ಉಡುಪಿ: ಬೈಕ್ ಢಿಕ್ಕಿ ಹೊಡೆದು ಪಾದಚಾರಿ ಗಾಯಗೊಂಡ ಘಟನೆ ನಡೆದಿದೆ.
Advertisement
ಬೇಬಿ ಅವರು ಬಾಳಿಗಾ ಫಿಶ್ ನೆಟ್ ಬಳಿ ಬಸ್‌ನಿಂದ ಇಳಿದು ರಸ್ತೆ ದಾಟಿ ಮನೆಗೆ ಹೋಗಲು ರಸ್ತೆ ಬದಿ ನಿಂತಿದ್ದಾಗ ಅತೀ ವೇಗದಿಂದ ಬಂದ ಬೈಕ್ ಸವಾರ ಢಿಕ್ಕಿ ಹೊಡೆದಿದ್ದಾನೆ. ಗಾಯಾಳು ರಸ್ತೆಗೆ ಬಿದ್ದು ಬಲ ಕೈ ಮತ್ತು ಬಲ ಕಾಲಿಗೆ ಮೂಳೆಮುರಿತದ ಜಖಂ ಹಾಗೂ ತಲೆಯ ಹಿಂಬದಿಗೆ ರಕ್ತಗಾಯವಾಗಿದೆ. ಬೈಕ್ ಸವಾರ ನಿಲ್ಲಿಸದೆ ಪರಾರಿಯಾಗಿದ್ದಾನೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.