ಬೆಂಗಳೂರು: ಮನೆ ಮುಂದೆ ನಿಲ್ಲಿಸುತ್ತಿದ್ದದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಕಾನೂನು ಸಂಘರ್ಷಕ್ಕೊಳಗಾದವನನ್ನುಸುಬ್ರಮಣ್ಯನಗರ ಪೊಲೀಸರು ಬಂಧಿಸಿದ್ದು, 3.50 ಲಕ್ಷ ರೂ. ಮೌಲ್ಯದ 7ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ.
ಅಪ್ರಾಪ್ತ ಬಾಲಕನನ್ನು ಬಾಲಮಂದಿರಕ್ಕೆ ಒಪ್ಪಿಸಲಾಗಿದೆ. ಈತ ನೀಡಿದ ಮಾಹಿತಿಏಳು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಈ ಪ್ರಕರಣದ ಇಬ್ಬರು ಪ್ರಮುಖಆರೋಪಿಗಳು ತಲೆಮರೆಸಿಕೊಂಡಿದ್ದು,ಅವರಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಇತ್ತೀಚೆಗೆ ಆರ್.ಪಿ.ರಸ್ತೆಯಲ್ಲಿ ಗಸ್ತು ಮಾಡುವಾಗಅಪ್ರಾಪ್ತ ದ್ವಿಚಕ್ರ ವಾಹನದಲ್ಲಿ ಬಂದಿದ್ದಾನೆ.ಈ ವೇಳೆ ತಡೆದು ವಿಚಾರಣೆ ನಡೆಸಿದಾಗಕಳವು ಮಾಡಿದ ದ್ವಿಚಕ್ರ ವಾಹನ ತೆಗೆದುಕೊಂಡು ಬರುತ್ತಿರುವುದು ಗೊತ್ತಾಗಿದೆ.ಆರೋಪಿತರು ಕಳವು ವಾಹನವನ್ನು ತನಗೆನೀಡಿರುವುದಾಗಿ ತಿಳಿಸಿದ್ದಾನೆ. ಈತನೀಡಿದ ಮಾಹಿತಿ ಮಾಹಿತಿ ಮೇರೆಗೆ ಏಳುದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಸುಬ್ರಮಣ್ಯನಗರ ಮೂರು, ರಾಜಾಜಿನಗರ, ಪೀಣ್ಯ, ಮೈಸೂರಿನಮಂಡಿ ಠಾಣೆ ಹಾಗೂ ಬಿಡದಿ ಠಾಣಾವ್ಯಾಪ್ತಿಯಲ್ಲಿ ದಾಖಲಾಗಿದ್ದ ತಲಾ ಒಂದುಸೇರಿ ಏಳು ದ್ವಿಚಕ್ರ ವಾಹನ ಕಳವು ಪ್ರಕರಣಪತ್ತೆಯಾಗಿವೆ. ಆರೋಪಿಗಳು ಮನೆ ಎದುರು ನಿಲುಗಡೆ ಮಾಡಿದ ದ್ವಿಚಕ್ರವಾಹನಗಳನ್ನು ಗುರುತಿಸಿ, ರಾತ್ರಿ ವೇಳೆಹ್ಯಾಂಡಲ್ ಲಾಕ್ ಮುರಿದು ಕಳವುಮಾಡಿ ಪರಾರಿಯಾಗುತ್ತಿದ್ದರು. ಬಳಿಕಗಿರಾಕಿಗಳನ್ನು ಹುಡುಕಿ ಅಪ್ರಾಪ್ತ ಬಾಲಕಮುಖಾಂತರ ಮಾರಾಟ ಮಾಡಿಸಿ ಹಣ ಪಡೆಯುತ್ತಿದ್ದರು ಎಂದು ಪೊಲೀಸರು ಹೇಳಿದರು.