Advertisement

ಬೈಕ್ ಢಿಕ್ಕಿ: ಮುದ್ದೇಬಿಹಾಳದ ಪುರವಂತ ಅಮರಣ್ಣವರ್ ಸಾವು

09:45 PM Aug 11, 2022 | Vishnudas Patil |

ಮುದ್ದೇಬಿಹಾಳ: ಪಟ್ಟಣದ ಪುರವಂತ, ಶಿರೋಳ ಗ್ರಾಮವ್ಯಾಪ್ತಿಯ ಶ್ರೀ ವೀರಭದ್ರೇಶ್ವರ ದೇವರ ಆರಾಧಕ ವಿರುಪಾಕ್ಷಪ್ಪ (ಮುದಕಪ್ಪ) ಅಮರಣ್ಣವರ್ (65) ತಂಗಡಗಿ ರಾಜ್ಯ ಹೆದ್ದಾರಿಯಲ್ಲಿ ಬೈಕ್ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಸಾವನ್ನಪ್ಪಿದರು.

Advertisement

ಎಂದಿನಂತೆ ತಂಗಡಗಿ ರಸ್ತೆಯ ಮುದ್ನಾಳ ಕ್ರಾಸ್ ಹತ್ತಿರ ಇರುವ ತಮ್ಮ ಹೊಲಕ್ಕೆ ಹೋಗುತ್ತಿದ್ದಾಗ ಕೋಳೂರ ಗ್ರಾಮದ ಯುವನೊಬ್ಬನ ಬೈಕ್ ಢಿಕ್ಕಿ ಹೊಡೆದು ನೆಲಕ್ಕೆ ಬಿದ್ದಿದ್ದರು. ಕೆಲ ಹೊತ್ತು ಯಾರೂ ನೋಡಿರಲಿಲ್ಲ. ನಂತರ ಜನ ಸೇರತೊಡಗಿದಾಗ ಪಕ್ಕದಲ್ಲೇ ಇದ್ದ ಶಿವಾಚಾರ್ಯ ಕಾಲೇಜಿನ ಉಪನ್ಯಾಸಕ ಹಿರೇಮಠ ಎನ್ನುವವರು ಗುರುತು ಹಿಡಿದು ಅಂಬ್ಯುಲೆನ್ಸ್ ತರಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಆಸ್ಪತ್ರೆಗೆ ಕಳಿಸಲಾಗಿದೆ. ಅಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದರು ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿ ಅಪಾರ ಬಂಧು ಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ಬೆಳಿಗ್ಗೆ 11 ಕ್ಕೆ ಇಲ್ಕಿನ ಆಲಮಟ್ಟಿ ರಸ್ತೆಯಲ್ಲಿರುವ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ನೆರವೇರಲಿದೆ.

ದ್ಯಾಮವ್ವ ಜಾತ್ರೆ, ವೀರಭದ್ರೇಶ್ವರ ಜಾತ್ರೆ ಸೇರಿದಂತೆ ಹಬ್ಬ ಹರಿದಿನಗಳ ಸುಭ ಕಾರ್ಯದಲ್ಲಿ ಸದಾ ಮುಂದಿದ್ದು ಓಡಾಡುತ್ತಿದ್ದ ಸ್ನೇಹಜೀವಿಯ ದುರಂತ ಸಾವಿಗೆ ವೀರಶೈವ ಲಿಂಗಾಯತ ಸಮಾಜದ ಸದಸ್ಯರು ಕಂಬನಿ ಮಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next