Advertisement

ಮಾನ್ಸೂನ್‌ ವೇಳೆ ಬೈಕ್‌ ಜೋಪಾನ!

08:44 PM Jun 13, 2019 | Team Udayavani |

ಮಳೆಗಾಲದಲ್ಲಿ ನಿಮ್ಮ ದ್ವಿಚಕ್ರ ವಾಹನವನ್ನೂ ಜೋಪಾನ ಮಾಡುವುದು ಅಗತ್ಯ. ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ವಿಶೇಷವಾಗಿ ಕರಾವಳಿಯಲ್ಲಿ ಬೈಕ್‌ಗಳ ವಿವಿಧ ಭಾಗಗಳಿಗೆ ನೀರು ಪ್ರವೇಶಿಸುವುದರಿಂದ ಕೆಲವೊಂದು ತಾಂತ್ರಿಕ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಒಳ್ಳೆಯದು.

Advertisement

ಸರ್ವಿಸ್‌ ಅಗತ್ಯ
ವಾಹನ ಸಂಪೂರ್ಣ ಸರ್ವಿಸ್‌ ಮಾಡಿಸಿ. ಆಯಿಲ್‌ ಚೇಂಜ್‌, ಬ್ರೇಕ್‌ ಆಯಿಲ್‌, ಕೆಲವೊಂದು ಭಾಗಕ್ಕೆ ಗ್ರೀಸ್‌ ಹಾಕಿಸಿ. ಜತೆಗೆ ಹ್ಯಾಂಡಲ್‌ ಬೇರಿಂಗ್‌ ಜಾಗ ಸಾಕಷ್ಟು ಬಿಗಿಯಾಗಿದೆಯೇ ಎಂದು ಪರಿಶೀಲಿಸಿ. ಬೈಕ್‌ನ ಚೈನ್‌ ಶುಚಿಗೊಳಿಸಿ, ನಿಗದಿತ ಪ್ರಮಾಣದಷ್ಟು ಟೈಟ್‌ ಮಾಡಿ ಅದಕ್ಕೆ ಆಯಿಲ್‌/ಸ್ಪ್ರೆ ಬಿಡಿಸಿಕೊಳ್ಳಿ. ಬೇರಿಂಗ್‌ಗಳು ಸವೆದಿದ್ದರೆ ಬದ ಲಾಯಿ ಸಿಕೊಳ್ಳಿ. ಬ್ರೇಕ್‌ ಕೇಬಲ್‌, ಡಿಸ್ಕ್, ಡ್ರಮ್‌ ಸವೆದಿದ್ದರೆ ಬದಲಾಯಿಸಿಕೊಳ್ಳಿ.

ಟಯರ್‌
ನೀರು ಹರಿಯುವ ವೇಳೆ ವಾಹನಗಳ ಬ್ರೇಕ್‌ ಹಿಡಿಯುವುದು ಕಡಿಮೆ. ಇದಕ್ಕೆ ಟಯರ್‌ ಸವೆದಿರುವುದೂ ಕಾರಣವಾಗಿರಬಹುದು. ಟಯರ್‌ನಲ್ಲಿ ಗ್ರಿಪ್‌ ಇಲ್ಲದಿದ್ದರೆ ಸ್ಕಿಡ್‌ ಆಗುವ ಸಂಭವ ಹೆಚ್ಚಿರುತ್ತದೆ. ಟಯರ್‌ ಸವೆದಿದ್ದರೆ ಕೂಡಲೇ ಬದಲಾಯಿಸಿಕೊಳ್ಳಿ. ಹಿಂಭಾಗದ-ಮುಂಭಾಗದ ಟಯರ್‌ನಲ್ಲಿ ಸಾಕಷ್ಟು ಬಟನ್‌ಗಳಿವೆಯೇ ಎಂದು ಪರಿಶೀಲಿಸುವುದು ಉತ್ತಮ.

ಉತ್ತಮ ರಿಫ್ಲೆಕ್ಟರ್‌
ಮಳೆಗಾಲದಲ್ಲಿ ನಿಮ್ಮ ವಾಹನದಲ್ಲಿ ರಿಫ್ಲೆಕ್ಟರ್‌ ಸರಿಯಾಗಿದೆಯೇ ಗಮನಿಸಿ. ಮಳೆ ಸಂದರ್ಭ ರಾತ್ರಿ ವೇಳೆ ಬೇರೆ ವಾಹನ ಚಾಲಕರ ಗಮನ ಸೆಳೆಯಲು ಇದು ಅಗತ್ಯವಾಗಿರುತ್ತದೆ. ಎರಡೂ ಬದಿಗೆ ಮತ್ತು ಹಿಂಭಾಗ ರಿಫ್ಲೆಕ್ಟರ್‌ ಸ್ಟಿಕ್ಕರ್‌ ಅಳವಡಿಸುವುದು ಉತ್ತಮ. ಇದರೊಂದಿಗೆ ಹೆಲ್ಮೆಟ್‌ನ ಫೈಬರ್‌ ಗಾಜು ಸರಿಯಾಗಿ ಕಾಣುವ ರೀತಿ ಇದೆಯೇ ಎಂದು ಪರಿಶೀಲಿಸಿ.

ಎರಡೂ ಬ್ರೇಕ್‌ ಅಪ್ಲೆ„ ಮಾಡಿ
ಮಳೆ ಬರುತ್ತಿರುವಾಗ ಚಾಲನೆ ಮಾಡುತ್ತೀರಾದರೆ, ನಿಲ್ಲಿಸಬೇಕೆಂದಾಗ ಎರಡೂ ಬ್ರೇಕ್‌ಗಳನ್ನು ಅಪ್ಲೆ„ ಮಾಡುವುದು ಉತ್ತಮ. ಇಲ್ಲದಿದ್ದರೆ ಸ್ಕಿಡ್‌ ಆಗಬಹುದು. ಒಂದೇ ಬ್ರೇಕ್‌ ಹಾಕುವ ಅಭ್ಯಾಸ ಹೊಂದಿದ್ದರೆ, ಅದನ್ನು ಬದಲಿಸಿ, ಎರಡೂ ಬ್ರೇಕ್‌ ಅಪ್ಲೆ„ ಮಾಡುವುದನ್ನು ರೂಢಿ ಮಾಡಿಕೊಳ್ಳಿ. ಆಗಾಗ್ಗೆ ಬ್ರೇಕ್‌ ಅಪ್ಲೆ„ ಮಾಡುವುದು, ಏಕಾಏಕಿ ಸ್ಪೀಡ್‌ ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿ.

Advertisement

ಅತಿ ವೇಗ ಬೇಡ
ಅತಿ ವೇಗದ ಚಾಲನೆಯಿಂದ ಅಪಾಯ ಹೆಚ್ಚು. ಬ್ರೇಕ್‌ ಹಾಕಿದ ವೇಳೆ ಬೀಳುವ ಸಾಧ್ಯತೆ ಇರುತ್ತದೆ. ನಿಗದಿತ ವೇಗದಲ್ಲೇ ಸಂಚರಿಸಿ. ದೊಡ್ಡ ವಾಹನಗಳನ್ನು ತೀರ ಹತ್ತಿರದಲ್ಲೇ ಓವರ್‌ಟೇಕ್‌ ಮಾಡುವುದು, ಎದುರಿನ ವಾಹನ ಗಮನಿಸದೇ ಓವರ್‌ಟೇಕ್‌ ಅಪಾಯಕಾರಿ.

ತಿರುಗಿಸುವ ವೇಳೆ ಎಚ್ಚರ
ರಸ್ತೆಗಳು ತಿರುವುಗಳನ್ನು ಹೊಂದಿದೆ. ಅದರ ಬದಿ ಕೆಲವೊಮ್ಮೆ ತುಂಡಾದ ರೀತಿ ಇದ್ದು, ನೀರು ಹರಿಯುವ ವೇಳೆ ತಿಳಿಯುವುದಿಲ್ಲ. ತಿರುವಿನ ವೇಳೆ ದ್ವಿಚಕ್ರವಾಹನ ತುಸು ಬಾಗಿದರೂ, ಟಯರ್‌ ರಸ್ತೆಯ ಅಂಚಿನ ಮೇಲೆ ಹಾದು ಅಪಾಯಕ್ಕೆಡೆ ಮಾಡುತ್ತದೆ. ಇದನ್ನು ಸಾಧ್ಯವಾದಷ್ಟೂ ತಪ್ಪಿಸಿ, ತಿರುವಿನಲ್ಲಿ ಎಚ್ಚರಿಕೆಯಿಂದ ಚಲಾಯಿಸಿ.

– ಈಶ

Advertisement

Udayavani is now on Telegram. Click here to join our channel and stay updated with the latest news.

Next