ಬೆಂಗಳೂರು: ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರನೊಬ್ಬ ಅದೇ ಜಾಗದಲ್ಲಿ ಅರ್ಧ ದಿನಗಳ ಕಾಲ ಕುಳಿತು ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ.
ಶನಿವಾರ ಬೈಕ್ ಸವಾರ ಹಲಸೂರು ರಸ್ತೆಯಲ್ಲಿ ಕುಟುಂಬ ಜತೆ ಹೋಗುತ್ತಿದ್ದ ಆಗ ರಸ್ತೆ ಗುಂಡಿಗೆ ಬೈಕ್ ಬಿದ್ದಿದೆ. ಅದರಿಂದ ಆಕ್ರೋಶಗೊಂಡ ಬೈಕ್ ಸವಾರ ಅದೇ ಜಾಗದಲ್ಲಿ ಪ್ರತಿಭಟನೆ ನಡೆಸಿದ್ದಾನೆ.
ಅದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಆಗ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಸ್ಥಳದಿಂದ ಏಳುವಂತೆ ಮನವೊಲಿಸಿದರೂ ಆತ ಜಾಗ ಬಿಟ್ಟು ಕದಲಿಲ್ಲ. ಆಗ ಸ್ಥಳದಲ್ಲಿದ್ದ ಸಾರ್ವ ಜನಿಕರು ಪ್ರತಿಭಟನಾಕರನ ನೆರವಿಗೆ ಬಂದು ಪೊಲೀಸರ ಜತೆ ವಾಗ್ವಾದ ನಡೆಸಿದರು.
ಈ ವಿಡಿಯೋವನ್ನು ರಾಜ್ಯ ಕಾಂಗ್ರೆಸ್ ತನ್ನ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಸರ್ಕಾರದ ವಿರುದ್ಧ ಹರಿ ಹಾಯ್ದಿದೆ. ಪ್ರಧಾನಿ ಮೋದಿ ಭೇಟಿಗಾಗಿ ತೇಪೆ ಹಾಕುವ ಸರ್ಕಾರ ಜನ ಸಾಯು ತ್ತಿದ್ದರು ಗುಂಡಿ ಮುಚ್ಚುವುದಿಲ್ಲವೇಕೆ? ಜನರ ಹಿಂತ ಬಿಜೆಪಿಗೆ ಬೇಕಿಲ್ಲವೇ? ಎಂದು ಪ್ರಶ್ನಿಸಿದೆ.