Advertisement
ಅವರ ತಂದೆಗೊಂದು ಅಭ್ಯಾಸವಿತ್ತು, ಯಾವುದೇ ಘಟನೆಗೂ ಅವರ ಮೊದಲ ಪ್ರತಿಕ್ರಿಯೆ “ದೇವೂ ಗತಿ'( ಕೊಂಕಣಿ) ಎನ್ನುವುದು. ಎಲ್ಲದಕ್ಕೂ ದೇವರೆ ಗತಿ ಎಂದೇ ಆರಂಭವಾಗುತ್ತಿದ್ದ ಮಾತಿನಿಂದಲೇ ಅವರು ಊರಿನಲ್ಲಿ ಜನಪ್ರಿಯರಾಗಿದ್ದರಂತೆ. ಹಾಗಾಗಿ ಅವರು ತೀರಿಕೊಂಡ ಮೇಲೆ ಅವರ ನೆನಪಿಗಾಗಿ ಪದೇ ಪದೇ ಅವರಾಡುತ್ತಿದ್ದ ಮಾತನ್ನೇ ಹೊಟೇಲಿನ ಹೆಸರಾಗಿ ಬದಲಾಯಿಸಿದ್ದಾರೆ. ಇದು “ದೇವರೇ ಗತಿ ಭವನ’ದ ಹೆಸರಿನ ಹಿಂದಿದ್ದ ಕತೆ.
Related Articles
Advertisement
ಏರುದಾರಿಯಾಗಿದ್ದರಿಂದ ಚಾಲನೆ ನಿಯಂತ್ರಣ ತಪ್ಪಲಿಲ್ಲ. ಬೈಕು ನಿಲ್ಲಿಸಿದೆ. ಇಲ್ಲೆಲ್ಲಿ ಪ್ಯಾಚ್ ಹಾಕಿಸೋದಪ್ಪಾ? ಯಾರಿದ್ದಾರೆ ಮೆಕ್ಯಾನಿಕ್? ಇಂದ್ರಾಳಿ ಆಟೋಕೇರ್‌ನ ಶೈಲೇಶಣ್ಣನನ್ನು ಕರಿಯೋದಾ? ಅವರದೀಗ ಊಟದ ಹೊತ್ತು. ಆಥವಾ ಪೆಟ್ರೋಲ್ ಬಂಕ್‌ವರೆಗೆ ದೂಡಿಕೊಂಡು ಹೋಗಿ ಗಾಳಿ ಹಾಕಿ ನೋಡೋದಾ. ಟಯರು ಚಪ್ಪಟೆಯಾಗಿದೆ. ದೂಡಿಕೊಂಡು ಹೋದರೆ ರಿಮ್ಮಿಗೆ ಪೆಟ್ಟು ಖಂಡಿತ. ಏನ್ಮಾಡೋದಿವಾಗ? ಅಂತ ಆಲೋಚನೆಯಲ್ಲಿರುವಾಗಲೇ ಸ್ಪಾನರು, ಮತ್ತೆರಡು ರಾಡ್‌ನಂತದ್ದೇನೋ ಹಿಡಿದುಕೊಂಡು ಗ್ಯಾರೇಜು ಸಮವಸ್ತ್ರ ಹಾಕ್ಕೊಂಡಿದ್ದ ಒಬ್ಟಾತ ಬಳಿ ಬಂದ. “ಪಂಕ್ಚರ್ರಾ? ಪ್ಯಾಚ್ ಹಾಕೆºàಕಾ?’ ಎಂದು ಕೇಳಿದ.
ಜಗತ್ತಿನ ಶಕ್ತಿಗೆ ನನ್ನ ಮೊರೆ ಕೇಳಿಸಿ ಇವನನ್ನು ಕಳಿಸಿದ್ದಾನೆ ಅನ್ನಿಸಿತು. ತುಂಬಾ ಖುಷಿ ಆಯ್ತು. ಬಸ್ಸಿನ ಟೈರಿನ ಕೆಲಸವೊಂದಕ್ಕೆ ಸಿಟಿ ಬಸ್ಟ್ಯಾಂಡಿಗೆ ಬಂದಿದ್ದನಂತೆ. ಇಲ್ಲೇ ಹತ್ತಿರದಲ್ಲಿ ಗ್ಯಾರೇಜಿದೆ, ಇದ್ಕೆ ಬೇಕಾದ ಸಾಮಾಗ್ರಿ ತರುತ್ತೇನೆ ಎಂದು ಓಡಿದ. ಬಂದ. ಬಿಚ್ಚಿದ. ವಾಲ್Ì ಬಳಿ ಒಡೆದೇ ಹೋದ ಟ್ಯೂಬನ್ನು ಬದಲಾಯಿಸಲೇಬೇಕೆಂದ. ಹೊಸತೊಂದನ್ನು ಹಾಕಿದ. ಐನೂರು ರುಪಾಯಿ ತೆಗೆದುಕೊಂಡ.
ಇದೆಲ್ಲಾ ಮಾಮೂಲು. ಇಂತದ್ದೆಲ್ಲ ಮುಂದೆಯೂ ಬರುತ್ತೆ. ನನಗಿದು ಮೂರನೇ ಬಾರಿಯ ಅನುಭವ. ಒಟ್ಟಿನಲ್ಲಿ ಬೇಗ ಆಯ್ತಲ್ವ. ಧನ್ಯವಾದ ಹೇಳಿ ಸರಿಯಾದ ಸಮಯಕ್ಕೇ ನಾನೂ ಸುಚಿತ್ ಕ್ಲಾಸಿಗೆ ಹೋದೆವು.
ಆದರೆ ಗ್ರಹಚಾರ ನೆಟ್ಟಗಿಲ್ಲ ಅಂದ್ರೆ ಬೇರೇನಾಗುತ್ತೆ? ಹೊಸ ಟ್ಯೂಬು. ಒಂದು ವರುಷವಾದರೂ ತೊಂದ್ರೆ ಇಲ್ಲ ಅಂದೊRಂಡು ನಿನ್ನೆಯ ಖರ್ಚಿಗೆ ಸಮಾಧಾನ ಮಾಡ್ಕೊಂಡ್ರೆ, ಮರುದಿನ ಬೆಳಿಗ್ಗೆ ಕಾಲೇಜಿಗೆ ಹೊರಡಲು ಬುಲೆಟ್ ಬಳಿ ಬರುತ್ತೇನೆ: ಹಿಂದಿನ ಟೈರಿನ ರಿಮ್ಮು ಮತ್ತೆ ನೆಲಕ್ಕಂಟಿತ್ತು. ಒಂದೇ ದಿನದಲ್ಲಿ ಎರಡನೆಯ ಬಾರಿ ಮತ್ತೆ ಪಂಕ್ಚರು.ನನಗೆ ನನ್ನ ಮೇಲೇ ಸಿಟ್ಟು. ಪದೇ ಪದೇ ನನಗೆ ಹೀಗ್ಯಾಕೆ ಆಗುತ್ತಿದೆ… ಈವರೆಗೆ ಬುಲೆಟ್ಟಿಗೆ, ಅದ್ರ ಸರ್ವಿàಸುಗಳಿಗೆ, ರಿಪೇರಿಗಳಿಗೆ, ಬಿದ್ದಾಗಿನ ನನ್ನ ಚಿಕಿತ್ಸೆಗಳಿಗೆ ಖರ್ಚು ಮಾಡಿದ್ದೆಲ್ಲವನ್ನೂ ತೆಗೆದಿಟ್ಟಿದ್ದಿದ್ದರೆ ಹಾರ್ಲೆà ಡೇವಿಡ್ಸನ್‌ಅನ್ನೇ ತಗೋಬಹುದಿತ್ತು ಎಂದು ಗೆಳೆಯ ಪದ್ಮನಾಭ ತಮಾಷೆ ಮಾಡುತ್ತಿರುತ್ತಾನೆ. ಆತ ಹಾಕಿದ್ದ ಚಾಲೆಂಜೊಂದನ್ನು ಮುರಿಯುವುದಕ್ಕೆಂದೇ ನಾನು ಬುಲೆಟ್ ತಗೊಂಡಿದ್ದು. ಈಗ ನೋಡಿದ್ರೆ, ಮಾರಿ ಬಿಡು ಮಾರಾಯ. ಬೇರೆಯದನ್ನೇ ತಗೋ ಎನ್ನುತ್ತಾನೆ. ನಿಜಕ್ಕೂ ನಂಗೆ ಸುಖ ಇಲ್ಲ. ಕಾಳಿಂಗನನ್ನು ಮಾರಿ ಬಿಡೋದಾ? ಸದ್ಯಕ್ಕೀಗ ಕಾಲೇಜಿಗೆ ಹೊರಡಲೇಬೇಕು. ಮುಕ್ಕಾಲು ಗಂಟೆಯ ದಾರಿ. ಬಸ್ಸಿಗೆ ಹೋದರೆ ಮತ್ತಷ್ಟು ತಡವಾಗುತ್ತೆ. ಪ್ಯಾಚ್ ಹಾಕಿಸಿಯೇ ಹೋಗೋದು. ಹಿಂದೊಮ್ಮೆ ಪಳ್ಳಿಯ ಕಾಡಿನಲ್ಲೊಮ್ಮೆ ಹೀಗಾಗಿದ್ದಾಗ ಬಂದು ಸರಿ ಮಾಡಿಕೊಟ್ಟಿದ್ದು ನಮ್ಮೂರ ಮೆಕ್ಯಾನಿಕ್ಕುಗಳಾದ ರಾಮ ಲಕ್ಷ್ಮಣರು. ಈಗಲೂ ಅವರನ್ನೇ ಕರೆದೆ. ಫೋನ್ ಮಾಡಿದ ಹತ್ತೇ ನಿಮಿಷದಲ್ಲಿ ರಾಮ ಲಕ್ಷ್ಮಣರಿಬ್ಬರೂ ಮನೆ ಮುಂದೆ ಹಾಜರ್. ಅರುವತ್ತು ವರುಷ ವಯಸ್ಸಿನ ಅವರಿಬ್ಬರೂ ಅವಳಿಗಳು. ನನಗೆ ಇವತ್ತಿಗೂ ಅವರಿಬ್ಬರಲ್ಲಿ ರಾಮ ಯಾರು, ಲಕ್ಷ್ಮಣ ಯಾರೂಂತ ಗುರುತಿಸಲು ಸಾಧ್ಯವಾಗಿಲ್ಲ. ರಾಮಣ್ಣ ಅಂದ್ರೆ ಸಾಕು ಇಬ್ಬರೂ “ಓ…’ ಅನ್ನುತ್ತಾರೆ. ನಮಗೂ ಕನೂಷನ್ನಿಲ್ಲ. ಅವರಲ್ಲೂ ಬೇರೆ ಬೇರೆ ಎಂಬ ಭೇದ ಭಾವವಿಲ್ಲ. ಮತ್ತೆ ಅವರು ಬರಿಯ ಮೆಕ್ಯಾನಿಕ್ಕುಗಳಷ್ಟೇ ಅಲ್ಲ, ಆಟೋ ರಿûಾವನ್ನೂ ಓಡಿಸುತ್ತಾರೆ. ನಿಟ್ಟೆ ಊರಿನ ಮೊತ್ತ ಮೊದಲ ರಿûಾದ ಮಾಲೀಕರವರು. ಒಂದು ಆಮ್ಲೆಟ್ ಅಂಗಡಿಯೂ ಅವರಿಗಿದೆ. ಸಂಜೆ ಮೇಲೆ ಸಿಂಗಲ್ಲಾ, ಡಬ್ಬಲ್ಲಾ ಎಂದು ಕೇಳಿ ಕೇಳಿ ಮೊಟ್ಟೆಗಳನ್ನೊಡೆದು ಕಾವಲಿಗೆ ಸುರಿಯೋದೇ ಅವ್ರ ಕೆಲಸ. ನನ್ನ ಪಾಲಿಗೆ ಅವ್ರ ಪಾತ್ರ ಅಷ್ಟಕ್ಕೇ ಮುಗಿಯುವುದಿಲ್ಲ. ತುಳುನಾಡ ವೀರ ಪುರುಷರಾದ ಕೋಟಿ ಚೆನ್ನಯ್ಯರಂತೆಯೋ, ವೈಕುಂಠದ ದ್ವಾರಪಾಲಕರಾದ ಜಯ ವಿಜಯರಂತೆಯೋ ನಮ್ಮವರ ಕಥಾಲೋಕದ ಕಾವಲು ಕಾಯುವ ವಿಶೇಷ ವ್ಯಕ್ತಿಗಳವರು. ಗೇಟಿನ ಒಳಗೆ ಅವರ ಪ್ರವೇಶ ಆದದ್ದೇ ತಡ. ನನ್ನ ಕೋಪ, ಬೇಸರಗಳೆಲ್ಲಾ ಮಾಯವಾಯ್ತು. ಅಲ್ಲಿ ಹೊಸ ಲೋಕವೇ ಸೃಷ್ಟಿಯಾಯ್ತು. ಬೇರೆ ಮೆಕ್ಯಾನಿಕ್ಕುಗಳಂತೆ ಅವರ ಶರ್ಟು ಪ್ಯಾಂಟುಗಳು ಮಾಸಿಲ್ಲ. ಅವರು ತೊಡೋದು ಮುಂಡು ಮತ್ತು ಚಂದದ ಶರ್ಟು. ಆಟೋದಿಂದ ಇಳಿದವರು ಪರಸ್ಪರ ಬೈದುಕೊಂಡೇ ನನ್ನ ಬುಲೆಟ್ಟು ಮುಟ್ಟಿದರು. ಟೈರು ಬಿಚ್ಚಿದರು. ಆ ಹೊತ್ತಿಗೆ ವಾಕಿಂಗಿಗೆ ಹೋಗಿದ್ದ ನನ್ನ ತಂದೆಯೂ ಬಂದು ಬಿಟ್ಟರು. ಎದುರು ಮನೆಯ ನಾಗೂನು ಬಂದ. ಈ ನಾಲ್ವರೂ ಒಂದೇ ವಯಸ್ಸಿನವರಂತೆ. ಒಟ್ಟೊಟ್ಟಿಗೆ ಶಾಲೆಗೆ ಹೋದವರಂತೆ. ದುಗ್ಗ ಶೆಟ್ರ ತೋಟಕ್ಕೆ ನುಗ್ಗಿ ಗೇರುಬೀಜ ಕದ್ದು ಸಂಜೆ ಹೊತ್ತಿಗೆ ಬಿಲೀಸ್ ಆಡಿ ಎಲ್ಲವನ್ನೂ ಕಳೆದುಕೊಂಡವರು. ಟೈರಿನೊಳಗಿಂದ ಟ್ಯೂಬು ಹೊರಗೆ ಬರುತ್ತಿದ್ದಂತೆಯೇ ಅವರ ನೆನಪುಗಳ ಬುತ್ತಿಯೂ ತೆರೆದುಕೊಂಡಿತು. ಬೆಳ್ಳಂಬೆಳಿಗ್ಗೆಯೇ ಚಂದದ ಕಥಾಲೋಕ ಮನೆಯಂಗಳದಲ್ಲಿ ಅರಳಿಕೊಂಡಿತು. (ಮುಂದುವರೆಯುತ್ತದೆ) – ಮಂಜುನಾಥ್ ಕಾಮತ್