ಪಾಟ್ನಾ: ಹೆಂಡತಿ ಕೋಪಿಸಿಕೊಂಡು ತವರಿಗೆ ಹೋದರೆ ಮನ ಓಲೈಸಿಕೊಂಡು ವಾಪಸ್ ಕರೆದುಕೊಂಡು ಬಂದ ಹಲವು ಘಟನೆಗಳ ಬಗ್ಗೆ ಓದಿರುತ್ತೀರಿ. ಆದರೆ ಇಲ್ಲೊಬ್ಬ ವ್ಯಕ್ತಿ ಹೀಗೆ ಮಾಡುವ ಬದಲು ಇನ್ನೇನೊ ಮಾಡಿಕೊಂಡು ಸುದ್ದಿಯಾಗಿದ್ದಾನೆ.!
ಬಿಹಾರದ ಮಾಧೇಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಜನಿ ನಯಾನಗರ ಪ್ರದೇಶದಲ್ಲಿ ಕೃಷ್ಣ ಬಾಸುಕಿ ಎಂಬ ವ್ಯಕ್ತಿ ಹೆಂಡತಿ ತವರಿಗೆ ಹೋಗಿ ವಾಪಸ್ ಬರಲು ತಡ ಮಾಡಿದ್ದಕ್ಕೆ ತನ್ನ ಖಾಸಗಿ ಅಂಗವನ್ನೇ ಕತ್ತರಿಸಿಕೊಂಡಿದ್ದಾನೆ.!
ಕೃಷ್ಣ ಬಾಸುಕಿ ಅನಿತಾ ಎನ್ನುವವರನ್ನು ಮದುವೆಯಾಗಿದ್ದಾರೆ. ದಂಪತಿಗೆ ನಾಲ್ಕು ಮಕ್ಕಳಿವೆ. ಕುಟುಂಬದಿಂದ ದೂರವಿದ್ದ ಕೃಷ್ಣ ಪಂಜಾಬ್ ನ ಮಂಡಿಯಲ್ಲಿ ವಾಸವಾಗಿ ಕೆಲಸ ಮಾಡಿಕೊಂಡು ಇರುತ್ತಿದ್ದರು. ಎರಡು ತಿಂಗಳ ಹಿಂದಷ್ಟೇ ಮನೆಗೆ ಬಂದಿದ್ದರು. ಈ ವೇಳೆ ಹೆಂಡತಿ ಮಕ್ಕಳು ಮನೆಯಲ್ಲಿರಲಿಲ್ಲ.
ತವರಿಗೆ ಹೋದ ಹೆಂಡತಿಗಾಗಿ ಕಾದು ಸಿಟ್ಟಾದ ಕೃಷ್ಣ ಶುಕ್ರವಾರ (ಜ.20 ರಂದು) ರಾತ್ರಿ ಚೂಪಾದ ಚೂರಿಯಿಂದ ತನ್ನ ಖಾಸಗಿ ಅಂಗವನ್ನೇ ಕತ್ತರಸಿಕೊಂಡಿದ್ದಾನೆ. ಅಕ್ಕಪಕ್ಕದವರು ಕೃಷ್ಣ ಬಾಸುಕಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ. ಸದ್ಯ ಅಪಾಯದಿಂದ ಪಾರಾಗಾಗಿದ್ದಾರೆ. ಕೃಷ್ಣ ಬಾಸುಕಿ ಮಾನಸಿಕ ಅಸ್ವಸ್ಥನಾಗಿ ಬಳಲುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿರುವುದಾಗಿ ವರದಿಯಾಗಿದೆ.