Advertisement
ಎಂಟು ವರ್ಷಗಳ ಕಾಲ ಅವರು ಏಕಾಂಗಿಯಾಗಿ ಗ್ರಾಮದ ಬೆಟ್ಟದಲ್ಲಿ ಇರುವ ಬಾಬಾ ಯೋಗೇಶ್ವರನಾಥ ದೇಗುಲಕ್ಕೆ 400 ಮೆಟ್ಟಿಲುಗಳನ್ನು ನಿರ್ಮಾಣ ಮಾಡಿದ್ದಾರೆ. ದಶರಥ ಮಾಂಜಿಯಂತೆ ಇವರು ಕೂಡ ಸುತ್ತಿಗೆ, ಉಳಿ ಮತ್ತು ಇತರ ಸಲಕರಣೆಗಳ ಜತೆಗೆ ಬೆಟ್ಟ ಕೆತ್ತಿದ್ದಾರೆ. ಮೆಟ್ಟಿಲುಗಳ ನಿರ್ಮಾಣಕ್ಕೆ ಮೊದಲು ಸ್ಥಳೀಯರು ದೇಗುಲಕ್ಕೆ 8 ಗಂಟೆಗಳ ಪ್ರಯಾಣ ಬೇಕಾಗುತ್ತಿತ್ತು. ಮೆಟ್ಟಿಲು ನಿರ್ಮಾಣ ಕಾರ್ಯ ಮುಕ್ತಾಯವಾಗಿರುವುದರಿಂದ ವೃದ್ಧರಿಗೆ, ಅಶಕ್ತರಿಗೆ ಹಿಂದಿಗಿಂತ ಹೆಚ್ಚು ಸುಲಭವಾಗಿ ದೇಗುಲಕ್ಕೆ ತಲುಪಲು ಸಹಾಯಕವಾಗಿದೆ.
Related Articles
Advertisement
ಪಾಸ್ವಾನ್ ಅವರು ಟ್ರಕ್ ಚಾಲಕನಾಗಿಯೂ ಕೆಲಸ ಮಾಡಿದ್ದಾರೆ. ನಂತರ ಅವರು ಸ್ವಗ್ರಾಮಕ್ಕೆ ಮರಳಿ ಗಾರೆ ಕಲಸವನ್ನು ಆಯ್ದುಕೊಂಡಿದ್ದರು. ಎಂಟು ವರ್ಷಗಳ ಅವಧಿಯಲ್ಲಿ ಪಾಸ್ವಾನ್ ಅವರು, ದೇಗುಲಕ್ಕೆ ಮೆಟ್ಟಿಲುಗಳ ನಿರ್ಮಾಣದ ಅವಧಿಯಲ್ಲಿ ಹಲವಾರು ಪ್ರಾಚೀನ ವಿಗ್ರಹಗಳನ್ನು ಪತ್ತೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ಏಕಾಂಗಿಯಾಗಿ ಕಾಲುವೆ ನಿರ್ಮಾಣ:
2020ರಲ್ಲಿ ಪಾಟ್ನಾ ಜಿಲ್ಲೆಯ ಕೊಲಿತ್ವಾ ಗ್ರಾಮದ ಲೌಂಗಿ ಭಯ್ನಾ ಅವರು ತಮ್ಮ ಗ್ರಾಮಕ್ಕೆ ಸೂಕ್ತ ನೀರಿನ ವ್ಯವಸ್ಥೆ ಇಲ್ಲದ್ದರಿಂದ ಹೇಗಾದರೂ ಮಾಡಿ ಅದನ್ನು ಕೈಗೆತ್ತಿಕೊಳ್ಳಬೇಕು ಎಂದು ತೀರ್ಮಾನಿಸಿದ್ದರು. ಅದರಂತೆ 2001ರಲ್ಲಿ ಬಗೇತ ಶ್ವಾಹಿ ಎಂಬ ಅರಣ್ಯದಲ್ಲಿರುವ ಜಲ ಮೂಲದಿಂದ ಗ್ರಾಮಕ್ಕೆ ನೀರು ತರುವ ನಿಟ್ಟಿನಲ್ಲಿ 4 ಅಡಿ ಅಗಲ, 3 ಅಡಿ ಆಳದ ಕಾಲುವೆ ನಿರ್ಮಾಣಕ್ಕೆ ಏಕಾಂಗಿಯಾಗಿ ಕೆಲಸ ಶುರು ಮಾಡಿ ಗ್ರಾಮಕ್ಕೆ ನೀರು ತರುವಲ್ಲಿ ಯಶಸ್ವಿಯಾಗಿದ್ದರು.