Advertisement

ಬೈಕಂಪಾಡಿ: ದೋಣಿ ಮಗುಚಿ ಓರ್ವ ನಾಪತ್ತೆ, 7 ಮಂದಿಯ ರಕ್ಷಣೆ

08:05 AM Jul 31, 2017 | Harsha Rao |

ಸುರತ್ಕಲ್‌: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಶ್ರೀಲಕ್ಷ್ಮೀ ದೋಣಿ ಬಲವಾದ ಗಾಳಿ ಬೀಸಿದ ಸಂದರ್ಭ ನಿಯಂತ್ರಣ ಕಳೆದುಕೊಂಡು ಮಗುಚಿಬಿದ್ದ ಪರಿಣಾಮ ಓರ್ವ ನಾಪತ್ತೆಯಾಗಿದ್ದು , ಏಳು ಮಂದಿಯನ್ನು ರಕ್ಷಿಸಲಾಗಿದೆ.
ರವಿವಾರ ಮಧ್ಯಾಹ್ನ ಬೈಕಂಪಾಡಿ ಸಮೀಪ ಸಮುದ್ರ ಪ್ರದೇಶದಲ್ಲಿ  ಈ ಘಟನೆ ಸಂಭವಿಸಿದೆ. ಪ್ರೇಮ್‌ನಾಥ್‌ ಸಾಲ್ಯಾನ್‌ (50) ನಾಪತ್ತೆಯಾಗಿದ್ದು, ಇತರ ಮೀನುಗಾರರಾದ ವಿಜಿತ್‌, ಅಶೋಕ್‌ ಮೆಂಡನ್‌, ಜಗದೀಶ್‌, ಮನಿತ್‌, ಸವಿನ್‌, ನಾಗೇಶ್‌,ಅವಿನಾಶ್‌ ಅವರ ಪೈಕಿ ಮೂವರು ಈಜಿ ದಡ ಸೇರಿದರೆ ಉಳಿದವರನ್ನು  ಸಮೀಪದಲ್ಲೇ ಮೀನುಗಾರಿಕೆ ನಡೆಸುತ್ತಿದ್ದ ಇತರ ಮೀನುಗಾರರು ರಕ್ಷಿಸಿದರು. ಮಗುಚಿ ಬಿದ್ದ ದೋಣಿಯನ್ನು ದಡಕ್ಕೆ ಎಳೆದು ತರುವಲ್ಲಿ ದಡದಲ್ಲಿದ್ದ ಮೀನುಗಾರರು ನೆರವು ನೀಡಿದರು.ಕಾಣೆಯಾದ ಮೀನುಗಾರನ ಪತ್ತೆಗಾಗಿ ಸಹ ದೋಣಿಯಲ್ಲಿದ್ದ ಮೀನುಗಾರರು ಹುಡುಕಾಟ ನಡೆಸಿದರೂ ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಘಟನೆ ಕುರಿತು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಶಾಸಕ ಮೊದಿನ್‌ ಬಾವಾ, ತಹಶೀಲ್ದಾರ್‌ ಮಹದೇವಯ್ಯ, ಕಂದಾಯ ಅಧಿಕಾರಿ ನವೀನ್‌ ಭೇಟಿ ನೀಡಿ ಮಾಹಿತಿಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next