ಕೊಲ್ಲೂರು: ವಂಡ್ಸೆಯಿಂದ ಬಗ್ವಾಡಿ ಮಾರ್ಗವಾಗಿ ಮನೆಗೆ ತೆರಳುತ್ತಿದ್ದ ಪಾದಚಾರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ವಂಡ್ಸೆಯಿಂದ ಬಗ್ವಾಡಿಗೆ ತೆರಳುತ್ತಿದ್ದ ಮಾಧವ ಪೂಜಾರಿ ಎಂಬವರಿಗೆ ವಂಡ್ಸೆ-ಬಗ್ವಾಡಿ ರಸ್ತೆಯ ಆತ್ರಾಡಿ ಶಾಲೆಯ ಬಳಿ ಅತಿ ವೇಗದಿಂದ ಬಂದ ಬೈಕ್ ಢಿಕ್ಕಿ ಹೊಡೆದಿದೆ. ಅವರನ್ನು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.