Advertisement

ವರ್ಷದ ಬಳಿಕ ಬೈಕ್‌ ಕಳ್ಳನ ಬಂಧನ

12:41 PM Jul 04, 2018 | |

ಬೆಂಗಳೂರು: ಒಎಲ್‌ಎಕ್ಸ್‌ ಜಾಹಿರಾತು ನೋಡಿ ಬೈಕ್‌ ಖರೀದಿಸಲು ಬಂದು ಟೆಸ್ಟ್‌ಡ್ರೈವ್‌ಗೆಂದು ಬೈಕ್‌ ಕದ್ದೊಯ್ದಿದ್ದ ಆರೋಪಿಯನ್ನು ಒಂದು ವರ್ಷದ ಬಳಿಕ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಂಗೇರಿ ಉಪನಗರದ ಭರತ್‌ (27)ಬಂಧಿತ. ಆರೋಪಿಯಿಂದ 2.50 ಲಕ್ಷ ರೂ. ಮೌಲ್ಯದ 3 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ದೇವನಹಳ್ಳಿಯ ಪ್ರೀತಂ ತಮ್ಮ ಬೈಕ್‌ ಮಾರಾಟ ಮಾಡುವುದಾಗಿ 2017ರಲ್ಲಿ ಒಎಲ್‌ಎಕ್ಸ್‌ನಲ್ಲಿ ಜಾಹಿರಾತು ಹಾಕಿದ್ದರು. ಇದನ್ನು ಗಮನಿಸಿದ ಆರೋಪಿ ಮೇ. 13 ರಂದು ಪ್ರೀತಂಗೆ ಕರೆ ಮಾಡಿ 45,500 ರೂ.ಗೆ ಬೈಕ್‌ ಖರೀದಿ ಮಾಡುವುದಾಗಿ ತಿಳಿಸಿದ್ದು, ಯಲಹಂಕದ ಸರ್ಕಾರಿ ಆಸ್ಪತ್ರೆ ಬಳಿ ನೀಡುವಂತೆ ಹೇಳಿದ್ದ. ಅದರಂತೆ ಪ್ರೀತಂ, ಭರತ್‌ ಹೇಳಿದ ಸ್ಥಳಕ್ಕೆ ಬೈಕ್‌ ಕೊಂಡೊಯ್ದಿದ್ದಾರೆ.

ಬಳಿಕ ಸ್ಥಳಕ್ಕೆ ಬಂದ ಆರೋಪಿ ಬೈಕ್‌ನ್ನು ಟೆಸ್ಟ್‌ಡ್ರೈವ್‌ ಮಾಡುವುದಾಗಿ ಹೇಳಿ ತೆಗೆದುಕೊಂಡು ಹೋಗಿದ್ದಾನೆ. ಒಂದು ಗಂಟೆಯಾದರೂ ವಾಪಸ್‌ ಬಂದಿಲ್ಲ. ಇದರಿಂದ ಅನುಮಾನಗೊಂಡು ಆರೋಪಿಗೆ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್‌ ಆಫ್ ಆಗಿದೆ. ಈ ಸಂಬಂಧ ಪ್ರೀತಂ ಮೇ.20ರಂದು ಯಲಹಂಕ ಠಾಣೆಗೆ ದೂರು ನೀಡಿದ್ದರು. ಆರೋಪಿಯ ಪತ್ತೆಗಾಗಿ ವಿಶೇಷ ತಂಡ ಕೂಡ ರಚಿಸಲಾಗಿತ್ತು.

ಒಂದು ವರ್ಷದ ಬಳಿಕ ಪತ್ತೆ: ತನಿಖೆ ಆರಂಭಿಸಿದ ವಿಶೇಷ ತಂಡ ಆರೋಪಿಯ ಮೊಬೈಲ್‌ ಸಂಖ್ಯೆ ಆಧಾರದ ಮೇಲೆ 1 ವರ್ಷದ ಬಳಿಕ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಆರೋಪಿಯ ಬಂಧಿನದಿಂದ ಮತ್ತೆರಡು ಬೈಕ್‌ ಅಪಹರಣ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next