Advertisement

ಅನಾರೋಗ್ಯ ಪೀಡಿತ ಪ್ರಾಣಿ ಪರೀಕ್ಷೆಗೆಂದು ಕರೆಸಿ ಪಶುವೈದ್ಯರನ್ನೇ ಅಪಹರಿಸಿ ಮದುವೆ ಮಾಡಿಸಿದರು

04:35 PM Jun 15, 2022 | Team Udayavani |

ಹೊಸದಿಲ್ಲಿ: ಅನಾರೋಗ್ಯದಿಂದಿರುವ ಪ್ರಾಣಿಯೊಂದರ ಪರೀಕ್ಷೆ ನಡೆಸಲು ಕರೆಸಲಾಗಿದ್ದ ಪಶುವೈದ್ಯರೊಬ್ಬರನ್ನು ಮೂವರ ತಂಡವೊಂದು ಅಪಹರಿಸಿ ನಂತರ ಅವರಿಗೆ ಬಲವಂತದಿಂದ ಮದುವೆ ಮಾಡಿಸಿದ ಘಟನೆ ಬಿಹಾರದ ಬೇಗುಸರಾಯ್ ಎಂಬಲ್ಲಿ ನಡೆದಿದೆ.

Advertisement

ಮಧ್ಯಾಹ್ನ 12 ಗಂಟೆಗೆ “ಪಶುವೈದ್ಯರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಪ್ರಾಣಿಯೊಂದು ಅನಾರೋಗ್ಯದಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾನೆ ಈ ವೇಳೆ ಪಶು ವೈದ್ಯರು ಪ್ರಾಣಿಗೆ ಶುಶ್ರೂಷೆ ನೀಡುವ ಸಲುವಾಗಿ ಕರೆ ಮಾಡಿದ ಸ್ಥಳಕ್ಕೆ ಬಂದಿದ್ದಾರೆ ಈ ಸಂದರ್ಭ ಅಲ್ಲಿಗೆ ಬಂದ ಮೂವರ ತಂಡ ಪಶುವೈದ್ಯರನ್ನು ಅಪಹರಿಸಿ ಬಲವಂತವಾಗಿ ಯುವತಿಯೊಂದಿಗೆ ಮದುವೆ ಮಾಡಿಸಿದ್ದಾರೆ ಎನ್ನಲಾಗಿದೆ.

ಈ ವಿಚಾರ ಪಶುವೈದ್ಯರ ಮನೆಯಲ್ಲಿ ತಿಳಿಯುತ್ತಿದ್ದಂತೆ ಹುಡುಗನ ತಂದೆ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣದ ಕುರಿತು ತನಿಖೆ ನಡೆಸಿ ತಪ್ಪತಸ್ಥರಿಗೆ ಶಿಕ್ಷೆ ನೀಡುವ ಭರವಸೆಯನ್ನು ನೀಡಿದ್ದಾರೆ.

ಇದನ್ನೂ ಓದಿ : ಗಾಢಾಂಧಕಾರದಲ್ಲಿ ಮುಳುಗಿದ ಇಸ್ಲಾಮಾಬಾದ್… ಶ್ರೀಲಂಕಾದಂತೆ ಪಾಕ್ ಕೂಡಾ ದಿವಾಳಿ!

ವರನ ಅಪಹರಣ ಅಥವಾ ಪಕಡ್ವಾ ವಿವಾಹ್ ಪದ್ಧತಿ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶದಲ್ಲಿ ಸಾಮಾನ್ಯವಾಗಿದ್ದು ಅವಿವಾಹಿತ ಯುವಕರನ್ನು ಅಪಹರಿಸಿ ನಂತರ ಅವರನ್ನು ಬಂದೂಕು ತೋರಿಸಿ ಬೆದರಿಸಿ ವಿವಾಹವಾಗುವಂತೆ ಬಲವಂತಪಡಿಸಲಾಗುತ್ತದೆ.

Advertisement

ಇಂತಹ ಘಟನೆಗಳಲ್ಲಿ ಆರ್ಥಿಕವಾಗಿ ಸದೃಢರಾಗಿರುವ ಯುವಕರನ್ನು ವಧುಗಳ ಕುಟುಂಬ ಅಪಹರಿಸಿ ಬೆದರಿಸಿ ವಿವಾಹಕ್ಕೆ ಒಪ್ಪಿಸಲಾಗುತ್ತದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next