Advertisement

“ನನ್ನ ಚಹಾದಂಗಡಿಯನ್ನು ಮುಚ್ಚುತ್ತೇನೆ…ಕಣ್ಣೀರಿಟ್ಟ ʼಗ್ರ್ಯಾಜುವೇಟ್‌ ಚಾಯಿವಾಲಿʼ

06:02 PM Nov 15, 2022 | Team Udayavani |

ಬಿಹಾರ: ಯುವತಿಯೊಬ್ಬಳು ತಾನು ತೆರೆದ ಚಹಾದ ಸ್ಟಾಲನ್ನು ಅಧಿಕಾರಿಗಳು ಮುಚ್ಚಿಸಿದ ಕಾರಣ ಅತ್ತು ಜನರಲ್ಲಿ ಕ್ಷಮೆ ಕೇಳಿದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Advertisement

ಕಾಮರ್ಸ್ ಪದವೀಧರೆ ಆಗಿರುವ ಪ್ರಿಯಾಂಕಾ ಗುಪ್ತಾ ಪದವಿಯ ಬಳಿಕ ಕೆಲಸಕ್ಕೆ ಅಲೆದಾಡಿ, ಕೆಲಸ ಸಿಗದೆ ಕೊನೆಗೆ  ಟೀ ಸ್ಟಾಲ್‌ ತೆರೆಯಲು ಪೊಲೀಸ್‌ ಕಮೀಷನರ್‌ ಬಳಿ ಅನುಮತಿ ಪಡೆದು ಟೀ ಸ್ಟಾಲ್‌ ವೊಂದನ್ನು ತೆರಯುತ್ತಾರೆ. ಲೈಸೆನ್ಸ್  ಹಾಗೂ ಇತರ ದಾಖಲೆ ಎಲ್ಲವನ್ನು ಹೊಂದಿದ್ದ ಟೀ ಸ್ಟಾಲ್‌ ಗೆ ಪ್ರಿಯಾಂಕ “ಗ್ರಾಜುವೇಟ್‌ ಚಾಯಿವಾಲಿʼʼ ಎಂದು ಹೆಸರು ಇಡುತ್ತಾರೆ.

ಪ್ರಿಯಾಂಕ ಅವರ “ಗ್ರಾಜುವೇಟ್‌ ಚಾಯಿವಾಲಿʼʼ ಯುವ ಜನರನ್ನು ಸೆಳೆಯುತ್ತಾರೆ. ಉತ್ತಮವಾಗಿ ವ್ಯಾಪಾರ ಮಾಡಿಕೊಂಡು ಹೋಗುತ್ತಿದ್ದ ಟೀಸ್ಟಾಲ್‌ ನ್ನು ರಾತ್ರೋರಾತ್ರಿ ಅಧಿಕಾರಿಗಳು ತೆರೆವು ಮಾಡುತ್ತಾರೆ. ಇದಾದ ಬಳಿಕ ಪ್ರಿಯಾಂಕ ಅವರ ಟೀಸ್ಟಾಲ್‌ ಗೆ ನಾನಾ ತೊಂದರೆಗಳು ಶುರುವಾಗುತ್ತದೆ. ಇದರಿಂದ ಬೇಸತ್ತು ಹೋದ ಪ್ರಿಯಾಂಕ ಸ್ಥಳೀಯ ರಾಜಕೀಯ ಮುಖಂಡರ ಬಳಿ ಮನವಿ ಮಾಡಿ ಟೀಸ್ಟಾಲನ್ನು ಮತ್ತೆ ಅದೇ ಜಾಗದಲ್ಲಿ ಇಡುತ್ತಾರೆ.

ಆದರೆ ಇತ್ತೀಚೆಗೆ ಮತ್ತೊಮ್ಮೆ “ಗ್ರಾಜುವೇಟ್‌ ಚಾಯಿವಾಲಿʼʼ ಸ್ಟಾಲ್ ತೆರವಿಗೆ ಬಿಹಾರದ ಪಾಟ್ನಾ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ನೋಟಿಸ್‌ ನೀಡಿದ್ದು, ಸ್ಥಳವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎನ್ನುವ ಕಾರಣ ಕೊಟ್ಟಿದ್ದಾರೆ. ಇದರಿಂದ ಪ್ರಿಯಾಂಕ ಭಾವುಕರಾಗಿ ಅಧಿಕಾರಿಗಳ ವಿರುದ್ಧ, ವ್ಯವಸ್ಥೆಯ ವಿರುದ್ಧ ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

“ಇಲ್ಲಿ ಹೆಣ್ಣು ಎಂದರೆ ಅಡುಗೆ ಮನೆಯಲ್ಲಿ ಇರಲು ಲಾಯಕ್ಕು. ಹೆಣ್ಣಿಗೆ ಮುಂದುವರೆಯಲು ಅವಕಾಶವಿಲ್ಲ. ಬಿಹಾರದಲ್ಲಿ ತುಂಬಾ ಕಾರ್ಟ್‌ ಗಳಿವೆ ( ಅಂಗಡಿ). ಪಾಟ್ನಾದಲ್ಲಿ ಅಕ್ರಮ ಮದ್ಯ ಮಾರಾಟ ಸೇರಿದಂತೆ ಹಲವು ಅಕ್ರಮ ಕೆಲಸಗಳು ನಡೆಯುತ್ತವೆ. ಇಲ್ಲಿ ವ್ಯವಸ್ಥೆ ಜೀವಂತವಾಗಿಲ್ಲ. ಇಲ್ಲಿ ಹೆಣ್ಣೊಬ್ಬಳು ವ್ಯಾಪಾರ ಆರಂಭಿಸಿದರೆ ಅವಳಿಗೆ ಪದೇ ಪದೇ ಅಡ್ಡಗಾಲು ಹಾಕುತ್ತಾರೆ” ಎಂದಿದ್ದಾರೆ.

Advertisement

“ಹೆಣ್ಣೆಂದರೆ ಅಡುಗೆ ಮನೆ, ಮನೆ ಕ್ಲೀನ್‌, ನೆಲ ಒರೆಸು, ಮದುವೆಯಾಗಿ ಮನೆ ಬಿಡು. ಹೆಣ್ಣಿಗೆ ಸ್ವಂತವಾಗಿ ವ್ಯಾಪಾರ ಮಾಡಲು ಅಧಿಕಾರವೇ ಇಲ್ಲ” ಎಂದಿದ್ದಾರೆ.

“ಕಮಿಷನರ್‌ ಬಳಿ ಅನುಮತಿ ಪಡೆದ ಬಳಿಕವೂ ನನ್ನ ಕಾರ್ಟನ್ನು ಹೇಗೆ ತೆರವು ಮಾಡುತ್ತಾರೆ. ನಾನು ವ್ಯವಸ್ಥೆ ಮುಂದೆ ವಿಫಲಳಾದೆ. ನನ್ನ ಚಹಾದ ಶಾಖೆಯನ್ನು ಆರಂಭಿಸಲು ಅನುಮತಿ ಪಡೆದ ಎಲ್ಲರ ಹಣವನ್ನು ನಾನು ವಾಪಸ್‌ ಕೊಡುತ್ತೇನೆ. ನಾನು ನನ್ನ ಚಹಾದಂಗಡಿ ಮುಚ್ಚಿ ಮನೆಗೆ ಹೋಗುತ್ತೇನೆ” ಎಂದು ಅಳುತ್ತಲೇ ಪ್ರಿಯಾಂಕ ಮಾತಾನಾಡಿದ್ದಾರೆ.

“ನಗರ್‌ ನಿಗಮ್‌  ವ್ಯವಸ್ಥೆಗೆ ಧನ್ಯವಾದಗಳು. ನೀವು ನನ್ನ ಸ್ಥಿತಿಯನ್ನು ತೋರಿಸಿದ್ದೀರಿ. ನೀವು ಮಹಿಳೆಯಾಗಿದ್ದರೆ, ಮನೆಯಲ್ಲಿಯೇ ಇರಿ, ಹೊರಗೆ ಏನನ್ನೂ ಮಾಡುವ ಅಗತ್ಯವಿಲ್ಲ ಏಕೆಂದರೆ ಇದು ಬಿಹಾರ” ಎಂದು ಭಾವುಕರಾಗಿದ್ದಾರೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next