Advertisement

ಬಿಳಿಗಿರಿರಂಗನಾಥ ಸ್ವಾಮಿ ಹುಂಡಿಗೆ 29.10 ಲಕ್ಷ ರೂ. ಕಾಣಿಕೆ

12:39 PM Mar 23, 2022 | Team Udayavani |

ಯಳಂದೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿ ದೇಗುಲದಲ್ಲಿ ಸೋಮವಾರ ಗೋಲಕವನ್ನು ಪರ್ಕಾವಣೆ ಮಾಡಲಾಯಿತು.

Advertisement

ದೇಗುಲದಲ್ಲಿ ನೋಟುಗಳ ರೂಪದಲ್ಲಿ 27.36 ಲಕ್ಷ ರೂ., ನಾಣ್ಯಗಳ ರೂಪದಲ್ಲಿ 1.73 ಲಕ್ಷ ರೂ. ಸೇರಿ 29,10,527 ಲಕ್ಷ ರೂ. ಹಣ ಸಂಗ್ರಹವಾ ಗಿದೆ. ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ಗೋಲಕದ ಹಣದ ಏಣಿಕೆ ಮಾಡಲಾಗಿತ್ತು. ಕಳೆದ 4 ತಿಂಗಳ ನಂತರ ಎಣಿಕೆ ಮಾಡಲಾಗಿದೆ.

ವಿದೇಶಿ ನೋಟುಗಳು ಪತ್ತೆ: ದೇಶ, ವಿದೇಶದಿಂದ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನಕ್ಕೆ ಭಕ್ತರು ಆಗಮಿಸುತ್ತಾರೆ. ಕೋವಿಡ್‌ ಹಿನ್ನೆಲೆಯಲ್ಲಿ 2 ವರ್ಷಗಳಿಂದ ವಿದೇಶಿಗರು ಬರುವುದು ಕಡಿಮೆ ಆಗಿತ್ತು. ಈ ಹುಂಡಿಯಲ್ಲಿ ಅಮೆರಿಕಾದ 20 ಡಾಲರ್‌ನ 5 ನೋಟು ಸೇರಿ ಒಟ್ಟು 100 ಅಮೆರಿಕಾ ಡಾಲರ್‌ ಸಂಗ್ರಹವಾಗಿದೆ. ಜತೆಗೆ ಮಲೇಷಿಯಾದ 50 ರಿಂಗಿಲ್‌ 5 ನೋಟು, 20 ರಿಂಗಿಲ್‌ 17 ನೋಟು, 1 ರಿಂಗಿಲ್‌ ಸೇರಿ 23 ನೋಟುಗಳು, ಕುವೈತ್‌ ವಿದೇಶದ 1 ನೋಟು ಸಂಗ್ರಹವಾಗಿದೆ ಎಂದು ದೇಗು ಲದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ಕುಮಾರ್‌ ಮಾಹಿತಿ ನೀಡಿದ್ದಾರೆ.

ಈ ಎಣಿಕೆ ಕಾರ್ಯದಲ್ಲಿ ದೇಗುಲ ಸಿಬ್ಬಂದಿ ರಾಜು, ಶೇಷಾದ್ರಿ, ರಂಗನಾಥ್‌, ಪೊಲೀಸ್‌ ಸಿಬ್ಬಂದಿ, ನೌಕರರು, ಕಂದಾಯ ಇಲಾಖೆ ಸಿಬ್ಬಂದಿ, ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್‌ನ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next