಖ್ಯಮಂತ್ರಿಯ ವಿಶೇಷಾಧಿ ಕಾರಿಯಾಗಿ ನೇಮಿಸಲಾಗಿದೆ.

ಪ್ರಭಾಕರ್‌ಗೆ ಸಂಪುಟ
ದರ್ಜೆ ಸ್ಥಾನ
ಇನ್ನು ಸಿದ್ದರಾಮಯ್ಯ ತಮ್ಮ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ದಲ್ಲಿ ಮುಖ್ಯಮಂತ್ರಿಯವರ ಮಾಧ್ಯಮ ಸಮನ್ವಯಕರಾಗಿದ್ದ ಹಿರಿಯ ಪತ್ರಕರ್ತ ಕೆ.ವಿ. ಪ್ರಭಾಕರ್‌ ಅವರನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದ್ದು, ಅವರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನವನ್ನೂ ನೀಡಲಾಗಿದೆ. ಪೌರಾಡಳಿತ ಇಲಾಖೆ ಜಂಟಿ ನಿರ್ದೇಶಕ ಬಿ. ಶಿವಸ್ವಾಮಿ ಅವರನ್ನು ಮುಖ್ಯಮಂತ್ರಿ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಅಧಿಕಾರಿಗಳ ಮೇಲೂ ತೂಗುಗತ್ತಿ?
ಟೆಂಡರ್‌ ಕರೆದಿರುವ ಅಧಿಕಾರಿಗಳ ವಿರುದ್ಧ ತನಿಖೆಗೂ ಆದೇಶಿಸುವುದಾಗಿ ಕಾಂಗ್ರೆಸ್‌ ಹೇಳಿತ್ತು. ತಡೆ ನೀಡಿರುವ ಬೆನ್ನಲ್ಲೇ ತನಿಖೆಯ ತೂಗುಗತ್ತಿಯೂ ಅಧಿಕಾರಿಗಳ ಮೇಲೆ ನೇತಾಡುತ್ತಿದೆ! “ಚುನಾವಣೆ ಪೂರ್ವದಲ್ಲಿ ಕರೆದ ಟೆಂಡರ್‌ಗಳು ಖಂಡನೀಯ. ಹೀಗೆ ಅಕ್ರಮ ಟೆಂಡರ್‌ ಕರೆದಿರುವ ಎಲ್ಲ ಅಧಿಕಾರಿಗಳು, ಸಚಿವರ ವಿರುದ್ಧ ಕಾಂಗ್ರೆಸ್‌ ಸರಕಾರ ಬರುತ್ತಿದ್ದಂತೆ ತನಿಖೆಗೆ ಆದೇಶ ನೀಡಲಿದೆ. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಿದೆ. ಈ ಟೆಂಡರ್‌ ಪ್ರಕ್ರಿಯೆಯಲ್ಲಿ ಕ್ರಿಮಿನಲ್‌ ಮೊಕದ್ದಮೆ ಎದುರಿಸಬೇಕಾಗುತ್ತದೆ’ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಸಹಿತ ಆ ಪಕ್ಷದ ನಾಯಕರು ಎಚ್ಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಾಮಗಾರಿಗಳು ಯಾವುವು?
“ಬಿಜೆಪಿಯು ಚುನಾವಣೆ ಹೊಸ್ತಿಲಲ್ಲಿ ಶಿರಾಡಿ ಘಾಟಿ ಕಾಮಗಾರಿ ಟೆಂಡರ್‌ಗೆ 1,976 ಕೋ.ರೂ., ದೊಡ್ಡಬಳ್ಳಾಪುರದ ಕಾಮಗಾರಿಗೆ 1,682 ಕೋ. ರೂ., ಆಂಧ್ರಪ್ರದೇಶ- ಕರ್ನಾಟಕ ಗಡಿಭಾಗದ ರಾಯಚೂರಿನಲ್ಲಿ ವಿವಿಧ ಕಾಮಗಾರಿಗಳಿಗೆ 1,633 ಕೋ.ರೂ., ಹಾಸನ ಚತುಷ್ಪಥ ರಸ್ತೆಗೆ 1,318 ಕೋ. ರೂ., ವಿವಿಧ ಬೈಪಾಸ್‌ಗಳ ಅಭಿವೃದ್ಧಿಗೆ 1,167 ಕೋ. ರೂ. ಸಹಿತ ಹಲವು ಪ್ರಮುಖ ಕಾಮಗಾರಿಗಳು ಸೇರಿದ್ದವು. ಅವುಗಳ ಒಟ್ಟು ಮೊತ್ತ 16,516 ಕೋಟಿ ರೂ. ಆಗುತ್ತದೆ. ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಅವೆಲ್ಲವುಗಳಿಗೂ ತಡೆನೀಡಲಾಗುವುದು’ ಎಂದು ಕಾಂಗ್ರೆಸ್‌ ಹೇಳಿತ್ತು.

ನಿಗಮ, ಅಕಾಡೆಮಿಗಳ ನೇಮಕ ರದ್ದು
ಬಿಜೆಪಿ ಸರಕಾರದ ಅವಧಿಯಲ್ಲಿ ನೇಮಕ ಮಾಡಲಾಗಿದ್ದ ಎಲ್ಲ ಇಲಾಖೆಗಳ ವ್ಯಾಪ್ತಿಗೆ ಬರುವ ನಿಗಮ-ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರ ನಾಮನಿರ್ದೇಶನಗಳನ್ನು ರದ್ದುಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲ ಅಕಾಡೆಮಿ ಗಳು, ಮೈಸೂರು, ಶಿವಮೊಗ್ಗ, ಧಾರವಾಡ, ಕಲಬುರಗಿ, ದಾವಣಗೆರೆ, ಉಡುಪಿ ರಂಗಾಯಣ ಹಾಗೂ ಪ್ರಾಧಿಕಾರಗಳ ನಾಮನಿರ್ದೇಶನ ಸಹ ರದ್ದುಗೊಳಿಸಲಾಗಿದೆ. ತಾಲೂಕು, ಜಿಲ್ಲಾ, ರಾಜ್ಯಮಟ್ಟದ ಇತರ ಕಾರ್ಯವ್ಯಾಪ್ತಿ ಒಳಗೊಂಡ ಎಲ್ಲ ತರಹದ ಅಧಿಕಾರೇತರ ಸಂಘ/ಸಂಸ್ಥೆ/ಬ್ಯಾಂಕ್‌ಗಳ ಆಡಳಿತ ಮಂಡಳಿಗಳಿಗೆ ಮಾಡಿರುವ ಎಲ್ಲ ಅಧಿಕಾರೇತರ ಸದಸ್ಯರ ನಾಮ ನಿರ್ದೇಶನಗಳನ್ನು ತತ್‌ಕ್ಷಣದಿಂದ ಜಾರಿಗೆ ಬರು ವಂತೆ ರದ್ದುಪಡಿಸಲಾಗಿದೆ. ನಿಗಮ- ಮಂಡಳಿ, ಅಕಾಡೆಮಿ, ಪ್ರಾಧಿಕಾರ ಸೇರಿ ಇತರ ನೇಮಕಾತಿ ಗಳಿಗೆ ಮುಂದಿನ ದಿನಗಳಲ್ಲಿ ಚಾಲನೆ ಸಿಗಲಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next