Advertisement

ಹಿಮಾಚಲಕ್ಕೆ ಎರಡು ದೊಡ್ಡ ಗಿಫ್ಟ್ ಸಿಕ್ಕಿದೆ : ಬಿಲಾಸ್‌ಪುರದಲ್ಲಿ ಪ್ರಧಾನಿ ಮೋದಿ

03:27 PM Oct 05, 2022 | Team Udayavani |

ಬಿಲಾಸ್‌ಪುರ :ಪ್ರಧಾನಿ ನರೇಂದ್ರ ಮೋದಿ ಅವರ ಹಿಮಾಚಲ ಪ್ರದೇಶದ ಬಿಲಾಸ್‌ಪುರದಲ್ಲಿ ಬುಧವಾರ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಉದ್ಘಾಟಿಸಿದರು.

Advertisement

” ವಿಜಯದಶಮಿ 2022 ರ ಸಂದರ್ಭದಲ್ಲಿ ಇಂದು ಉದ್ಘಾಟನೆಗೊಂಡ ಅಭಿವೃದ್ಧಿ ಯೋಜನೆಗಳು ‘ಪಂಚ ಪ್ರಾಣ’ವನ್ನು ಅನುಸರಿಸುವ ಮೂಲಕ ಅಭಿವೃದ್ಧಿ ಹೊಂದಿದ ಭಾರತದ ದೂರ ದೃಷ್ಟಿಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇಂದು ಬಿಲಾಸ್‌ಪುರವು ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಗಳ ಡಬಲ್ ಉಡುಗೊರೆಯನ್ನು ಪಡೆದುಕೊಂಡಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ : ಸೇನೆಯ ಚೀತಾ ಹೆಲಿಕಾಪ್ಟರ್ ಪತನ ; ಲೆಫ್ಟಿನೆಂಟ್ ಕರ್ನಲ್ ಹುತಾತ್ಮ

”ಜನರು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಿಜೆಪಿಗೆ ಮತ ಹಾಕಿರುವುದರಿಂದ ಹಿಮಾಚಲ ಪ್ರದೇಶದ ಅಭಿವೃದ್ಧಿ ಸಾಧ್ಯ.”ಎಂದು ಪ್ರಧಾನಿ ಮೋದಿ ಹೇಳಿದರು.

ಪ್ರಧಾನಿಯನ್ನು ಶ್ಲಾಘಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್, “ಮೊದಲು ಏಮ್ಸ್ ಎಂದರೆ ದೆಹಲಿಗೆ ಹೋಗಬೇಕಿತ್ತು. ಆದರೆ ಪ್ರಧಾನಿ ಮೋದಿ ಹಿಮಾಚಲದ ಜನರ ನೋವನ್ನು ಅರ್ಥಮಾಡಿಕೊಂಡರು ಮತ್ತು ಬಿಲಾಸ್‌ಪುರಕ್ಕೆ ಏಮ್ಸ್ ತಂದರು. ಇದು ನಮಗೆ ಯಾರ ನಾಯಕತ್ವ ಶಕ್ತಿ ನೀಡಿದೆ ಎಂದು ನಮಗೆ ಯಾವಾಗಲೂ ನೆನಪಿಸುತ್ತದೆ” ಎಂದರು.

Advertisement

ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಉಪಸ್ಥಿತರಿದ್ದರು.

ಏಮ್ಸ್ ವಿಶೇಷ

ಏಮ್ಸ್ ಬಿಲಾಸ್‌ಪುರವು 18 ಸ್ಪೆಷಾಲಿಟಿ ಮತ್ತು 17 ಸೂಪರ್ ಸ್ಪೆಷಾಲಿಟಿ ವಿಭಾಗಗಳು, 18 ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗಳು ಮತ್ತು 64 ಐಸಿಯು ಹಾಸಿಗೆಗಳೊಂದಿಗೆ 750 ಹಾಸಿಗೆಗಳನ್ನು ಹೊಂದಿರುವ ಅತ್ಯಾಧುನಿಕ ಆಸ್ಪತ್ರೆಯಾಗಿದ್ದು, ಇದನ್ನು 1,470 ಕೋಟಿ ರೂ. ಗಳಿಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. 247 ಎಕರೆ ಪ್ರದೇಶದಲ್ಲಿ ಹರಡಿರುವ ಆಸ್ಪತ್ರೆಯು 24 ಗಂಟೆಗಳ ತುರ್ತು ಮತ್ತು ಡಯಾಲಿಸಿಸ್ ಸೌಲಭ್ಯಗಳು, ಅಲ್ಟ್ರಾಸೋನೋಗ್ರಫಿ, ಸಿಟಿ ಸ್ಕ್ಯಾನ್, ಎಂಆರ್ ಐ ಇತ್ಯಾದಿ ಆಧುನಿಕ ರೋಗನಿರ್ಣಯ ಯಂತ್ರಗಳು, ಅಮೃತ್ ಫಾರ್ಮಸಿ ಮತ್ತು ಜನೌಷಧಿ ಕೇಂದ್ರ ಮತ್ತು 30 ಹಾಸಿಗೆಗಳ ಆಯುಷ್ ಬ್ಲಾಕ್ ಅನ್ನು ಹೊಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next