Advertisement

ಬಿಕರ್ನಕಟ್ಟೆ : ಬಾಲಯೇಸು ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ

10:26 AM Jan 15, 2018 | Team Udayavani |

ಮಂಗಳೂರು: ಬಿಕರ್ನಕಟ್ಟೆಯ ಬಾಲಯೇಸು ಪುಣ್ಯಕ್ಷೇತ್ರದಲ್ಲಿ “ಆಂತರಿಕ ವಿಮೋಚನೆ ಪಡೆಯೋಣ, ಫಲಭರಿತ ಜೀವನ ನಡೆಸೋಣ’ ಎಂಬ ಸಂದೇಶದೊಂದಿಗೆ ಎರಡು ದಿನಗಳ ವಾರ್ಷಿಕ ಮಹೋತ್ಸವ ರವಿವಾರ ಆರಂಭಗೊಂಡಿದ್ದು, ಸಂಜೆ 6 ಗಂಟೆಗೆ ನಡೆದ ದಿವ್ಯ ಬಲಿ ಪೂಜೆಯಲ್ಲಿ ಲಕ್ನೋ ಧರ್ಮಪ್ರಾಂತದ ಬಿಷಪ್‌ ರೈ| ರೆ| ಡಾ| ಜೆರಾಲ್ಡ್‌ ಜೆ. ಮಥಾಯಸ್‌ ಅವರು ಪ್ರಧಾನ ಗುರುಗಳಾಗಿ ಭಾಗವಹಿಸಿದ್ದರು. ಮಂಗಳೂರು ಆಸುಪಾಸಿನ ಹಲವಾರು ಮಂದಿ ಧರ್ಮಗುರುಗಳು ಸಹಭಾಗಿಗಳಾದರು.

Advertisement

ಬಿಷಪ್‌ ರೈ| ರೆ| ಡಾ| ಜೆರಾಲ್ಡ್‌ ಜೆ. ಮಥಾಯಸ್‌ ಅವರು ತಮ್ಮ ಸಂದೇಶದಲ್ಲಿ ಬಾಲ ಯೇಸುವಿನ ಭಕ್ತಿ ಆಚರಣೆಯ ಉಗಮವನ್ನು ವಿವರಿಸಿ ಬಾಲಯೇಸುವಿಗೆ ವಿಶೇಷ ಭಕ್ತಿಯನ್ನು ಅರ್ಪಿಸಿದ ಕೆಲವರಿಗೆ ಸಂತ ಪದವಿ ಕೂಡ ಪ್ರಾಪ್ತಿಯಾಗಿದೆ ಎಂದರು.

ಕಿನ್ನಿಗೋಳಿಯ ಸೈಂಟ್‌ ಮೇರೀಸ್‌ ಶಾಲೆಯ ಪ್ರಾಂಶುಪಾಲ ಫಾ| ಸುನಿಲ್‌ ಪಿಂಟೊ ಪ್ರವಚನ ನೀಡಿದರು. ಬಾಲಯೇಸು ಪುಣ್ಯಕ್ಷೇತ್ರದ ನಿರ್ದೇಶಕ ಫಾ| ವಿಲ್ಫೆಡ್‌, ಫಾ| ಪ್ರಕಾಶ್‌ ಡಿ’ಕುನ್ಹಾ, ಫಾ| ಪಿಯುಸ್‌ ಜೇಮ್ಸ್‌ ಡಿ’ಸೋಜಾ ಅವರು ಉಪಸ್ಥಿತರಿದ್ದರು.

ಸೋಮವಾರ ಬೆಳಗ್ಗೆ 10.30ಕ್ಕೆ ನಡೆಯುವ ಹಬ್ಬದ ಸಂಭ್ರಮದ ಬಲಿಪೂಜೆಯ ನೇತೃತ್ವವನ್ನು ಮಂಗಳೂರು ಧರ್ಮಪ್ರಾಂತದ ಬಿಷಪ್‌ ರೈ| ರೆ| ಡಾ| ಅಲೋಶಿಯಸ್‌ ಪಾವ್‌ ಡಿ’ಸೋಜಾ ವಹಿಸ‌ಲಿದ್ದಾರೆ. ಸೋಮವಾರ ಬೆಳಗ್ಗೆ 6.30, 7.30, 9ಕ್ಕೆ  ಮತ್ತು ಮಧ್ಯಾಹ್ನ 12 ಗಂಟೆಗೆ (ಕನ್ನಡದಲ್ಲಿ) ಬಲಿ ಪೂಜೆ, ಸಂಜೆ 5ಕ್ಕೆ ಆಂತರಿಕ ಅಸ್ವಸ್ಥತಾ ಪ್ರಾರ್ಥನೆ, 6ಕ್ಕೆೆ ಬಲಿ ಪೂಜೆ ಮತ್ತು 7.15ಕ್ಕೆ ಪರಮ ಪ್ರಸಾದ ಮೆರವಣಿಗೆ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next