Advertisement

ಬಸ್- ಟ್ರಕ್ ಮುಖಾಮುಖಿ ಡಿಕ್ಕಿ: ಹತ್ತು ಜನರ ದುರ್ಮರಣ

09:31 AM Nov 19, 2019 | Team Udayavani |

ಬಿಕನೇರ್: ಬಸ್ ಮತ್ತು ಟ್ರಕ್ ನಡುವೆ ನಡೆದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಕನಿಷ್ಠ ಹತ್ತು ಜನರು ಸಾವನ್ನಪ್ಪಿ, 22ಕ್ಕೂ ಜನರು ಗಾಯಗೊಂಡ ಘಟನೆ ಸೋಮವಾರ ರಾಜಸ್ಥಾನದ ಬಿಕನೇರ್ ನಲ್ಲಿ ನಡೆದಿದೆ.

Advertisement

ರಾಷ್ಟ್ರೀಯ ಹೆದ್ದಾರಿ 11, ಬಿಕನೇರ್ ಜಿಲ್ಲೆಯ ದುಂಗ್ರಾಗಢ್ ನಲ್ಲಿ ಈ ಅಪಘಾತ ನಡೆದಿದೆ.

ಲೋಕ್ ಪರಿವಾಹನ ಬಸ್ ಸೇವಾ ಸಂಸ್ಥೆಯ ಬಸ್ ಇದಾಗಿದ್ದು, ಅಪಘಾತದಲ್ಲಿ ಗಾಯಗೊಂಡವರ ರಕ್ಷಣಾ ಕಾರ್ಯ ಇನ್ನೂ ಮುಂದುವರಿದಿದೆ.

ಇದುವರೆಗೆ ಒಂಬತ್ತು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸ್ಥಳೀಯ ಪಿಬಿಎಂ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next