Advertisement

ಬೇಲ್‌ಗೆ ಕುಟುಂಬ ಸಹಕರಿಸದಿದ್ದಕ್ಕೆ ಕೈದಿ ಜೈಲಿನಲ್ಲಿ ಆತ್ಮಹತ್ಯೆ

09:41 AM May 17, 2022 | Team Udayavani |

ಬೆಂಗಳೂರು: ಜಾಮೀನು ನೀಡಲು ಕುಟುಂಬ ಸದಸ್ಯರು ಬರಲಿಲ್ಲ ಎಂದು ಮಾನಸಿಕ ಖನ್ನತೆಗೊಳಗಾದ ಕೈದಿಯೊಬ್ಬ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ.

Advertisement

ಆಜಾದ್‌ ನಗರದ ಮನೋಜ್‌ ಅಲಿಯಾಸ್‌ ಹೂವು(36) ಆತ್ಮಹತ್ಯೆ ಮಾಡಿಕೊಂಡ ಕೈದಿ. ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ 8ನೇ ಬ್ಯಾರಕ್‌ನ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮನೋಜ್‌ ಪದೇ ಪದೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ. ರಂಜಾನ್‌ ಸಮಯದಲ್ಲಿ ಕೆಲವು ಹುಡುಗರನ್ನು ಗುಂಪು ಸೇರಿಸಿಕೊಂಡು ಚಾಮರಾಜ ಪೇಟೆ ಠಾಣೆ ವ್ಯಾಪ್ತಿಯಲ್ಲಿ ಗಲಾಟೆ ಮಾಡುತ್ತಿದ್ದ. ಅಲ್ಲದೇ, ಬೈಕ್‌ ಕಳವು ಪ್ರಕರಣವೊಂದರಲ್ಲಿ ಚಾಮರಾಜ ಪೇಟೆ ಪೊಲೀಸರು ಮನೋಜ್‌ನನ್ನು ಮೇ 1ರಂದು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು. ಸೋಮವಾರ ಬೆಳಗ್ಗೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ:ಮಾಜಿ ಕೇಂದ್ರ ಸಚಿವ ಚಿದಂಬರಂ ಆಸ್ತಿ ಮೇಲೆ ಸಿಬಿಐ ದಾಳಿ; ಪುತ್ರನ ವಿರುದ್ಧ ಹೊಸ ಕೇಸ್

ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ ಬಳಿಕ ಮನೋಜ್‌ ಖನ್ನತೆಗೊಳಗಾಗಿದ್ದ. ತನ್ನ ಪೋಷಕರು ಅಥವಾ ಕುಟುಂಬಸ್ಥರ ಜಾಮೀನು ನೀಡಿ ಜೈಲಿನಿಂದ ಕರೆದುಕೊಂಡು ಹೋಗುತ್ತಾರೆ ಎಂದು ತಿಳಿದುಕೊಂಡಿದ್ದೆ. ಆದರೆ, ಯಾರೊಬ್ಬರೂ ಜಾಮೀನು ನೀಡಲು ಮುಂದಾಗಿಲ್ಲ ಎಂದು ಸಹ ಕೈದಿಗಳ ಬಳಿ ಹೇಳಿಕೊಳ್ಳುತ್ತಿದ್ದ. ಜತೆಗೆ ಶನಿವಾರ ಕೂಡ ಕೋರ್ಟ್‌ ಆವರಣದಲ್ಲಿ ಪೊಲೀಸರು ತನಗೆ ವಂಚಿಸಿದ್ದರು ಎಂದು ಕೂಗಾಡಿದ್ದ ಎಂದು ಹೇಳಲಾಗಿದೆ. ಸೋಮವಾರ ಬೆಳಗ್ಗೆ 8ನೇ ಬ್ಯಾರಕ್‌ನ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next