Advertisement

ಗರ್ಭಿಣಿ ನಾಯಿಗೆ ಢಿಕ್ಕಿಹೊಡೆದು ಸಾಯಿಸಿದ ಬೈಕ್‌ ಸವಾರನ ವಿರುದ್ಧ case

03:36 PM Dec 27, 2018 | Team Udayavani |

ನೋಯ್ಡಾ : ಅತ್ಯಂತ ವೇಗ ಮತ್ತು ನಿರ್ಲಕ್ಷ್ಯದಿಂದ ಬೈಕ್‌ ನಡೆಸಿ ತುಂಬು ಗರ್ಭಿಣಿ ನಾಯಿಗೆ ಢಿಕ್ಕಿ ಹೊಡೆದು ಅದರ ದಾರುಣ ಸಾವಿಗೆ ಕಾರಣನಾದ ಬೈಕ್‌ ಚಾಲಕನ ವಿರುದ್ಧ ಗ್ರೇಟರ್‌ ನೋಯ್ಡಾ ಪೊಲೀಸರು ನಿರ್ಲಕ್ಷ್ಯದ ವಾಹನ ಚಾಲನೆಯ ಕೇಸು ದಾಖಲಿಸಿದ್ದಾರೆ.

Advertisement

ಬಾದಲ್‌ಪುರ ಪೊಲೀಸ್‌ ಠಾಣೆ ವ್ಯಾಪ್ತಿ ಧೂಮ್‌ ಮಾಣಿಕ್‌ಪುರ ಗ್ರಾಮದಲ್ಲಿ ಈ ಅವಘಡ ನಡೆದಿದೆ. 

ಇನ್ನೊಂದು ಗ್ರಾಮದ ನಿವಾಸಿಯಾಗಿರುವ 22ರ ಹರೆಯದ ಬಿನ್ನು ಎಂಬಾತ ವೇಗ ಮತ್ತು ನಿರ್ಲಕ್ಷ್ಯದಿಂದ ಬೈಕ್‌ ಚಲಾಯಿಸಿ ನನ್ನ ಅಚ್ಚುಮೆಚ್ಚಿನ ಸಾಕು ನಾಯಿ, ತುಂಬು ಗರ್ಭಿಣಿ, ಪಿಂಕಿಗೆ ಢಿಕ್ಕಿ ಹೊಡೆದು ಆಕೆಯ ಸಾವಿಗೆ ಕಾರಣನಾಗಿದ್ದಾನೆ ಎಂದು ಮನ್ಸೂರ್‌ ಅಲಿ ಎಂಬವರು ದಾಖಲಿಸಿದ ದೂರಿನ ಪ್ರಕಾರ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next