Advertisement

Bike wheeling: ಬೈಕ್‌ ವ್ಹೀಲಿಂಗ್‌; ನಾಲ್ವರ ಸೆರೆ, 8 ಬೈಕ್‌ ಆರ್‌ಸಿ ಸಸ್ಪೆಂಡ್‌

11:10 AM Feb 28, 2024 | Team Udayavani |

ಬೆಂಗಳೂರು: ನಗರ ಸಂಚಾರ ಪೊಲೀಸರು ಬೈಕ್‌ ವ್ಹೀಲಿಂಗ್‌ ಮಾಡುವವರ ವಿರುದ್ಧ ವಿಶೇಷ ಕಾರ್ಯಾ ಚರಣೆ ಮುಂದುವರಿಸಿದ್ದು, ಸಂಚಾರ ಪೂರ್ವ ವಿಭಾ ಗದ ಪೊಲೀಸರು, ಐದು ಕೇಸುಗಳಲ್ಲಿ ನಾಲ್ವರು ಸವಾರರನ್ನು ಬಂಧಿಸಿದ್ದಾರೆ. ಇದೇ ವೇಳೆ ಬೈಕ್‌ ವ್ಹೀಲಿಂಗ್‌ ಸಂಬಂಧ 8 ದ್ವಿಚಕ್ರ ವಾಹನಗಳ ನೋಂದಣಿ ಪ್ರಮಾಣ ಪತ್ರವನ್ನು 3 ತಿಂಗಳ ಅವಧಿಗೆ ಸಾರಿಗೆ ಇಲಾಖೆ ಅಮಾನತು ಮಾಡಿದೆ.

Advertisement

ಸುರಂಜನ್‌ ದಾಸ್‌ ರಸ್ತೆ ಮತ್ತು ಎಚ್‌ಬಿಆರ್‌ ಲೇಔಟ್‌ನ 80 ಅಡಿ ರಸ್ತೆ ಹಾಗೂ ನರೇಂದ್ರ ಟೆಂಟ್‌ ರಸ್ತೆಯಲ್ಲಿ ದ್ವಿಚಕ್ರ ವಾಹನ ವ್ಹೀಲಿಂಗ್‌ ಮಾಡುತ್ತಿದ್ದ ಐವರು ದ್ವಿಚಕ್ರ ವಾಹನ ಸವಾರರನ್ನು ಬಂಧಿಸಿದ್ದು, ಅವರಿಂದ ಐದು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಐವರು ಸವಾರರ ಪೈಕಿ ಒಬ್ಬ ಕಾನೂನು ಸಂಘರ್ಷಕ್ಕೆ ಒಳಗಾದವನಾಗಿದ್ದಾನೆ. ಈ ಸಂಬಂಧ ಎಚ್‌ಎಎಲ್‌ ಸಂಚಾರ ಠಾಣೆ, ಕೆ.ಜಿ.ಹಳ್ಳಿ, ಜೀವನಭೀಮಾನಗರ ಸಂಚಾರ ಠಾಣೆಗಳಲ್ಲಿ 5 ಪ್ರತ್ಯೇಕ ಎಫ್ಐಆರ್‌ಗಳು ದಾಖಲಾಗಿವೆ .

8 ದ್ವಿಚಕ್ರ ವಾಹನಗಳ ನೋಂದಣಿ ಅಮಾನತು: ಈ ವೇಳೆ ಕಳೆದ6 ತಿಂಗಳಲ್ಲಿ ದ್ವಿಚಕ್ರ ವಾಹನ ವ್ಹೀಲಿಂಗ್‌ ಸಂಬಂಧ 46 ಕೇಸು ದಾಖ ಲಿಸಿದ್ದ ಪೂರ್ವ ಸಂಚಾರ ವಿಭಾಗದ ಪೊಲೀಸರು, ಈ ಪೈಕಿ 8 ದ್ವಿಚಕ್ರ ವಾಹನಗಳ ನೋಂದಣಿ ಪ್ರಮಾಣ ಪತ್ರ(ಆರ್‌ಸಿ)ಗಳನ್ನು 3 ತಿಂಗಳ ಅವಧಿಗೆ ಸಾರಿಗೆ ಇಲಾಖೆ ಅಮಾ ನತುಗೊಳಿಸಿದೆ. 2023ರ ಸೆಪ್ಟೆಂಬರ್‌ನಿಂದ ಫೆ.27ರ ವರೆಗೆ ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ 46 ದ್ವಿಚಕ್ರ ವಾಹನ ವ್ಹೀಲಿಂಗ್‌ ಪ್ರಕರಣ ದಾಖಲಿ ಸಲಾಗಿತ್ತು. ಈ ಪೈಕಿ 34 ಮಂದಿ ವಯಸ್ಕರು, 12 ಮಂದಿ ಅಪ್ರಾಪ್ತರಾಗಿದ್ದಾರೆ ಎಂದು ಸಂಚಾರ ಪೂರ್ವ ವಿಭಾಗದ ಡಿಸಿಪಿ ಕುಲದೀಪ್‌ ಕುಮಾರ್‌ ಜೈನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next