Advertisement
ಪಟ್ನಾದ ಪುಲ್ವಾರಿ ಶರೀಫ್ ನಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗೆ ಬಹುರಾಜ್ಯ ಹವಾಲಾ ಜಾಲದ ಮೂಲಕ ಹಣಕಾಸು ನೆರವು ಒದಗಿಸಿದ್ದಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ನಡೆಸಿ ದಾಗ ಆರೋಪಿಗಳು ತಮ್ಮ ಖಾತೆಯನ್ನು ಬಳಸದೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಹಲವಾರು ಶಾಖೆಗಳಿಂದ ಹಣ ವರ್ಗಾಯಿಸಿರುವುದು ಗೊತ್ತಾಗಿದೆ.
Related Articles
ಆರೋಪಿಗಳು ತಮ್ಮ ಖಾತೆಯಿಂದಲೇ ಹಣ ವರ್ಗಾವಣೆ ಮಾಡು ತ್ತಿದ್ದರು ಎಂದು ಭಾವಿಸ ಲಾಗಿತ್ತು. ಆದರೆ ಅದು ಸುಳ್ಳಾಗಿದೆ. ತಮ್ಮ ಗುರುತು, ಮಾಹಿತಿ ಸಿಗಬಾರದು ಎಂದು ಆರೋಪಿಗಳು ತಮ್ಮ ಖಾತೆಯನ್ನು ಬಳಸದೆ ಬ್ಯಾಂಕ್ ಶಾಖೆಗಳ ಮೂಲಕ ನೇರವಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
Advertisement
ಒಂದಿಬ್ಬರು ಆರೋಪಿಗಳು ಮಾತ್ರವೇ ಹಣ ವರ್ಗಾವಣೆ ಮಾಡುತ್ತಿದ್ದರೂ ಬ್ಯಾಂಕ್ ಸ್ಲಿಪ್‌ನಲ್ಲಿ ಬೇರೆ ಬೇರೆ ಹೆಸರು ಹಾಗೂ ಮೊಬೈಲ್ ಸಂಖ್ಯೆ ದಾಖಲಿಸುತ್ತಿದ್ದರು. ಇದರಿಂದಾಗಿ ಆರೋಪಿಗಳ ಜಾಡು ಹಿಡಿಯುವುದು ಆರಂಭದಲ್ಲಿ ಕ್ಲಿಷ್ಟಕರವಾಗಿತ್ತು. ಅದಕ್ಕಾಗಿಯೇ ಎನ್‌ಐಎ ಅಧಿಕಾರಿಗಳು ಇಲ್ಲಿಗೇ ಬಂದು ಮೊಕ್ಕಾಂ ಹೂಡಿ ಇದರ ಹೂರಣವನ್ನು ಹೊರಗೆಡವಿದ್ದಾರೆ
ಪ್ರಸ್ತುತ ಪ್ರಕರಣದಲ್ಲಿ ಬಂಧಿತರಾ ಗಿರುವ ಬಂಟ್ವಾಳ ನಂದಾವರ ಮೂಲದ ಆರೋಪಿಗಳಾದ ಮಹಮ್ಮದ್ ಸಿನಾನ್ ಹಾಗೂ ನವಾಜ್ ಅವರು ಬ್ಯಾಂಕ್ ಶಾಖೆಯ ಮೂಲಕ ಹಣ ವರ್ಗಾವಣೆಯ ಕಾರ್ಯ ಮಾಡುತ್ತಿ ದ್ದರು ಎನ್ನಲಾಗಿದ್ದು, ಇಕ್ಬಾಲ್ ಸೇರಿದಂತೆ ಇತರರು ಈ ಕಾರ್ಯಗಳಿಗೆ ನೆರವಾಗಿದ್ದರು ಎಂದು ತನಿಖೆಯ ವೇಳೆ ಬಹಿರಂಗಗೊಂಡಿದೆ.
ಹಲವು ತಂತ್ರದ ಮೂಲಕ ಬಲೆಗೆಬಿಹಾರದಲ್ಲಿ ಬಂಧಿತ ಭಯೋ ತ್ಪಾದಕನ ಖಾತೆಗೆ ವರ್ಗಾವಣೆ ಯಾಗಿದ್ದ ಕೋಟ್ಯಂತರ ರೂಪಾಯಿ ಎಲ್ಲಿಂದ ಬರುತ್ತಿದೆ ಎಂದು ಜಾಡು ಹಿಡಿದಿದ್ದ ಎನ್‌ಐಎಗೆ ಬಂಟ್ವಾಳ ಭಾಗದಿಂದ ಹಣ ಬರುತ್ತಿರುವುದು ಖಚಿತವಾಗಿತ್ತು.
ಹೀಗಾಗಿ ಇಲ್ಲಿಗೆ ಬಂದ ಅಧಿಕಾರಿಗಳು ಆರೋಪಿಗಳ ಚಲನವಲನ ಗಮನಿಸಿ ಬಳಿಕ ಹಣ ವರ್ಗಾವಣೆ ದಂಧೆಯತ್ತ ಗಮನಹರಿಸಿತ್ತು. ಎನ್‌ಐಎ ಮೊದಲೇ ಹಾಕಿಕೊಂಡಿದ್ದ ಯೋಜನೆಯಂತೆ ತಂತ್ರಗಾರಿಕೆ ರೂಪಿಸಿ ಆರೋಪಿಗಳು ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬೀಳುವಂತೆ ಮಾಡಿತ್ತು. ಆರೋಪಿಗಳು ಸಮಾ ಜದ ಕಣ್ಣಿಗೆ ಮಣ್ಣೆರೆಚಿದರೂ ಎನ್‌ಐಎ ತಂತ್ರಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದೆ ಬಲೆಗೆ ಬಿದ್ದಿದ್ದಾರೆ. ಇದೇ ರೀತಿ ಇತರ ಭಾಗದಲ್ಲೂ ಹಣ ವರ್ಗಾಯಿಸಿರುವ ಆರೋಪಿಗಳ ಪತ್ತೆಗೂ ತಂತ್ರ ರೂಪಿಸಿ, ಅವರನ್ನು ವಶಕ್ಕೆ ಪಡೆದುಕೊಂಡಿದೆ. ಇದರಲ್ಲಿ ಇನ್ನಷುc ಮಂದಿ ಇರುವ ಕುರಿತಂತೆ ತನಿಖೆ ನಡೆಯುತ್ತಿದೆ. ನಗದು ವ್ಯವಹಾರವೇ ಹೆಚ್ಚು
ಬಂಟ್ವಾಳದಲ್ಲಿ ಬಂಧಿತರಾಗಿರುವ ಆರೋಪಿ ಗಳು ನಗದು ಮೂಲಕವೇ ವ್ಯವಹಾರ ನಡೆಸುತ್ತಿ ದ್ದರು. ಅಂದರೆ ಹವಾಲಾ ದಂಧೆ ಮೂಲಕ ಹಣ ಇವರ ಕೈ ತರಿಸಿಕೊಳ್ಳುತ್ತಿದ್ದರು. ಮುಖ್ಯವಾಗಿ ಗಲ್ಫ್ ಸಹಿತ ವಿದೇಶೀ ಮೂಲದಿಂದ ಹಣ ಬೇರೆಯವರ ಮೂಲಕ ಇವರ ಕೈಗೆ ತಲುಪುತಿತ್ತು. ಇವರು ಖಾತೆಗೆ ಹಣವನ್ನು ವರ್ಗಾಯಿಸಿಕೊಳ್ಳುತ್ತಿರಲಿಲ್ಲ. ಅದೇ ರೀತಿ ಹಣವನ್ನು ಇವರ ಖಾತೆಯಿಂದಲೂ ಬೇರೆ ಖಾತೆಗೆ ವರ್ಗಾಯಿಸುತ್ತಿರಲಿಲ್ಲ. ನಗದು ರೂಪದಲ್ಲಿ ಬರುತ್ತಿದ್ದ ಹಣವನ್ನು ಬ್ಯಾಂಕ್ ಮೂಲಕ ಬೇರೆ ಖಾತೆಗಳಿಗೆ ನೇರವಾಗಿ ಪಾವತಿಸಿ ತಮ್ಮ ಪಾತ್ರ ಬಹಿರಂಗವಾಗದಂತೆ ನೋಡಿಕೊಳ್ಳುತ್ತಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.