Advertisement

ಎಂಟು ವರ್ಷಗಳಲ್ಲಿ ದೇಗುಲಕ್ಕೆ 400 ಮೆಟ್ಟಿಲು ನಿರ್ಮಿಸಿದ ಸಾಹಸಿ.!

08:25 PM Dec 04, 2022 | Team Udayavani |

ಪಾಟ್ನಾ: ದಶರಥ ಮಾಂಜಿ… ಇಪ್ಪತ್ತೆರಡು ವರ್ಷಗಳ ಕಾಲ ಏಕಾಂಗಿಯಾಗಿ ಗಯಾ ಜಿಲ್ಲೆಯ ಅತ್ರಿ ಮತ್ತು ವಜೀರ್‌ಗಂಜ್‌ ಎಂಬ ಸ್ಥಳಗಳ ನಡುವೆ ರಸ್ತೆಯನ್ನು ನಿರ್ಮಿಸಿದ್ದ ಸಾಹಸಿ. ಮಾಂಜಿ ಅವರ ಸಾಹಸವನ್ನೇ ನೆನಪಿಸುವ ಕೆಲಸವನ್ನು ಬಿಹಾರದ ಜೆಹಾನಾಬಾದ್‌ ಜಿಲ್ಲೆಯ ಜಾರು ಬನ್ವರಿಯಾ ಗ್ರಾಮದ ಗನೌರಿ ಪಾಸ್ವಾನ್‌ ಎಂಬುವರು ಮಾಡಿದ್ದಾರೆ.

Advertisement

ಎಂಟು ವರ್ಷಗಳ ಕಾಲ ಅವರು ಏಕಾಂಗಿಯಾಗಿ ಗ್ರಾಮದ ಬೆಟ್ಟದಲ್ಲಿ ಇರುವ ಬಾಬಾ ಯೋಗೇಶ್ವರನಾಥ ದೇಗುಲಕ್ಕೆ 400 ಮೆಟ್ಟಿಲುಗಳನ್ನು ನಿರ್ಮಾಣ ಮಾಡಿದ್ದಾರೆ. ದಶರಥ ಮಾಂಜಿಯಂತೆ ಇವರು ಕೂಡ ಸುತ್ತಿಗೆ, ಉಳಿ ಮತ್ತು ಇತರ ಸಲಕರಣೆಗಳ ಜತೆಗೆ ಬೆಟ್ಟ ಕೆತ್ತಿದ್ದಾರೆ. ಮೆಟ್ಟಿಲುಗಳ ನಿರ್ಮಾಣಕ್ಕೆ ಮೊದಲು ಸ್ಥಳೀಯರು ದೇಗುಲಕ್ಕೆ 8 ಗಂಟೆಗಳ ಪ್ರಯಾಣ ಬೇಕಾಗುತ್ತಿತ್ತು.  ಮೆಟ್ಟಿಲು ನಿರ್ಮಾಣ ಕಾರ್ಯ ಮುಕ್ತಾಯವಾಗಿರುವುದರಿಂದ ವೃದ್ಧರಿಗೆ, ಅಶಕ್ತರಿಗೆ ಹಿಂದಿಗಿಂತ ಹೆಚ್ಚು ಸುಲಭವಾಗಿ ದೇಗುಲಕ್ಕೆ ತಲುಪಲು ಸಹಾಯಕವಾಗಿದೆ.

ದೇಗುಲಕ್ಕೆ ಆಗಮಿಸಲು ಗ್ರಾಮದವರಿಗೆ ತೊಂದರೆಯಾಗುತ್ತಿರುವುದನ್ನು ಅರಿತು ಸ್ಫೂರ್ತಿಯಿಂದ ಅದಕ್ಕೆ ಇಳಿದಿದ್ದಾರೆ. ಎಂಟು ವರ್ಷಗಳ ಅವಧಿಯಲ್ಲಿ ಕೆಲವೊಂದು ಬಾರಿ ಏಕಾಂಗಿಯಾಗಿ ಬೆಟ್ಟದ ಕಡಿದಾದ ದಾರಿಯಲ್ಲಿ ಉಳಿ, ಸುತ್ತಿಗೆ ಹಿಡಿದುಕೊಂಡು ಮೆಟ್ಟಿಲುಗಳ ನಿರ್ಮಾಣ ಕಾರ್ಯದಲ್ಲಿ ನಿರತರಾಗುತ್ತಿದ್ದರು. ಇನ್ನೊಂದು ಹಂತದಲ್ಲಿ ಅವರ ಕುಟುಂಬದ ಸದಸ್ಯರು, ಮಿತ್ರರು ಕೆಲಸದಲ್ಲಿ ಕೈಜೋಡಿಸುತ್ತಿದ್ದರು.

ದೇವರ ಆಶೀರ್ವಾದ:

ಎಂಟು ವರ್ಷಗಳ ಅವಧಿಯಲ್ಲಿ 400 ಮೆಟ್ಟಿಲುಗಳನ್ನು ನಿರ್ಮಾಣ ಮಾಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು “ಇಷ್ಟು ವರ್ಷಗಳ ಕಾಲ ನನಗೆ ಕೆಲಸ ಮಾಡಲು ತಾಳ್ಮೆ, ಶಕ್ತಿ ಹೇಗೆ ಬಂದಿತು ಎಂದೇ ಗೊತ್ತಾಗುತ್ತಿಲ್ಲ. ಬಾಬಾ ಬೋಲೇನಾಥನ ಕ್ಷೇತ್ರಕ್ಕೆ ಆಗಮಿಸುವವರಿಗೆ ಉತ್ತಮ ರೀತಿಯ ದಾರಿಯ ನಿರ್ಮಾಣವೇ ನನ್ನ ಆದ್ಯತೆಯಾಗಿತ್ತು. ದಿನವಿಡೀ ಬೆಟ್ಟದಲ್ಲಿ ಮೆಟ್ಟಿಲುಗಳ ನಿರ್ಮಾಣ ಮಾಡುವುದರಲ್ಲಿಯೇ ತೊಡಗಿಸಿಕೊಳ್ಳುತ್ತಿದ್ದರೆ. ಇದೆಲ್ಲವೂ ದೇವರ ಆಶೀರ್ವಾದದಿಂದಲೇ ಆಗಿದೆ’ ಎಂದು ಗನೌರಿ ಪಾಸ್ವಾನ್‌ ಹೇಳಿಕೊಂಡಿದ್ದಾರೆ.

Advertisement

ಪಾಸ್ವಾನ್‌ ಅವರು ಟ್ರಕ್‌ ಚಾಲಕನಾಗಿಯೂ ಕೆಲಸ ಮಾಡಿದ್ದಾರೆ. ನಂತರ ಅವರು ಸ್ವಗ್ರಾಮಕ್ಕೆ ಮರಳಿ  ಗಾರೆ ಕಲಸವನ್ನು ಆಯ್ದುಕೊಂಡಿದ್ದರು. ಎಂಟು ವರ್ಷಗಳ ಅವಧಿಯಲ್ಲಿ ಪಾಸ್ವಾನ್‌ ಅವರು, ದೇಗುಲಕ್ಕೆ ಮೆಟ್ಟಿಲುಗಳ ನಿರ್ಮಾಣದ ಅವಧಿಯಲ್ಲಿ ಹಲವಾರು ಪ್ರಾಚೀನ ವಿಗ್ರಹಗಳನ್ನು ಪತ್ತೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

ಏಕಾಂಗಿಯಾಗಿ ಕಾಲುವೆ ನಿರ್ಮಾಣ:

2020ರಲ್ಲಿ ಪಾಟ್ನಾ ಜಿಲ್ಲೆಯ ಕೊಲಿತ್ವಾ ಗ್ರಾಮದ ಲೌಂಗಿ ಭಯ್ನಾ ಅವರು ತಮ್ಮ ಗ್ರಾಮಕ್ಕೆ ಸೂಕ್ತ ನೀರಿನ ವ್ಯವಸ್ಥೆ ಇಲ್ಲದ್ದರಿಂದ ಹೇಗಾದರೂ ಮಾಡಿ ಅದನ್ನು ಕೈಗೆತ್ತಿಕೊಳ್ಳಬೇಕು ಎಂದು ತೀರ್ಮಾನಿಸಿದ್ದರು. ಅದರಂತೆ 2001ರಲ್ಲಿ ಬಗೇತ ಶ್ವಾಹಿ ಎಂಬ ಅರಣ್ಯದಲ್ಲಿರುವ ಜಲ ಮೂಲದಿಂದ ಗ್ರಾಮಕ್ಕೆ ನೀರು ತರುವ ನಿಟ್ಟಿನಲ್ಲಿ 4 ಅಡಿ ಅಗಲ, 3 ಅಡಿ ಆಳದ ಕಾಲುವೆ ನಿರ್ಮಾಣಕ್ಕೆ ಏಕಾಂಗಿಯಾಗಿ ಕೆಲಸ ಶುರು ಮಾಡಿ ಗ್ರಾಮಕ್ಕೆ ನೀರು ತರುವಲ್ಲಿ ಯಶಸ್ವಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next