ಗಂಗಾವತಿ: ತಾಲೂಕಿನ ಸಾಣಾಪುರ ಡಗ್ಗಿ ಹತ್ತಿರ ಕೆಎಸ್ ಆರ್ ಟಿಸಿ ಬಸ್ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿ,ಸವಾರನ ಪತ್ನಿಗೆ ತೀವ್ರ ಗಾಯವಾದ ಘಟನೆ ಶನಿವಾರ ಬೆಳಗ್ಗೆ ಜರುಗಿದೆ.
ಮೃತಪಟ್ಟ ವ್ಯಕ್ತಿ ಕೊಪ್ಪಳ ವಡ್ಡರ ಓಣಿಯ ಶಿವಕುಮಾರ ಭೋವಿ (25), ಹಾಗೂ ಮೃತನ ಪತ್ನಿ ( 21) ಚೈತ್ರ ತೀವ್ರ ಗಾಯಗೊಂಡಿದ್ದಾರೆ.
ಮೃತ ಶಿವಕುಮಾರ ಹಾಗೂ ಪತ್ನಿ ಚೈತ್ರಾ ಜೊತೆಗೂಡಿ ಶನಿವಾರವಾಗಿದ್ದರಿಂದ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುತ್ತಿರುವ ಸಂದರ್ಭದಲ್ಲಿ ತಾಲೂಕಿನ ಸಾಣಾಪುರ್ ಡಗ್ಗಿ ಹತ್ತಿಉಣ್ಣೆ ಬಂದ ಕೆಎಸ್ ಆರ್ ಟಿಸಿ ಬಸ್ ಮತು ಬೈಕ್ ಮಧ್ಯ ಅಪಘಾತ ಸಂಭವಿಸಿ ಶಿವಕುಮಾರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇವರ ಪತ್ನಿ ಚೈತ್ರ ಇವರಿಗೆ ತಲೆ ಮತ್ತು ದೇಹದ ಇತರ ಭಾಗಕ್ಕೆ ಗಾಯಗಳಾಗಿದ್ದು ಅವರನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊಪ್ಪಳದ ವಡ್ಡರ ಓಣಿಯ ನಿವಾಸಿಯಾಗಿರುವ ಶಿವಕುಮಾರ ಮತ್ತು ಚೈತ್ರಾ ಮಧ್ಯೆ ಕಳೆದ 5 ತಿಂಗಳ ಹಿಂದೆ ಮದುವೆಯಾಗಿತ್ತು. ಸ್ಥಳಕ್ಕೆ ಪೊಲೀಸ್ ಠಾಣೆ ಭೇಟಿ ನೀಡಿ ಕೇಸ್ ದಾಖಲಿಸಿದ್ದಾರೆ..