ಪಣಜಿ: ಏಷ್ಯಾದ ಅತಿದೊಡ್ಡ ಬೈಕ್ ಶೋ ಎಂದು ಹೆಸರಿಸಲಾಗಿರುವ ಇಂಡಿಯಾ ಬೈಕ್ ವೀಕ್ 2022, ಶುಕ್ರವಾರದಿಂದ (ಡಿ.2) ಗೋವಾದಲ್ಲಿ ಆರಂಭವಾಗಲಿದೆ.
ಈ ಬೈಕ್ ಶೋ ಕಾರ್ಯಕ್ರಮವು ಡಿಸೆಂಬರ್ 2 ಮತ್ತು 3 ರಂದು ಗೋವಾದ ವಾಗಾತೋರ್‍ನಲ್ಲಿ ನಡೆಯಲಿದೆ. ಅಗತ್ಯ ಅನುಮತಿ ತಡವಾದ ಹಿನ್ನೆಲೆಯಲ್ಲಿ ಅಂತಿಮವಾಗಿ ನಾಳೆಯಿಂದ ಅತಿ ದೊಡ್ಡ ಬೈಕ್ ಶೋ ನಡೆಯುತ್ತಿದೆ.
ಇದು ಇಂಡಿಯಾ ಬೈಕ್ ವೀಕ್ 2022 ರ ಎಂಟನೇ ಆವೃತ್ತಿಯಾಗಿದೆ. ಈ ಬಾರಿ ಈ ಕಾರ್ಯಕ್ರಮಕ್ಕೆ ಸುಮಾರು 14 ಸಾವಿರ ನೋಂದಣಿಗಳು ಬಂದಿವೆ ಎನ್ನಲಾಗಿದ್ದು ಈವೆಂಟ್‍ಗೆ ಆರಂಭದಲ್ಲಿ ಅನುಮತಿಯನ್ನು ಪಡೆಯದ ನಂತರ ಆಗಸ್ಟ್ 2022 ರಲ್ಲಿ ಈವೆಂಟ್‍ಗಾಗಿ ಸಮಿತಿಯನ್ನು ನೇಮಿಸಲಾಯಿತು. ಅಂತಿಮವಾಗಿ ಇದು ಡಿಸೆಂಬರ್ 02 ರಿಂದ ಪ್ರಾರಂಭವಾಗುತ್ತದೆ. ಇಂಡಿಯಾ ಬೈಕ್ ವೀಕ್ ಎರಡು ದಿನಗಳ ಈವೆಂಟ್ ಆಗಿದೆ.
ಐದು ವಿಭಿನ್ನ ರೇಸ್ ಟ್ರ್ಯಾಕ್‍ಗಳು, ಬೈಕರ್ಸ್ ಮಾರ್ಟ್ (ಒಳಾಂಗಣ ಮತ್ತು ಹೊರಾಂಗಣ ಎಕ್ಸ್‍ಪೋ), ಬಿಗ್ ಟ್ರಿಪ್ ಸೆಷನ್‍ಗಳು, ಲಡಾಖ್ ಟೆಂಟ್, ಮೂರು ಹಂತಗಳು ಮತ್ತು ಕ್ಲಬ್ ವಿಲೇಜ್ ಗಳನ್ನು ಒಳಗೊಂಡಿದೆ ಎನ್ನಲಾಗಿದೆ.
Related Articles
ಪ್ರಸಕ್ತ ಬೈಕ್ ಶೋದಲ್ಲಿ ಅಡ್ವೆಂಚರ್ ಟ್ರ್ಯಾಕ್, ಫ್ಲೋ ಟ್ರ್ಯಾಕ್ ಮೋಟೋ ಕ್ರಾಸ್ ಮತ್ತು ಡರ್ಟ್ ಡ್ಯಾಶ್ ತರಬೇತಿ ನಡೆಸಲಿದೆ ಎನ್ನಲಾಗಿದೆ. ಏತನ್ಮಧ್ಯೆ, ನವೆಂಬರ್ ತಿಂಗಳಲ್ಲಿ ಮ್ಹಾಪ್ಸಾದಲ್ಲಿ ನಡೆದ ಮೋಟಾರ್ ರೇಸ್ ವಿವಾದಾತ್ಮಕವಾಗಿತ್ತು. ಇದರಲ್ಲಿ ಗೋವಾದ ಯುವಕನೊಬ್ಬ ಆಕಸ್ಮಿಕವಾಗಿ ಸಾವನ್ನಪ್ಪಿದ ಘಟನೆಯೂ ನಡೆದಿತ್ತು.
ಇದನ್ನೂ ಓದಿ: ಪಣಜಿ: ಜುವಾರಿ ಸೇತುವೆಯ ಕಾಮಗಾರಿ ಪೂರ್ಣ, ಅಧಿಕಾರಿಗಳಿಂದ ಸೇತುವೆಯ ಭಾರ ಪರೀಕ್ಷೆ