ಕುಷ್ಟಗಿ: ರಸ್ತೆ ಬದಿಯ ಮರಕ್ಕೆ ಬೈಕ್ ಢಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಅಡವಿಬಾವಿ- ಚಿಕ್ಕ ಕೊಡಗಲಿ ತಾಂಡದಲ್ಲಿ ನಡೆದಿದೆ.
ಹೂಲಗೇರಾ ಗ್ರಾಮದ ದುರಗಪ್ಪ ಹರಿಜನ (45) ಮೃತ ವ್ಯಕ್ತಿ.
ಬಲಗುಂದಿ ಜಾತ್ರೆಯಲ್ಲಿ ಭಾಗವಹಿಸಿ ಚಿಕ್ಕಕೊಡಗಲಿ, ಅಡವಿಬಾವಿ ಮೂಲಕ ವಣಗೇರಿಗೆ ಹೋಗುತ್ತಿದ್ದಾಗ ಚಿಕ್ಕ ಕೊಡಗಲಿ- ಅಡವಿಬಾವಿ ಗ್ರಾಮದ ಮದ್ಯೆ ರಸ್ತೆ ಪಕ್ಕದ ಮರಕ್ಕೆ ಢಿಕ್ಕಿ ಹೊಡೆದು ಸ್ಥಳದಲ್ಲಿ ಮೃತಪಟ್ಟಿದ್ದಾನೆ.
ದುರಗಪ್ಪ ಹರಿಜನ ಪತ್ನಿ ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾನೆ.
ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.