Advertisement
ನಯಾಬಜಾರ್ ನಾಟೆಕಲ್ ಹೌಸ್‌ನ ಅಬ್ದುಲ್ ಖಾದರ್ ಅವರ ಪುತ್ರ ಮುಹಮ್ಮದ್ ಮುಶ್‌ಹಾಬ್ (21) ಮತ್ತು ಮಂಜೇಶ್ವರ ಬಡಾಜೆ ಮೇಲಂಗಡಿ ರಸ್ತೆಯ ನಿವಾಸಿ ಹನೀಫ್ ಅವರ ಪುತ್ರ ಮೊಹಮ್ಮದ್ ಹಮೀನ್ ಮೆಹರೂಪ್ (20) ಸಾವಿಗೀಡಾದವರು. ಇವರಿಬ್ಬರೂ ಮಂಗಳೂರು ಶ್ರೀನಿವಾಸ ಕಾಲೇ ಜಿನ ದ್ವಿತೀಯ ವರ್ಷ ಬಿಬಿಎ ವಿದ್ಯಾರ್ಥಿಗಳಾಗಿದ್ದಾರೆ.
ಕಾಸರಗೋಡು: ಸೂರ್ಲಿನಲ್ಲಿ ಶನಿವಾರ ಕಾರು ಢಿಕ್ಕಿ ಹೊಡೆದು ಸ್ಕೂಟರ್ ಸವಾರ ನಿವೃತ್ತ ಸಪ್ಲೈಕೋ ಕಚೇರಿ ಮ್ಯಾನೇಜರ್ ಶಿರಿಬಾಗಿಲು ನ್ಯಾಶನಲ್ ನಗರ ನಿವಾಸಿ ರವಿದಾಸ್ (58) ಮೃತಪಟ್ಟರು. ಢಿಕ್ಕಿ ಹೊಡೆದ ಪರಿಣಾಮವಾಗಿ ರಸ್ತೆಗೆ ಬಿದ್ದ ಅವರ ಮೈಮೇಲೆ ಕಾರು ಹರಿದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
Related Articles
ಕಾಸರಗೋಡು: ಹೊಸದುರ್ಗದ ಇಕ್ಬಾಲ್ ರೈಲ್ವೇ ಗೇಟ್ ಸಮೀಪದ ಮಾಪಿಳ್ಳ ಸ್ಕೂಲ್ ಪರಿಸರದ ರೈಲು ಹಳಿಯಲ್ಲಿ ಪಶ್ಚಿಮ ಬಂಗಾಲದ ನಾಸಿರ್ ಗ್ರಾಮ ನಿವಾಸಿಗಳಾದ ದೀನ್ ಮೊಹಮ್ಮದ್ ಮಾಲೀಕ್ ಅವರ ಪುತ್ರ ಸಂತು ಮಾಲೀಕ್ (32) ಮತ್ತು ಮೊದೀನ್ ಶೇಖ್ ಅವರ ಪುತ್ರ ಫಾರೂಕ್ ಶೇಖ್ (23) ಅವರ ಮೃತದೇಹ ಪತ್ತೆಯಾಗಿದೆ.
Advertisement
ರೈಲು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ರೈಲು ಢಿಕ್ಕಿ ಹೊಡೆದು ಸಾವು ಸಂಭವಿಸಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.
ಹೊಸದುರ್ಗದ ಕೊಳವಯಲ್‌ನ ಕ್ವಾಟ್ರಸ್‌ನಲ್ಲಿ ವಾಸಿಸುತ್ತಿದ್ದ ಇವರು ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದರು. ರೈಲು ಹಳಿಯಲ್ಲಿ ಪುಡಿಯಾದ ಮೊಬೈಲ್‌ಫೋನ್ ಪತ್ತೆಯಾಗಿದೆ. ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.